ಮೇಷ
ನಿಮ್ಮ ಮನಶ್ಯಾಂತಿ ಕೆಡಿಸಿದ್ದ ವಿಷಯವೊಂದು ಇತ್ಯರ್ಥವಾಗುವುದು. ಆರ್ಥಿಕ ಬಿಕ್ಕಟ್ಟು ಪರಿಹಾರ. ಅನಿರೀಕ್ಷಿತ ಸಹಕಾರ ಲಭ್ಯ. ಕೌಟುಂಬಿಕ ಸಮಾಧಾನ.
ವೃಷಭ
ಖಾಸಗಿ ಸಮಸ್ಯೆ ಕಾಡಲಿದೆ. ಪರಿಹಾರ ಸುಲಭವಲ್ಲ. ತಪ್ಪು ಮಾತು ಸಮಸ್ಯೆ ಹೆಚ್ಚಿಸೀತು. ಸಹನೆಯ ನಡೆ, ಹೊಂದಾಣಿಕೆ ಮುಖ್ಯ. ಮಿಥುನ
ಇಂದು ಹೆಚ್ಚುವರಿ ಕೆಲಸ. ಇಷ್ಟವಿಲ್ಲದಿದ್ದರೂ ಮಾಡಲೇಬೇಕು. ದೇಹಸ್ಥಿತಿ ಕಾಪಾಡಲು ವ್ಯಾಯಾಮ ಮಾಡುವುದೊಳಿತು. ಬಂಧು ಜತೆ ಮುನಿಸು.
ಕಟಕ
ನಿಮ್ಮ ಮನಸ್ಸು ಪದೇಪದೇ ಅಸ್ಥಿರತೆ ಅನುಭವಿಸಬಹುದು. ಆತ್ಮೀಯರಿಂದ ಕಡೆಗಣನೆ. ಮನಸ್ಸಿಗೆ ನೋವು. ಹಣದ ಚಿಂತೆ ಕಾಡಬಹುದು.
ಸಿಂಹ
ಅನ್ಯರಿಗೆ ಹಣ ನೀಡುವ ಮುನ್ನ ಯೋಚಿಸಿ. ಇಂದು ಹೊರಹೋಗುವ ಹಣ ಮತ್ತೆ ಕೈಸೇರುವುದು ಕಷ್ಟ. ಮಾತಿನಲ್ಲಿ ತಾಳ್ಮೆಯಿರಲಿ.
ಕನ್ಯಾ
ದೀರ್ಘ ಕಾಲದ ಸಮಸ್ಯೆ ಪರಿಹರಿಸಲು ಯತ್ನಿಸಿ. ಅದನ್ನು ಹಾಗೇ ಬಿಡಬೇಡಿ. ಸಂಗಾತಿ ಜತೆಗಿನ ಬಿಕ್ಕಟ್ಟು ಬಗೆಹರಿಸಿ. ಮುಕ್ತ ಮನಸ್ಸಿರಲಿ.
ತುಲಾ
ನಿಮ್ಮ ಸೂಕ್ಷ್ಮ ನೋಟ ಇತರರ ತಪ್ಪು ಗುರುತಿಸಬಲ್ಲುದು. ಅದುವೇ ಸಂಘರ್ಷ ಸೃಷ್ಟಿಸದಂತೆ ನೋಡಿಕೊಳ್ಳಿ. ಖರೀದಿ ಜೋರು.
ವೃಶ್ಚಿಕ
ದೇಹಾರೋಗ್ಯ ಕಾಪಾಡಲು ಆದ್ಯತೆ ಕೊಡಿ. ನಿರ್ಲಕ್ಷ್ಯ ಬೇಡ. ಕೌಟುಂಬಿಕ ಮನಸ್ತಾಪ ಹೆಚ್ಚದಂತೆ ನೋಡಿಕೊಳ್ಳಿ. ಆರ್ಥಿಕ ಗಳಿಕೆ. ಧನು
ಬಿಡುವಿಲ್ಲದ ದಿನ. ಅತಿಥಿಗಳ ಭೇಟಿ. ವೃತ್ತಿಯಲ್ಲಿ ಏರುಪೇರು ಎದುರಿಸುವಿರಿ. ದುಡುಕಿನ ನಿರ್ಧಾರ ಬೇಡ. ಖರ್ಚು ನಿಯಂತ್ರಿಸಿರಿ.
ಮಕರ
ಏಕತಾನತೆ ನಿಮಗಿಷ್ಟವಿಲ್ಲ. ಹೊಸತನಕ್ಕೆ ತುಡಿಯುವಿರಿ. ಕೆಲವರ ವರ್ತನೆ ಕಿರಿಕಿರಿ ತರಲಿದೆ. ಉದ್ಯೋಗದಲ್ಲಿ ಉನ್ನತಿ. ತೊಡಕು ನಿವಾರಣೆ.
ಕುಂಭ
ಸುತ್ತಲಿನ ವ್ಯಕ್ತಿಗಳ ಜತೆ ಹೊಂದಾಣಿಕೆ ಇರಲಿ. ಸಣ್ಣ ಮಾತು ಅಶಾಂತಿ ಸೃಷ್ಟಿಸೀತು. ಆಪ್ತರ ಜತೆ ಕಾಲ ಕಳೆಯುವ ಅವಕಾಶ ತಪ್ಪಿಸದಿರಿ.
ಮೀನ
ಆತ್ಮೀಯರ ಭಾವನೆಗೂ ಬೆಲೆ ಕೊಡಿ. ಅವರ ಮಾತು ಲಘುವಾಗಿ ಪರಿಗಣಿಸದಿರಿ. ಕೆಲ ವಿಷಯ ಗಂಭೀರವಾಗಿ ತೆಗೆದುಕೊಳ್ಳಬೇಕು.
ದಿನಭವಿಷ್ಯ: ಸುತ್ತಲಿರುವ ವ್ಯಕ್ತಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಿ, ಇದು ನಿಮಗೇ ಒಳ್ಳೆಯದು
