Monday, January 12, 2026

ದಿನಭವಿಷ್ಯ: ನಿಮ್ಮ ದುಡುಕು, ಕೋಪದಿಂದ ಆತ್ಮೀಯ ಸಂಬಂಧ ಹಾಳಾದೀತು ಜಾಗ್ರತೆ

ಮೇಷ
ನಿಮ್ಮ ದುಡುಕು, ಕೋಪದಿಂದ ಆತ್ಮೀಯ ಸಂಬಂಧ ಹಾಳಾದೀತು. ಕೆಲಸದ ಒತ್ತಡ ಕಡಿಮೆ ಮಾಡಲು ಯತ್ನಿಸಿ. ಅವಶ್ಯ ನೆರವು ಪಡೆಯಿರಿ.    
ವೃಷಭ
ನಿಮ್ಮ ಕೆಲಸದಲ್ಲಿ ನಿಷ್ಠೆಯಿರಲಿ. ಟೀಕೆ ಮಾಡುವವರನ್ನು ನಿರ್ಲಕ್ಷಿಸಿ. ಸಮಸ್ಯೆಗೆ ಸುಲಭ ಪರಿಹಾರಕ್ಕಿಂತ ಶಾಶ್ವತ ಪರಿಹಾರವಿರಲಿ.
ಮಿಥುನ
  ವಿವಿಧ ಕ್ಷೇತ್ರಗಳಲ್ಲಿ ಒತ್ತಡ ಎದುರಿಸುವಿರಿ. ಕುಟುಂಬ, ಸ್ನೇಹಿತರು, ಸಹೋದ್ಯೋಗಿ ಎಲ್ಲರೂ ನಿಮ್ಮಿಂದ ಏನನ್ನಾದರೂ ಅಪೇಕ್ಷಿಸುತ್ತಾರೆ.  
ಕಟಕ
 ಆಪ್ತರೊಬ್ಬರನ್ನು ಹೊಸ ಆಯಾಮದಲ್ಲಿ ಕಂಡುಕೊಳ್ಳುವಿರಿ. ಅವರ ಹೊಸ ಸ್ವರೂಪ ಗೋಚರಕ್ಕೆ ಬಂದೀತು. ಆಂತರಿಕ ಉದ್ವಿಗ್ನತೆ ಶಮನ.      
ಸಿಂಹ
  ಮನಸ್ಸು ಉಲ್ಲಸಿತ ಗೊಳ್ಳುವ ಬೆಳವಣಿಗೆ. ಚಿಂತೆಯೊಂದು ಪರಿಹಾರ. ಏಕಾಂಗಿತನ ಬಿಟ್ಟು ಇತರರ ಜತೆ ಬೆರೆಯಲು ಕಲಿಯಿರಿ. ಧನಪ್ರಾಪ್ತಿ.  
ಕನ್ಯಾ
ನಿಮ್ಮ ಕಾರ್ಯದ ಬಗ್ಗೆ ಉದಾಸೀನ ಬೇಡ. ಕಾಳಜಿಯಿಂದ ನಿರ್ವಹಿಸಿ. ಕೌಟುಂಬಿಕ ವಾಗ್ವಾದ ತಾರಕಕ್ಕೆ ಏರಲು ಅವಕಾಶ ಕೊಡಬೇಡಿ. ತಾಳ್ಮೆಯಿರಲಿ    
ತುಲಾ
ಹೊಸ ವಿಚಾರ ಗಳತ್ತ ಮನಸ್ಸು ಹರಿಯ ಬಹುದು. ಒತ್ತಡದಿಂದ ತುಸು ಮುಕ್ತಿ ಸಿಗಲಿದೆ. ಹಣದ ವ್ಯವಹಾರ ತುಸು ಕಠಿಣವೆನಿಸಬಹುದು.      
ವೃಶ್ಚಿಕ
ನಿಮ್ಮ ಸಮಸ್ಯೆಯ ಪರಿಹಾರಕ್ಕೆ ಕೆಲವರು ಸದಾ ನೆರವು ನೀಡುವರು. ಸಂಗಾತಿಯಿಂದ ಬೆಂಬಲ. ಅನವಶ್ಯ ವಿಷಯಕ್ಕೆ ಹಣ ವ್ಯಯಿಸುವುದನ್ನು ನಿಲ್ಲಿಸಿ.                    
ಧನು
 ವಿನಯ ಒಳ್ಳೆಯದು. ಆದರೆ ಇತರರ ತಾಳಕ್ಕೆ ಕುಣಿಯಬೇಡಿ. ನಿಮಗೆ ಸರಿಯೆನ್ನಿಸುವ ಕಾರ್ಯಕ್ಕೆ ಮಾತ್ರ ಕೈ ಹಾಕಿ. ಖರ್ಚು ನಿಯಂತ್ರಿಸವುದೊಳಿತು.  
ಮಕರ
ಹಳೆ ವ್ಯವಸ್ಥೆಗೆ ಕಟ್ಟುಬಿದ್ದು ಹೊಸ ಬದಲಾವಣೆಗೆ ಒಗ್ಗಿಕೊಳ್ಳಲು ಕಷ್ಟ ಪಡುವಿರಿ. ಹೊಂದಾಣಿಕೆ ಮುಖ್ಯ ಎಂದರಿಯಿರಿ.    ಕುಂಭ
ಮೇಲಽಕಾರಿಗಳ ನಿಗಾ ನಿಮ್ಮ ಮೇಲಿದೆ. ದಕ್ಷತೆಯಿಂದ ಕೆಲಸ ಮಾಡಿ. ಖಾಸಗಿ ಸಮಸ್ಯೆ ಅನಿರೀಕ್ಷಿತವಾಗಿ ಹುಟ್ಟಿಕೊಳ್ಳಬಹುದು.
ಮೀನ
ಕಳೆದ ಕೆಲವು ದಿನಗಳ ಗೊಂದಲ ಪರಿಹಾರ ಕಾಣಲಿದೆ. ಕೆಲವು ಸತ್ಯ ಗೋಚರಿಸಲಿದೆ. ದೃಢ ಚಿತ್ತ ಅವಶ್ಯ. ಕೆಲವರ ಮಾತಿಗೆ ಮರುಳಾಗಬೇಡಿ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!