ದಿನಭವಿಷ್ಯ: ಇಂದು ನಿಮ್ಮ ಪಾಲಿಗೆ ಸವಾಲಿನ ದಿನ, ಹತಾಶೆ ಎದುರಾಗಬಹುದು!

ಮೇಷ
ಪ್ರತಿಯೊಂದು ವಿಷಯದ ಕುರಿತು ಅತಿಯಾಗಿ ಚಿಂತಿಸುವಿರಿ. ಭವಿಷ್ಯದ ಬಗ್ಗೆ ಆಲೋಚನೆ ಹೆಚ್ಚು. ಭಾವನಾತ್ಮಕ  ಏರುಪೇರು. ಮನಸ್ಸು ತಹಬಂದಿಗೆ ತನ್ನಿರಿ.

ವೃಷಭ
ಇಂದು ನಿಮ್ಮ ಕಾರ್ಯ ಮತ್ತು ಚಿಂತನೆ ಹೆಚ್ಚು ನಿಖರತೆಯಿಂದ ಕೂಡಿರುತ್ತದೆ. ವೃತ್ತಿಯಲ್ಲಿ ನಿಮಗಿರುವ ಸಂಪನ್ಮೂಲ ಸರಿಯಾಗಿ ಬಳಸಿಕೊಳ್ಳುವಿರಿ.

ಮಿಥುನ
ಮನೆ ಮತ್ತು ಉದ್ಯೋಗದಲ್ಲಿ ಹೊಣೆಗಾರಿಕೆ ಹೆಚ್ಚು. ಸಹನೆಯಿಂದ ಕಾರ್ಯ ನಿರ್ವಹಿಸಿ. ಭಿನ್ನಮತ, ವಾಗ್ವಾದಕ್ಕೆ ಅವಕಾಶ ಕೊಡದಿರಿ.

ಕಟಕ
ಶಾಂತ ಮನಸ್ಥಿತಿ. ಹಾಗಾಗಿ ಯಾವುದೇ ನಿರ್ಧಾರ ತಳೆಯಲು ಸಮರ್ಥರಾಗುವಿರಿ. ಸಂಗಾತಿ ಜತೆಗೆ ಅವಿಸ್ಮರಣೀಯ ದಿನ ಕಳೆಯುವಿರಿ.

ಸಿಂಹ
ಸವಾಲಿನ ದಿನ. ಹತಾಶೆ ಕಾಡಬಹುದು. ಕೆಲಸದ ಒತ್ತಡ ಅಥವಾ ಕೌಟುಂಬಿಕ ಸಂಘರ್ಷ ಇದಕ್ಕೆ ಕಾರಣ. ಸವಾಲಿಗೆ ಹೊಂದಿಕೊಳ್ಳಲು ಕಲಿಯಿರಿ.

ಕನ್ಯಾ
ನಿಮ್ಮ ಪಾಲಿಗೆ ಕೆಲವಾರು ಬೆಳವಣಿಗೆ ಸಂಭವಿಸುವುದು. ಅನಿರೀಕ್ಷಿತ ಧನಲಾಭ. ಆರೋಗ್ಯ ಸಮಸ್ಯೆಯಿದ್ದರೆ ಇಂದು ಪರಿಹಾರ ಕಾಣುವುದು.

ತುಲಾ
ಕೆಲಸದ ಒತ್ತಡ ಕಡಿಮೆ. ಹಾಗಾಗಿ ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯಲು ಅವಕಾಶ.  ನಿಮ್ಮ ನಿರ್ಲಕ್ಷ್ಯದಿಂದ ಧನಹಾನಿ ಸಂಭವಿಸಬಹುದು.

ವೃಶ್ಚಿಕ
ಕಾಲಮಿತಿಯಲ್ಲಿ ಕೆಲಸ ಮುಗಿಸಬೇಕಾದ ಒತ್ತಡಕ್ಕೆ ಸಿಲುಕುವಿರಿ. ಹತಾಶೆ, ಅಸಹನೆ ಕಾಡಬಹುದು.ವಾಗ್ವಾದ ಸಂಭವ. ಆರೋಗ್ಯ ಸಮಸ್ಯೆ ಇದ್ದರೆ ಅದನ್ನು ಕಡೆಗಣಿಸಬೇಡಿ.

ಧನು
ಶ್ರಮ ಪಟ್ಟರೆ ಯಶಸ್ಸು ಅಸಾಧ್ಯವಲ್ಲ. ಹಳೆಯ ಹಣ ಹೂಡಿಕೆ ಲಾಭ ತಂದುಕೊಡುವುದು. ಕೌಟುಂಬಿಕ ಸಮಸ್ಯೆಗೆ ಪರಿಹಾರ ದೊರಕುವ ಕಾಲ ಸನ್ನಿಹಿತ.

ಮಕರ
ನಿಮ್ಮ ಕೆಲಸದ ಪ್ರಗತಿಯ ಕುರಿತಂತೆ ಚಿಂತೆ ಕಾಡುವುದು. ಸಮೀಪಬಂಧುಗಳ ಜತೆ ಭಿನ್ನಮತ ಸಂಭವ. ಸಹನೆಯಿಂದ ವರ್ತಿಸುವುದು ಅವಶ್ಯ.

ಕುಂಭ
ನಿಮ್ಮ ಪಾಲಿಗೆ ಯಶಸ್ವಿ ದಿನ. ಉದ್ದೇಶಿಸಿದ ಕಾರ್ಯ ಸುಲಭವಾಗಿ ಈಡೇರುವುದು. ಆರ್ಥಿಕ ಸುಸ್ಥಿರತೆ. ಬಂಧುಗಳಿಂದ ಸಹಕಾರ,ಸಹಾಯ.

ಮೀನ
ಇಂದಿನ ಕಾರ್ಯ ಸುಲಭದಲ್ಲಿ ಸಾಗದು. ಆಗಾಗ ಅಡ್ಡಿಗಳು. ಹಣಕ್ಕೆ ಸಂಬಂಧಿಸಿ ದೊಡ್ಡ ನಿರ್ಧಾರ ತಾಳದಿರಿ. ಬಂಧುಗಳಿಂದ ಸಹಕಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!