January20, 2026
Tuesday, January 20, 2026
spot_img

ದಿನಭವಿಷ್ಯ | ಈ ರಾಶಿಯವರಿಗೆ ಇಂದು ಸಂತೋಷದ ಸುದ್ದಿಯೊಂದು ಸಿಗಲಿದೆ, ತಾಳ್ಮೆಯಿರಲಿ

ಮೇಷ
ಹೆಚ್ಚು  ಆಶಾವಾದದ ದಿನ. ಆರ್ಥಿಕ ಪ್ರಗತಿ.   ಅನಿರೀಕ್ಷಿತ ಧನ ಸಂಚಯ. ವಿದ್ಯಾರ್ಥಿಗಳಿಗೆ ಪೂರಕ. ಕಾಡುವ ಆರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ.
ವೃಷಭ
ಪ್ರಮುಖ ಕಾರ್ಯ ಯೋಜಿಸಿದ್ದರೆ ಇಂದೇ ಕಾರ್ಯಗತ ಮಾಡಿ. ಕಾಲ ನಿಮಗೆ ಪ್ರಶಸ್ತವಿದೆ. ಕೌಟುಂಬಿಕ ವಾಗ್ವಾದ ನಡೆದರೂ ಬಳಿಕ ಶಾಂತಿ.      
ಮಿಥುನ
ನಿಮಗೆ ಇಷ್ಟವಿಲ್ಲದ ಬೆಳವಣಿಗೆ ಉಂಟಾದೀತು. ಆದರೆ  ಸ್ಥೈರ್ಯ  ಕಳಕೊಳ್ಳದಿರಿ. ಹೊಂದಿಕೊಂಡು ನಡೆಯಿರಿ. ಆರ್ಥಿಕ ಒತ್ತಡ ಕಾಡಲಿದೆ.  
ಕಟಕ
ನೆಮ್ಮದಿ ಕಳಕೊಳ್ಳುವ ಪ್ರಸಂಗ ಉಂಟಾದೀತು. ನಿಮ್ಮ ಕೆಲಸ ಸಾಽಸಲು ಹೆಚ್ಚಿನ ಶ್ರಮ ಬೇಕಾಗಲಿದೆ. ಮನೆಯ ವಾತಾವರಣ ಅಸಹನೀಯ ಎನಿಸೀತು. ಇಂದು ಸಂತೋಷದ ಸುದ್ದಿಯೊಂದು ಸಿಗಲಿದೆ, ತಾಳ್ಮೆಯಿರಲಿ   
ಸಿಂಹ
ಮನಶ್ಯಾಂತಿ ಪಡೆಯಲು ನಿಮ್ಮ ಧೋರಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ. ನಿಮ್ಮ ನಿಲುವಿಗೆ ಹಠ ಹಿಡಿಯದಿರಿ.  
ಕನ್ಯಾ
ಸಂತೋಷ ಮತ್ತು ಬೇಸರ ಎರಡಕ್ಕೂ ಸಾಕ್ಷಿಯಾಗುವಿರಿ.  ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ಆರೋಗ್ಯಕ್ಕೆ ಗಮನ ಕೊಡಿ.  
ತುಲಾ
ಮನೆಯವರ ಮಾತುಗಳಿಗೆ ಸಹನೆ ಯಿಂದ ಕಿವಿಗೊಡಿ. ಸೌಹಾರ್ದ ವಾತಾವರಣ ಕಾಪಾಡಿ. ವಾಗ್ವಾದದಿಂದ ಲಾಭವಿಲ್ಲ.  
ವೃಶ್ಚಿಕ
ಮಾನಸಿಕ ಒತ್ತಡ ಕಾಡಲಿದೆ. ಧಾರ್ಮಿಕ ಆಸಕ್ತಿ ಈ ಒತ್ತಡ ಶಮನಕ್ಕೆ ನೆರವಾಗಲಿದೆ. ಪ್ರೀತಿಯ ವಿಷಯದಲ್ಲಿ ಮಹತ್ವದ ಬೆಳವಣಿಗೆ.
ಧನು
ಭಾವನಾತ್ಮಕ ನಿಯಂತ್ರಣ ಸಾಽಸಿ. ಪ್ರಾಕ್ಟಿಕಲ್ ಆಗಿ ಯೋಚಿಸಿ. ನಿಮ್ಮ ನೆಮ್ಮದಿ ಕೆಡಿಸಲು ಕೆಲವರ ಯತ್ನ. ಅದಕ್ಕೆ ಅವಕಾಶ ನೀಡದಿರಿ.    
ಮಕರ
ಬಿಕ್ಕಟ್ಟಿಗೆ ಕ್ಷಿಪ್ರವಾಗಿ ಸ್ಪಂದಿಸಿ. ವಿಳಂಬ ಧೋರಣೆ ಸಲ್ಲದು. ಪ್ರತಿಕೂಲ ಸನ್ನಿವೇಶಕ್ಕೆ ಧೈರ್ಯಗೆಡದಿರಿ. ಸೂಕ್ತ ನೆರವೂ ಲಭಿಸಲಿದೆ.    
ಕುಂಭ
ಈ ದಿನ ನಿಮಗೆ ಪೂರಕವಾಗಿಲ್ಲ. ಸಂಬಂಧದಲ್ಲಿ ಬಿರುಕು ಮೂಡಬಹುದು. ಉದ್ಯಮದಲ್ಲಿ ಹಿನ್ನಡೆ. ಆರೋಗ್ಯ ಸಮಸ್ಯೆ.
ಮೀನ
ನಿಮಗೆ ಪೂರಕ ದಿನ. ಕಾರ್ಯದಲ್ಲಿ ಪ್ರಗತಿ. ಮನೆಯಲ್ಲಿ ಹೆಚ್ಚುವರಿ ಹೊಣೆ. ಅದನ್ನು ಸರಿಯಾಗಿ ನಿಭಾಯಿಸಲು ಶಕ್ತರಾಗುವಿರಿ.

Must Read