Monday, January 12, 2026

ದಿನಭವಿಷ್ಯ: ಕುಟುಂಬದ ವ್ಯವಹಾರಕ್ಕೆ ಇಂದು ಆದ್ಯತೆ ಕೊಡಬೇಕಾದ ಸನ್ನಿವೇಶ ಎದುರಾಗುವುದು

ಮೇಷ
ವೃತ್ತಿಯಲ್ಲಿ ಅಸಹನೆ. ನಿರೀಕ್ಷಿಸಿದ ಕಾರ್ಯ ನಡೆಯದೆ ನಿರಾಶೆ. ಕೌಟುಂಬಿಕ ನೆಮ್ಮದಿ ಕದಡಲು ಅವಕಾಶ ನೀಡದಿರಿ. ಧನವ್ಯಯ.  
ವೃಷಭ
ಇಂದು ಎಲ್ಲ ಕಾರ್ಯಗಳು ಸಫಲ. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ವ್ಯವಹಾರ ಸುಗಮ. ಹೊಸ ಚಿಂತನೆ ಅಳವಡಿಸಲು ಸಕಾಲ.  
ಮಿಥುನ
ಪ್ರೀತಿಯ ವಿಷಯದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಬೆಳವಣಿಗೆ. ಸಂಯಮದಿಂದ ನಿಭಾಯಿಸಿ. ಕೌಟುಂಬಿಕ ಅಸಹಕಾರ.  
ಕಟಕ
ವೃತ್ತಿಯಲ್ಲೂ ಖಾಸಗಿ ಬದುಕಲ್ಲೂ ಸಮಾಧಾನವಿಲ್ಲ.  ಏನೇನೋ ಸಮಸ್ಯೆ, ತಾಪತ್ರಯ. ಮನಶ್ಯಾಂತಿ ದೂರವಾಗಲಿದೆ.    
ಸಿಂಹ
ದಿನವಿಡೀ ಕಾರ್ಯದ ಒತ್ತಡ. ಹೆಚ್ಚಿನ ಹೊಣೆಗಾರಿಕೆ. ಅದನ್ನು ಸಮರ್ಥವಾಗಿ ನಿಭಾಯಿಸಿ ನಿರಾಳತೆ ಕಾಣುವಿರಿ.  ಸಂಜೆ ವೇಳೆಗೆ ಆರಾಮ.      
ಕನ್ಯಾ
ಮಹತ್ವದ ಕಾರ್ಯ ಎಸಗಲು ಹೋಗದಿರಿ. ಅದು ನಿರೀಕ್ಷಿತ ಫಲ ನೀಡದು. ಮನೆಯವರ ಜತೆ ಸಹನೆಯಿಂದ ವರ್ತಿಸಿ. ವಾಗ್ವಾದ ಬೇಡ.      
ತುಲಾ
ದೊಡ್ಡ ಹೊಣೆ ಹೆಗಲೇರಲಿದೆ.  ಆಪ್ತರ ಜತೆ ಸಣ್ಣ ವಿಷಯಕ್ಕೆ  ವಾಗ್ವಾದ ನಡೆದೀತು. ಅವರ ಅಭಿಪ್ರಾಯಕ್ಕೂ ಮನ್ನಣೆ ನೀಡಿ.    
ವೃಶ್ಚಿಕ
ಕುಟುಂಬದ ವ್ಯವಹಾರಕ್ಕೆ ಇಂದು ಆದ್ಯತೆ ಕೊಡಬೇಕಾದ ಸನ್ನಿವೇಶ. ಕಠಿಣ ಕಾರ್ಯವೂ ಸುಲಭವಾಗಿ ನೆರವೇರುತ್ತದೆ.  ಧನು
ವ್ಯವಹಾರದಲ್ಲಿ ಸವಾಲು ಎದುರಿಸುವಿರಿ. ಆದರೆ ಆತ್ಮವಿಶ್ವಾಸ
ಕಳಕೊಳ್ಳದಿರಿ. ಕೊನೆಗೆ ಎಲ್ಲವೂ ನಿಮ್ಮ ಪರವಾಗಿ ನಡೆಯುವುದು.      
ಮಕರ
ಅನ್ಯರ ವ್ಯವಹಾರ ದಲ್ಲಿ ನೀವು ಹಸ್ತಕ್ಷೇಪ ನಡೆಸದಿರಿ. ಸಮಸ್ಯೆ ಎದುರಿಸುವಿರಿ. ಕೌಟುಂಬಿಕ ಉದ್ವಿಗ್ನತೆ ತಿಳಿಯಾಗಲಿದೆ.  
ಕುಂಭ
 ಚಿಂತೆಗೆ ಕಾರಣ ವಾಗುವ ಪ್ರಸಂಗ ಉಂಟಾದೀತು. ಅದನ್ನು ಸಹನೆಯಿಂದ ನಿಭಾಯಿಸಿ. ಸಮಸ್ಯೆಗೆ ಪರಿಹಾರ ಕಷ್ಟವಲ್ಲ, ಪ್ರಯತ್ನಪಡಿ.  
ಮೀನ
ಆಪ್ತರ ಜತೆ ಭಿನ್ನಾಭಿಪ್ರಾಯ. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ವೃತ್ತಿಯಲ್ಲಿ ಅನಿರೀಕ್ಷಿತ ಧನಲಾಭ. ಕಾರ್ಯಸಿದ್ಧಿ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!