ದಿನಭವಿಷ್ಯ: ಹಣಕಾಸಿಗೆ ಸಂಬಂಧಿಸಿದ ದೊಡ್ಡ ನಿರ್ಧಾರಕ್ಕೆ ಇಂದು ಸೂಕ್ತ ದಿನವಲ್ಲ

ಮೇಷ
ಪ್ರತಿಯೊಂದರಲ್ಲೂ ಶಾಂತವಾಗಿ ಆಲೋಚಿಸಿ  ಮುಂದಿನ ಕ್ರಮ ತೆಗೆದುಕೊಳ್ಳಿ. ಇಂದು ಏಕಾಂತವನ್ನು ಹೆಚ್ಚು ಬಯಸುವಿರಿ. ಆರೋಗ್ಯ ಸಮಸ್ಯೆ ಕಾಡಬಹುದು.

ವೃಷಭ
ಸವಾಲಿಗೆ ಅಂಜದಿರಿ. ಅದನ್ನು ಧೈರ್ಯದಿಂದ ಎದುರಿಸಿ. ನಿಮ್ಮ ಮೇಲೆ ಆತ್ಮವಿಶ್ವಾಸವಿರಲಿ. ನೆಗೆಟಿವ್ ಚಿಂತನೆ ತುಂಬುವ ಜನರಿಂದ ದೂರವಿರಿ.

ಮಿಥುನ
ಕೆಲಸ ಸಫಲವಾಗುವುದೆ ಎಂಬ ಅನುಮಾನ ಬೇಡ.  ನಿಮ್ಮ ಕಾರ್ಯ ಯಶ ಕಾಣುವುದು. ಮಾನಸಿಕ ಉದ್ವಿಗ್ನತೆ ಶಮನಕ್ಕೆ ಯೋಗ, ಧ್ಯಾನ ಸಹಕಾರಿಯಾದೀತು.

ಕಟಕ
ವೃತ್ತಿಯಲ್ಲಿ ಏರುಪೇರಿನ ಬೆಳವಣಿಗೆ. ನಿಮ್ಮ ಅನುಭವದಿಂದ   ಅದನ್ನು ನಿಭಾಯಿಸುವಿರಿ. ಹಣದ ಕುರಿತು ಚಿಂತೆ ಮೂಡಿದರೂ, ಬಳಿಕ ಪರಿಹಾರ ಸಿಗುವುದು.

ಸಿಂಹ
ಬಂಧುಗಳೊಂದಿಗೆ ಸಂಘರ್ಷ ನಡೆದೀತು. ಅದನ್ನು ಮುಂದುವರಿಯಲು ಬಿಡದೆ ಸಂಧಾನಕ್ಕೆ ಆದ್ಯತೆ ಕೊಡಿ. ಆರ್ಥಿಕ ಒತ್ತಡ ಹೆಚ್ಚು.

ಕನ್ಯಾ
ನಿಮ್ಮ ಕೆಲಸವನ್ನು ಇಂದು ಪೂರೈಸಲು ವಿಫಲರಾಗುವಿರಿ. ಹಣಕಾಸಿಗೆ ಸಂಬಂಧಿಸಿ ಇಂದು ಪ್ರಮುಖ ನಿರ್ಧಾರ ತಾಳದಿರಿ. ಕೌಟುಂಬಿಕ ಒತ್ತಡ.

ತುಲಾ
ಕಾರ್ಯದಲ್ಲಿ ಪ್ರಮಾದ ಉಂಟಾದೀತು. ಎಚ್ಚರಿಕೆಯಿಂದ ನಿರ್ವಹಿಸಿ. ಪ್ರಮುಖ ವಿಷಯದಲ್ಲಿ ದ್ವಂದ್ವ , ಗೊಂದಲ ಕಾಡುವುದು. ಸಹಕಾರ ಪಡೆಯಿರಿ.

ವೃಶ್ಚಿಕ
ನಿಮ್ಮ ಪ್ರಾಮಾಣಿಕತೆ ಕೆಲವರಿಗೆ ಸಹ್ಯವಾಗದು. ಅವರಿಂದ ಟೀಕೆ ಎದುರಿಸುವಿರಿ. ಪ್ರತಿಕೂಲ ಪರಿಸ್ಥಿತಿ ಒದಗಿದರೂ ಅದನ್ನು ಶಾಂತವಾಗಿ ಎದುರಿಸಿರಿ.

ಧನು
ಆರ್ಥಿಕವಾಗಿ ಉತ್ತಮ ದಿನ. ಆದರೆ ಅನವಶ್ಯವಾಗಿ ಖರ್ಚು ಮಾಡದಿರಿ. ಕುಟುಂಬ ಸದಸ್ಯರ ಜತೆ ಭಿನ್ನಾಭಿಪ್ರಾಯ ಉಂಟಾದೀತು.

ಮಕರ
ಆತ್ಮೀಯರ ಭಾವನೆಗೆ ಸ್ಪಂದಿಸಿರಿ. ಅವರನ್ನು ನಿರ್ಲಕ್ಷಿಸದಿರಿ. ಆರ್ಥಿಕವಾಗಿ ನಿಮಗೆ ಇಂದು ಒಳ್ಳೆಯ ದಿನ. ವ್ಯವಹಾರದಲ್ಲಿ ಯಶಸ್ಸು ಸಿಗುವುದು.

ಕುಂಭ
ದೈನಂದಿನ ವ್ಯವಹಾರದಲ್ಲಿ ಭಾರೀ ಬದಲಾವಣೆ ಮಾಡಲು ಹೋಗಬೇಡಿ. ಆರ್ಥಿಕ ಪ್ರಗತಿ. ಬಂಧುಗಳಿಂದ ಸಹಕಾರ. ಕೌಟುಂಬಿಕ ಸಮಸ್ಯೆ ಪರಿಹಾರ.

ಮೀನ
ಎಲ್ಲರ ಬೇಡಿಕೆಗಳಿಗೆ ಸ್ಪಂದಿಸುವ ನಿಮ್ಮ ಸ್ವಭಾವವು ಇತರರ ಮೆಚ್ಚುಗೆ ಗಳಿಸಲಿದೆ. ಆದರೆ ನಿಮ್ಮ ಹಿತಾಸಕ್ತಿ ಮರೆಯದಿರಿ. ಅದನ್ನು ಕಡೆಗಣಿಸಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!