Saturday, November 22, 2025

ದಿನಭವಿಷ್ಯ: ಇತರರ ಟೀಕೆಗೆ ವ್ಯಕ್ತವಾಗುವಂತಹ ಕೆಲಸ ಮಾಡಿಕೊಳ್ಳಬೇಡಿ, ಇಂದು ಸುದಿನ

ಮೇಷ
ಯಾರಾದರೂ ಒಡ್ಡುವ ಪ್ರಲೋಭನೆಗೆ  ಬಲಿಯಾಗದಿರಿ. ಅದರಿಂದ ಒಳಿತಾಗದು. ಆಪ್ತರೊಡನೆ ಮನಸ್ತಾಪ ಸಂಭವ. ಕೋಪ ಬಿಡಿ.  
ವೃಷಭ
ಇಲ್ಲದ ಸಮಸ್ಯೆ ಕಲ್ಪಿಸಿಕೊಂಡು ಕೊರಗುವಿರಿ. ವಾಸ್ತವ ಏನೆಂದು ಅರಿತು ವ್ಯವಹರಿಸಿ. ಭಾವುಕತೆ ನಿಯಂತ್ರಿಸಿಕೊಳ್ಳಿ.   ಮಿಥುನ
ನಿಮ್ಮ  ಕಾರ್ಯಕ್ಕೆ ವಿಘ್ನ ತಲೆದೋರೀತು. ಸಮಾಧಾನದಿಂದ ವ್ಯವಹರಿಸಿ. ದುಡುಕಿನ ನಿರ್ಧಾರ ತಾಳದಿರಿ. ಸಣ್ಣ ವಿಷಯಕ್ಕೆ ಕಲಹ ಸಂಭವ.  
ಕಟಕ
ಪ್ರಮುಖ ವ್ಯವಹಾರ ಎಚ್ಚರದಿಂದ ನಿಭಾಯಿಸಿ. ಅಸಹನೆ, ಒತ್ತಡ ಅಽಕ. ಇತರರ ಮೇಲೆ ರೇಗಿ ಮನಸ್ಸು ಹಾಳು ಮಾಡಿಕೊಳ್ಳದಿರಿ.    
ಸಿಂಹ
 ಸಮಸ್ಯೆಗೆ ಇನ್ನೂ ಪರಿಹಾರ ಕಾಣದೆ ಚಿಂತೆ.  ನಿಮಗೆ ಕಿರಿಕಿರಿ ತರುವ ವ್ಯಕ್ತಿಗಳಿಂದ ದೂರವಿರಿ.  ಖಾಸಗಿ ಸಂಬಂಧದಲ್ಲಿ ಭಾವನಾತ್ಮಕ ಸಂಘರ್ಷ.
ಕನ್ಯಾ
ಇತರರ ಟೀಕೆಗೆ ಗುರಿಯಾಗುವಂತೆ ವರ್ತಿಸಬೇಡಿ. ಪ್ರಾಮಾಣಿಕವಾಗಿರಿ. ಸಂಬಂಧದಲ್ಲಿ ಮೂಡಿದ ಬಿರುಕು ಶಮನ.  
 ತುಲಾ
ನಿಮ್ಮ ನಿಲುವಿನಲ್ಲಿ  ಬದಲಾವಣೆ ತರಲು ಹೋಗದಿರಿ. ಕಾಡುತ್ತಿದ್ದ ವಿಚಾರದಲ್ಲಿ ಕಹಿಸತ್ಯವು ಗೋಚರಿಸಬಹುದು. ಬಂಧು ಮನಸ್ತಾಪ.
ವೃಶ್ಚಿಕ
 ನೀವಿಂದು ಯಾರ ಜತೆಗೂ ಬೆರೆಯದೆ ಏಕಾಂಗಿಯಾಗಿರಲು ಬಯಸುವಿರಿ. ಮಾನಸಿಕ  ತುಮುಲ ಅದಕ್ಕೆ ಕಾರಣ. ಸಂಯಮ ಅವಶ್ಯ.  
ಧನು
ವೃತ್ತಿ ಕ್ಷೇತ್ರದಲ್ಲಿ ಎಲ್ಲವೂ ಸುಗಮವಾಗಿ ಸಾಗುವುದು. ಯಾವುದೇ ಅಡ್ಡಿ ಆತಂಕ ಬಾಽಸದು. ಆರ್ಥಿಕ ಬಿಕ್ಕಟ್ಟು ನಿವಾರಣೆ, ಧನಪ್ರಾಪ್ತಿ.        
ಮಕರ
ಸಲ್ಲದ ವ್ಯವಹಾರಕ್ಕೆ ಕೈಹಾಕಿ ಕೈ ಸುಟ್ಟುಕೊಳ್ಳದಿರಿ. ನಿಮಗೆ ಒಗ್ಗುವ ವಿಷಯ ಮಾತ್ರ ನೋಡಿಕೊಳ್ಳಿ. ಕೌಟುಂಬಿಕ ಸಮಸ್ಯೆ ಪರಿಹಾರಕ್ಕೆ ಗಮನ ಕೊಡಿ.    
ಕುಂಭ
ಹೊಸ ಸಾಹಸಕ್ಕೆ ಮುಂದಾಗುವುದಕ್ಕಿಂತ ತಿಳಿದಿರುವ ಕ್ಷೇತ್ರದಲ್ಲೆ ವ್ಯವಹರಿಸುವುದು ಒಳಿತು. ಪ್ರೇಮದ ವಿಚಾರದಲ್ಲಿ ಮಹತ್ವದ ಬೆಳವಣಿಗೆ.
ಮೀನ
ಇಂದಿನ ದಿನ ನಿಮಗೆ ಅನುಕೂಲಕರ. ಆಪ್ತರ ಸಲಹೆಗಳು ನಿಮಗೆ ಒಳಿತು ತರಲಿವೆ. ಮನೆಯಲ್ಲಿ ಮೂಡಿದ್ದ ಅಶಾಂತ ಪರಿಸ್ಥಿತಿ ನಿವಾರಣೆ.

error: Content is protected !!