Sunday, June 4, 2023

Latest Posts

ದಿನಭವಿಷ್ಯ : ನಿಮ್ಮ ವಿರುದ್ಧ ಕೆಲವರು ಕಾರ್ಯಾಚರಿಸುವರು, ಆತುರದಿಂದ ಪ್ರತಿಕ್ರಿಯೆ ತೋರಬೇಡಿ

ಮೇಷ
ನಿಮಗಿಂದು ಮಹತ್ವದ ದಿನ. ವೈಯಕ್ತಿಕ ಬದುಕಿನಲ್ಲಿ ಪ್ರಮುಖ ಬೆಳವಣಿಗೆ ಸಂಭವಿಸುವುದು. ಕೌಟುಂಬಿಕ ಕಾರ್ಯದಲ್ಲಿ ವ್ಯಸ್ತ.

ವೃಷಭ
ನಿಮಗೆ ವಿರುದ್ಧವಾಗಿ ಕಾರ್ಯಾಚರಿಸುವ ಜನರೊಂದಿಗೆ ಜಾಣತನದಿಂದ ವರ್ತಿಸಿ. ಸಂಘರ್ಷಕ್ಕಿಂತ ರಾಜತಾಂತ್ರಿಕ ನಡೆ ಸೂಕ್ತವಾದೀತು.

ಮಿಥುನ
ನಿಮ್ಮ ಪಾಲಿಗೆ ಪ್ರತಿಕೂಲ ಎನ್ನಬಹುದಾದ ಬೆಳವಣಿಗೆ ಸಂಭವಿಸಬಹುದು. ಆತುರದ ನಿರ್ಧಾರ ಬೇಡ. ಸಾವಕಾಶವಾಗಿ ಯೋಚಿಸಿ, ಪ್ರತಿಕ್ರಿಯಿಸಿ.

ಕಟಕ
ಇತರರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ನಿಮ್ಮ ಸಾಮರ್ಥ್ಯ ನಿಮಗೆ ಒಳಿತು ತರಲಿದೆ. ನಿಮಗೆ ಆಗಬಹುದಾದ ಹಾನಿಯನ್ನು ತಪ್ಪಿಸಿಕೊಳ್ಳುವಿರಿ.

ಸಿಂಹ
ಮಾನಸಿಕ ಅಶಾಂತಿ. ಅಧಿಕ ಅಸಹನೆ. ಹಾಗೆಂದು ದೈನಂದಿನ ಕಾರ್ಯಗಳಿಗೆ ತೊಂದರೆಯಾಗದು. ಇದು ತಾತ್ಕಾಲಿಕ ಸ್ಥಿತಿ, ಎಲ್ಲ ಸರಿಯಾಗುವುದು.

ಕನ್ಯಾ
ಕೌಟುಂಬಿಕ ಬಿಕ್ಕಟ್ಟು ಉಂಟಾಗುವುದು. ಈ ಬಗ್ಗೆ ಅತಿಯಾದ ಚಿಂತೆ ಬೇಡ. ಬೇಗನೆ ಎಲ್ಲ ಸುಸೂತ್ರವಾಗುವುದು. ಕಠಿಣ ಕ್ರಮ ತೆಗೆದುಕೊಳ್ಳದಿರಿ.

ತುಲಾ
ಇಂದು ಸಮಸ್ಯೆ ಎದುರಿಸುವಿರಿ. ಅದನ್ನು ಎದುರಿಸಲು ಸಿದ್ಧರಾಗಿ. ಆದರೆ ಇತರರಿಗೆ ಹಾನಿ ತರುವಂತಹ ಕ್ರಮಕ್ಕೆ ಹೋಗದಿರಿ. ವಿವೇಕವಿರಲಿ.

ವೃಶ್ಚಿಕ
ಆಪ್ತರ ಜತೆ ತಪ್ಪಭಿಪ್ರಾಯ ಉಂಟಾದೀತು. ಅದನ್ನು ಸೌಹಾರ್ದದಿಂದ ಪರಿಹರಿಸಿಕೊಳ್ಳಿ. ಇತರರು ಹೇಳುವ ವದಂತಿ, ಚಾಡಿಮಾತು ನಂಬದಿರಿ.

ಧನು
ಯಾವುದೇ ಕೆಲಸ ಅರ್ಧಕ್ಕೆ ಬಿಡಬೇಡಿ. ನಿಮ್ಮ ಕೆಲವು ಆಕಾಂಕ್ಷೆ ನಿಯಂತ್ರಿಸ ಬೇಕಾದೀತು. ಬಂಧುಗಳಿಂದ ಉತ್ತಮ ಸಹಕಾರ ಪಡೆಯುವಿರಿ.

ಮಕರ
ಯಾವುದೇ ವಿಷಯದಲ್ಲಿ ಧಾವಂತ ಬೇಡ. ಕೆಲವೊಮ್ಮೆ ಆಮೆಯ ನಿಧಾನ ನಡಿಗೆಯೇ ಹೆಚ್ಚು ಫಲ ನೀಡುವುದು. ಆರ್ಥಿಕ ಸುಧಾರಣೆ.

ಕುಂಭ
ನಿಮ್ಮ ವಿರುದ್ಧ ಕೆಲವರು ಕಾರ್ಯಾಚರಿಸುವರು. ಆತುರದಿಂದ ಪ್ರತಿಕ್ರಿಯೆ ತೋರಬೇಡಿ. ಕೌಟುಂಬಿಕ ಏರುಪೇರು ಸಂಭವ. ಸಹನೆ ಕಳಕೊಳ್ಳದಿರಿ.

ಮೀನ
ಗ್ರಹಗಳು ನಿಮಗೆ ಪೂರಕವಾಗಿವೆ. ಮನೆ ಮತ್ತು ವೃತ್ತಿಯಲ್ಲಿ ನಿಮಗೆ ಪೂರಕ ಬೆಳವಣಿಗೆ. ಆಪ್ತರ ಸಂಗದಲ್ಲಿ ಸಂತೋಷ ಅನುಭವಿಸುವಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!