Wednesday, December 17, 2025

ದಿನಭವಿಷ್ಯ: ಇಂದು ಮನಸ್ಸು ಉಲ್ಲಾಸದಾಯಕವಾಗಿರಲಿದೆ, ನಿಮ್ಮ ನಿರ್ಧಾರ ಸರಿಯಾಗಿದೆ!

ಮೇಷ.
ಮಾಡಿದ ಕೆಲಸದ ಪರಾಮರ್ಶೆ ನಡೆಸಿ. ಇನ್ನಷ್ಟು ಉತ್ತಮ ದಾರಿ ತೋರಬಹುದು. ಟೀಕೆ ಯನ್ನು ಸವಾಲಾಗಿ ಸ್ವೀಕರಿಸಿ. ಧನವ್ಯಯ.  
ವೃಷಭ
ಮನೆ, ವೃತ್ತಿ ಎಲ್ಲ ಕಡೆ ಇತರರ ಒತ್ತಡಕ್ಕೆ ಗುರಿ ಆಗುವಿರಿ. ನಿಮ್ಮ ನಿಲುವಿಗೆ ಯಾರೂ ಮನ್ನಣೆ ಕೊಡುವುದಿಲ್ಲ. ಮನಸ್ಸು ಕುಂದಬಹುದು.    
ಮಿಥುನ
ಪಾಸಿಟಿವ್ ಚಿಂತನೆ ಬಿಡಬೇಡಿ. ಹಿನ್ನಡೆ ಕಂಡರೂ ಬೇಗ ಸುಧಾರಣೆ ಕಾಣುವಿರಿ.  ಪ್ರೀತಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳ ಬೇಡ.  
ಕಟಕ
ಇತರರು ನಿಮ್ಮ ಮೇಲೆ ಸವಾರಿ ಮಾಡಲು ಅವಕಾಶ ಕೊಡಬೇಡಿ. ದೃಢ ನಿಲುವು ತಳೆಯಿರಿ. ಆರ್ಥಿಕ ಬಿಕ್ಕಟ್ಟು ಸಂಭವ. ನೆರವು ಸಿಗಲಾರದು.  
ಸಿಂಹ
ಸಂತೋಷದ ಮನಸ್ಥಿತಿ. ನಿಮ್ಮ ನಿರ್ಧಾರ ದೀರ್ಘಾವಧಿಯಲ್ಲಿ ಫಲ ನೀಡಲಿದೆ. ಮನೆಯಲ್ಲಿ ಸಾಮರಸ್ಯ, ವಿರಸ ಶಮನ. ಧನಪ್ರಾಪ್ತಿಯ ಅವಕಾಶ.
ಕನ್ಯಾ
ಇತರರ ವಿವಾದ ಪರಿಹರಿಸುವ ಹೊಣೆ ಬಿದ್ದೀತು. ನಿಮ್ಮ ಹೆಸರು ಕೆಡಿಸಿಕೊಳ್ಳದಿರಿ. ಆಪ್ತ ಬಂಧುವಿನ ಟೀಕೆ ಎದುರಿಸುವಿರಿ.  
ತುಲಾ
ಆರ್ಥಿಕ, ಖಾಸಗಿ, ಸಾಮಾಜಿಕ ಬದ್ಧತೆ ಪೂರೈಸಲು ಗಮನ ಕೊಡಿ. ಹಲವರಿಗೆ ನೆರವಾಗುವಿರಿ. ಬಿಡುವಿಲ್ಲದ ಕಾರ್ಯ, ಆರೋಗ್ಯ ಮರೆಯದಿರಿ.
ವೃಶ್ಚಿಕ
ಸಮಸ್ಯೆಯ ಭಾರ. ತಾರ್ಕಿಕವಾಗಿ ಯೋಚಿಸಲು ಅಸಮರ್ಥ. ಆಪ್ತರು ಕೂಡ ನೆರವಿಗೆ ಬರಲಾರರು. ಶಾಂತಚಿತ್ತರಾಗಿ ಯೋಚಿಸಲು ಕಲಿಯಿರಿ.  
ಧನು
ಮನಸ್ಸಾಕ್ಷಿಗೆ ತಕ್ಕಂತೆ ನಡಕೊಳ್ಳಿ. ಅದುವೇ ನಿಮ್ಮನ್ನು ಸಮಸ್ಯೆಯಿಂದ ಪಾರು ಮಾಡಬಲ್ಲುದು. ಆರೋಗ್ಯ ಸಮಸ್ಯೆ ಕಾಡಬಹುದು.
ಮಕರ
ಆತ್ಮೀಯರ ವಿಶ್ವಾಸ ಕಳಕೊಳ್ಳಬೇಡಿ. ಅವರ ಹಿತಕ್ಕೂ ಗಮನ ಕೊಡಿ. ಆರ್ಥಿಕ ಯೋಜನೆ ಉತ್ತಮ ಫಲ ನೀಡಲಿದೆ. ಆರೋಗ್ಯ ಸುಸ್ಥಿರ.  
ಕುಂಭ
ಕಷ್ಟವೆನಿಸಿದ ಕಾರ್ಯ ಸುಲಭದಲ್ಲಿ ಕೈಗೂಡಲಿದೆ. ನಿರಾಳತೆ. ಸಂಬಂಧದಲ್ಲಿ ಏರುಪೇರು ಉಂಟಾದರೂ ಬಳಿಕ ಸರಿಯಾಗಲಿದೆ.  
 ಮೀನ
ಖಾಸಗಿ ಬದುಕು ಮತ್ತು ವೃತ್ತಿ ಮಧ್ಯೆ ಸಮತೋಲನ ಸಾಽಸಿ. ಹೃದಯದ ಭಾವಕ್ಕೆ ಸ್ಪಂದಿಸಿ. ಎಲ್ಲವನ್ನು ತರ್ಕದಿಂದ ಅಳೆಯದಿರಿ.

error: Content is protected !!