Wednesday, June 7, 2023

Latest Posts

ದಿನಭವಿಷ್ಯ: ಕುಟುಂಬದ ಜೊತೆ ಕಲಹ ಸಾಧ್ಯತೆ, ನಿಮಗೆ ತಾಳ್ಮೆ ಇರಲಿ

ಮೇಷ
ವೃತ್ತಿಯಲ್ಲಿನ ಸವಾಲನ್ನು ಸಮರ್ಥವಾಗಿ ನಿಭಾಯಿಸುವಿರಿ.ಮಾನಸಿಕ ನಿರಾಳತೆ. ಇದರಿಂದ ಕೌಟುಂಬಿಕ ಉದ್ವಿಗ್ನತೆ ಕೂಡಾ ನಿವಾರಣೆ ಕಾಣುವುದು.

ವೃಷಭ
ಧಾರ್ಮಿಕ ವಿಚಾರಗಳು ಹೆಚ್ಚು ಪ್ರಿಯವಾಗುತ್ತವೆ. ಇತರರ ಖಾಸಗಿ ವ್ಯಹಾರದಲ್ಲಿ ಮೂಗು ತೂರಿಸಲು ಹೋಗದಿರಿ.ಅದು ನಿಮಗೆ ಪ್ರತಿಕೂಲವಾದೀತು.

ಮಿಥುನ
ಆರೋಗ್ಯದ ಕುರಿತು ಚಿಂತೆ ಕಾಡಬಹುದು.ಅದರಿಂದ ನಿಮ್ಮ ಭಾವನೆಯ ಮೇಲೆ ಪರಿಣಾಮ.ಇದು ಕೌಟುಂಬಿಕ ಉದ್ವಿಗ್ನತೆ ಸೃಷ್ಟಿಸದಂತೆ ನೋಡಿ.

ಕಟಕ
ನಿಮ್ಮ ಕಾರ್ಯತಂತ್ರ ಯಾರ ಜತೆಗೂ ಹಂಚಿಕೊಳ್ಳದಿರಿ. ನಂಬಿದವರೇ ಮೋಸ ಮಾಡಿಯಾರು. ವಿವೇಚನೆಯಿಲ್ಲದೆ ಹಣ ಹೂಡಬೇಡಿ.

ಸಿಂಹ
ಪ್ರಮುಖ ವಿಷಯದಲ್ಲಿ ಸರಿಯಾದ ನಿರ್ಧಾರ ತಾಳಲಾಗದೆ ದ್ವಂದ್ವ.  ಆಪ್ತರ ಸಲಹೆ ಪಡೆದು ಮುಂದುವರಿಯಿರಿ. ಯಾರನ್ನೋ ಮೆಚ್ಚಿಸಲು ಹೋಗದಿರಿ.

ಕನ್ಯಾ
ಲಾಭವೂ ಇಲ್ಲದ ನಷ್ಟವೂ ಇಲ್ಲದ ದಿನ. ಹಾಗಾಗಿ ಹೊಸ ಯೋಜನೆಗೆ ಕೈ ಹಾಕದಿರಿ.ನೀವು ಬಯಸಿದವರಿಂದ ಮೆಚ್ಚುಗೆ ಪಡೆಯುವಿರಿ.

ತುಲಾ
ಕುಟುಂಬ ಸದಸ್ಯರ ಜತೆ ಹೆಚ್ಚು ಸಮಯ ಕಳೆಯಿರಿ. ಅವರ ಬೇಕುಬೇಡ ಆಲಿಸಿರಿ. ಇದರಿಂದ ಕೌಟುಂಬಿಕ ನೆಮ್ಮದಿ ಮರಳುವುದು. ಉದ್ವಿಗ್ನತೆ ನಿವಾರಣೆ.

ವೃಶ್ಚಿಕ
ವಿದ್ಯಾರ್ಥಿಗಳು ಹೆಚ್ಚಿನ ಏಕಾಗ್ರತೆ ಸಾಧಿಸಬೇಕು.ಇಲ್ಲವಾದರೆ ಒತ್ತಡಕ್ಕೆ ಸಿಲುಕುವಿರಿ. ಪರಿಸ್ಥಿತಿ ಪ್ರತಿಕೂಲವಾಗಿ ತೋರಿದರೂ ನಿಮಗೆ ಹಾನಿ ತಟ್ಟದು.

ಧನು
ಕುಟುಂಬದಲ್ಲಿ ಮಾತಿನ ಕಲಹ ನಡೆದೀತು. ಆದರೆ ಇತರರ ಮಾತನ್ನು ಸಾವಧಾನದಿಂದ ಕೇಳಿದರೆ ಭಿನ್ನಮತ ನಿವಾರಣೆ. ದುಡುಕು ಕೆಟ್ಟದ್ದೆಂದು ಅರಿಯಿರಿ.

ಮಕರ
ಬದುಕಿನ  ಏಕತಾನತೆ ಬೇಸರ ಮೂಡಿಸಬಹುದು. ಬದಲಾವಣೆಗೆ ಹಾತೊರೆಯುವಿರಿ. ಸಮಾನಮನಸ್ಕರಲ್ಲಿ  ಸಾಂತ್ವನ ಸಿಕ್ಕೀತು.

ಕುಂಭ
ಮನೆಯವರಿಗೂ  ನಿಮ್ಮ ಸಮಯ ಮೀಸಲಿಡಿ. ವೃತ್ತಿಯ ಧಾವಂತದಲ್ಲಿ ಕುಟುಂಬ ಮರೆಯದಿರಿ.ಸಣ್ಣ ವಾಗ್ವಾದ ದ್ವೇಷ ಮೂಡಿಸಲು ಅವಕಾಶ ಕೊಡದಿರಿ.

ಮೀನ
ಆರೋಗ್ಯದ ಸಮಸ್ಯೆ ಕಾಣಿಸೀತು. ಸಕಾಲದಲ್ಲಿ ವೈದ್ಯರ ಸಲಹೆ ಪಡೆಯಿರಿ. ಕೌಟುಂಬಿಕ ಭಿನ್ನಮತ ನಿವಾರಣೆ. ಸಾಮರಸ್ಯ ನೆಲೆಸುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!