ಬುಧವಾರ, 27 ಅಕ್ಟೋಬರ್ 2021
ಮೇಷ
ಕೆಲವು ಹೇಳಲಾಗದ ಆತಂಕಗಳು ಕಾಡುತ್ತವೆ. ಅವನ್ನು ಸರಿಯಾಗಿ ಅರ್ಥೈಸಿ ಪರಿಹಾರ ಕಂಡುಕೊಳ್ಳಿ. ಆಪ್ತರ ನೆರವು ನಿಮಗೆ ದೊರಕಲಾರದು.
ವೃಷಭ
ಒಳ್ಳೆ ಫಲಿತಾಂಶ ಸಿಗಬೇಕಾದರೆ ನೀವು ದಿಟ್ಟತನ ಪ್ರದರ್ಶಿಸ ಬೇಕು. ಇತರರಿಂದ ಕೆಲಸ ತೆಗೆಯಲು ಕಲಿಯಬೇಕು. ಆರ್ಥಿಕ ಒತ್ತಡ ಕಾಡುವುದು.
ಮಿಥುನ
ಅನಪೇಕ್ಷಿತ ಬೆಳವಣಿಗೆ ಇಲ್ಲದ ಸಹಜ ಸಾಧಾರಣ ದಿನ. ಎಲ್ಲವೂ ವಿಘ್ನಗಳಿಲ್ಲದೆ, ಏರುಪೇರುಗಳಿಲ್ಲದೆ ಸಾಗುವುದು. ಕೌಟುಂಬಿಕ ನೆಮ್ಮದಿ.
ಕಟಕ
ವೈಯಕ್ತಿಕ ಬದುಕಿನಲ್ಲಿ ಪ್ರಮುಖ ನಿರ್ಧಾರ ತಾಳಬೇಕಾದ ಪ್ರಸಂಗ. ಇತರರ ಒತ್ತಡಕ್ಕೆ ಮಣಿಯಬೇಡಿ. ಒಳಿತು ಕೆಡುಕು ವಿವೇಚಿಸಿ ನಿರ್ಧಾರ ತಾಳಿ.
ಸಿಂಹ
ಪ್ರೀತಿಯ ವ್ಯಕ್ತಿಯ ಸಂಗದಲ್ಲಿ ಅಥವಾ ಅಚ್ಚುಮೆಚ್ಚಿನ ವಿಷಯದಲ್ಲಿ ಇಂದು ಮಗ್ನರಾಗುತ್ತೀರಿ. ಇತರ ಕಾರ್ಯಗಳನ್ನು ಕಡೆಗಣಿಸಬೇಡಿ.
ಕನ್ಯಾ
ದಿನವಿಡೀ ಏನಾದ ರೊಂದು ಕೆಲಸ ಮಾಡ
ಬೇಕಾಗುತ್ತದೆ. ವಿರಾಮ ಕಡಿಮೆ. ಕೌಟುಂಬಿಕ ಒತ್ತಡ ಗಳೂ ಕಾಡುತ್ತವೆ. ಆರ್ಥಿಕವಾಗಿ ನಷ್ಟ.
ತುಲಾ
ಆಪ್ತರ ಜತೆ ಸಣ್ಣಪುಟ್ಟ ಮನಸ್ತಾಪ ಉಂಟಾದೀತು. ಅದು ಉಲ್ಬಣಗೊಳ್ಳಲು ಅವಕಾಶ ಕೊಡದಿರಿ. ಸಂಧಾನಾತ್ಮಕ ಪರಿಹಾರ ಒಳ್ಳೆಯದು.
ವೃಶ್ಚಿಕ
ಕೆರಿಯರ್ಗೆ ಸಂಬಂಸಿದ ವಿಷಯ ಹಾಗೂ ಹಣದ ವಿಚಾರಗಳು ದಿನವಿಡೀ ನಿಮ್ಮನ್ನು ಆವರಿಸುತ್ತದೆ. ವೃತ್ತಿಯಲ್ಲಿ ಕೆಲವು ಹೊಸ ಒತ್ತಡಗಳು.
ಧನು
ಗತವೈಭವ ನೆನೆದು ಸಂತೋಷ ಪಡುವುದರಿಂದ ಫಲವಿಲ್ಲ. ಈಗ ನೀವು ಸಾಧನೆ ಮಾಡುವುದು ಮುಖ್ಯ. ಉದಾಸೀನತೆ ತ್ಯಜಿಸಿ.
ಮಕರ
ಖಾಸಗಿ ಜೀವನದಲ್ಲಿ ದಿಟ್ಟ ನಿರ್ಧಾರ ತಾಳಬೇಕಾದೀತು. ಇದು ಕೌಟುಂಬಿಕವಾಗಿ ಅಸಮಾಧಾನ ಸೃಷ್ಟಿಸಬಹುದು. ಆರ್ಥಿಕ ಬಿಕ್ಕಟ್ಟು.
ಕುಂಭ
ಉದ್ಯಮದಲ್ಲಿ, ವ್ಯವಹಾರದಲ್ಲಿ ಹೆಚ್ಚಿನ ಪೈಪೋಟಿ. ಸ್ವಲ್ಪ ಹಿನ್ನಡೆಯಾಗಲೂ ಬಹುದು. ಕೌಟುಂಬಿಕ ಬೆಂಬಲ ಮನಸ್ಸಿಗೆ ಸಮಾಧಾನ ತರುತ್ತದೆ.
ಮೀನ
ದುಬಾರಿ ವಸ್ತು ಖರೀದಿಯ ಮೋಹ. ಆದರೆ ಇನ್ನೊಂದೆಡೆಯಿಂದ ಜೇಬಿಗೂ ಕತ್ತರಿ. ಕೌಟುಂಬಿಕ ಬೇಡಿಕೆ ಹೆಚ್ಚಳ.