Sunday, November 16, 2025

ದಿನಭವಿಷ್ಯ: ಉದ್ಯೋಗಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿ ಶೀಘ್ರವೇ ಬರಲಿದೆ

ಮೇಷ
ಆರೋಗ್ಯ ಸುಧಾರಣೆ. ಮಾಡಬೇಕಾದ ಕಾರ್ಯ ಮಾಡಿ ಮುಗಿಸಿ. ವಿಳಂಬ ಸಲ್ಲದು. ಕೌಟುಂಬಿಕ ಕಾರ್ಯಕ್ಕೆ ಸಮಯ ಕೊಡಿ. ವೃತ್ತಿಯಲ್ಲಿ ಸಮಾಧಾನ.
ವೃಷಭ
ಉದ್ಯೋಗಕ್ಕೆ ಸಂಬಂಧಿಸಿ ಶುಭ ಬೆಳವಣಿಗೆ. ಶಾಂತಚಿತ್ತತೆ ಕಾಪಾಡಿಕೊಳ್ಳಿ. ಸಣ್ಣ ವಿಷಯಕ್ಕೆ ಉದ್ವಿಗ್ನ ಗೊಳ್ಳದಿರಿ. ಆರೋಗ್ಯ ಪರಿಸ್ಥಿತಿ ಸುಸ್ಥಿರ, ಸಮಾಧಾನಕರ.
ಮಿಥುನ
ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಜತೆ ಆಪ್ತ ಸಮಯ ಕಳೆಯಲು ಅವಕಾಶ ಸಿಗಲಿದೆ. ಹಣಕ್ಕೆ ಸಂಬಂಽಸಿ ಪೂರಕ ಬೆಳವಣಿಗೆ.
ಕಟಕ
ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗುವಿರಿ. ವೃತ್ತಿಯಲ್ಲಿ ನಿಮಗೆ ಅನುಕೂಲವಾಗಲಿದೆ. ಸಾಕಷ್ಟು ನೀರು ಕುಡಿಯಿರಿ, ಆರೋಗ್ಯ ಕಾಪಾಡಿ.
ಸಿಂಹ
ನಿಮ್ಮ ಕೋಪತಾಪ ನಿಯಂತ್ರಿಸಿ. ಇಲ್ಲವಾದರೆ ಸಂಘರ್ಷ ಉಂಟಾದೀತು. ನಿಮ್ಮ ಬದುಕಲ್ಲಿ ಹಸ್ತಕ್ಷೇಪ ನಡೆಸಲು ಅನ್ಯರಿಗೆ ಅವಕಾಶ ಕೊಡಬೇಡಿ.
ಕನ್ಯಾ
ಅಽಕ ಕೆಲಸದಿಂದ ಹೆಚ್ಚು ಒತ್ತಡ. ಇತರರ ಸಹಾಯ ಕೇಳಲು ಹಿಂಜರಿಕೆ ಬೇಡ. ಕೌಟುಂಬಿಕ ಕಲಹಕ್ಕೆ ಆಸ್ಪದ ಕೊಡಬೇಡಿ.
ತುಲಾ
ಖರ್ಚುವೆಚ್ಚದ ಮೇಲೆ ನಿಯಂತ್ರಣವಿಡಿ. ಅನ್ಯರ ಬೇಡಿಕೆ ಈಡೇರಿಸಲು ನಿಮ್ಮ ಹಣ ವಿನಿಯೋಗಿಸುವಿರಿ. ಕೌಟುಂಬಿಕ ವಾಗ್ವಾದ.
ವೃಶ್ಚಿಕ
ಸಹೋದ್ಯೋಗಿಗಳು ನಿಮ್ಮ ಕೆಲಸದ ಕುರಿತು ಕೊಂಕು ತೆಗೆದಾರು. ಅವರನ್ನು ಮೆಚ್ಚಿಸುವ ಪ್ರಯತ್ನಕ್ಕೆ ಹೋಗದಿರಿ. ನಿಮ್ಮ ಕಾರ್ಯ ನಡೆಸಿ.
ಧನು
ಕೌಟುಂಬಿಕ ಕಟ್ಟುಪಾಡು ಆದ್ಯತೆ ಪಡೆಯುತ್ತದೆ. ಇತರ ವಿಷಯಗಳತ್ತ ಗಮನ ಹರಿಸಲು ವೇಳೆ ಸಾಲದು. ವೃತ್ತಿಯಲ್ಲಿ  ಕಿರುಕುಳ.
ಮಕರ
ವ್ಯಕ್ತಿಯೊಬ್ಬರ ಆಕರ್ಷಣೆಗೆ ಒಳಗಾಗುವ ಸಾಧ್ಯತೆ. ಭಾವನೆ ಸಿಕ್ಕಾಬಟ್ಟೆ ಹರಿಯಬಿಡಬೇಡಿ. ಸ್ವನಿಯಂತ್ರಣ ಅವಶ್ಯ. ಶಿಸ್ತಿಗೆ ಗಮನ ಕೊಡಿ.
ಕುಂಭ
ಭಾವನಾತ್ಮಕ ಏರುಪೇರು. ಯಾರದೋ ಮಾತು ಮನಸ್ಸಿಗೆ ನೋವು ತರಬಹುದು. ಸ್ಥಿತಪ್ರಜ್ಞತೆ ಬೆಳೆಸಿಕೊಳ್ಳಿ. ಉದ್ಯಮದಲ್ಲಿ ಯಶ.
ಮೀನ
ಕಠಿಣ ದುಡಿಮೆ, ಉತ್ತಮ ಪ್ರತಿಫಲ. ಇದನ್ನು ನೀವು ಅರಿಯಬೇಕು. ಪ್ರಯತ್ನಿಸದೇ ಫಲ ಪಡೆಯಲು ಯತ್ನಿಸದಿರಿ. ಕೌಟುಂಬಿಕ ಸಂಘರ್ಷ.

error: Content is protected !!