ದಿನಭವಿಷ್ಯ
ಮೇಷ
ಸುಖ ಸಂತೃಪ್ತಿಯ ದಿನ. ಉದ್ದೇಶಿತ ಗುರಿಯನ್ನು ಸಾಧಿಸುವಿರಿ. ಮೋಸ ಮಾಡುವ ಹಣಕಾಸು ಯೋಜನೆಗಳಿಂದ ದೂರವಿರಿ. ಕೌಟುಂಬಿಕ ಶಾಂತಿ, ಸಮಾಧಾನ.
ವೃಷಭ
ಕುಟುಂಬಸ್ಥರ ದೂರುದುಮ್ಮಾನಗಳಿಗೆ ಗಮನ ಕೊಡಿ. ಅದರಿಂದಲೇ ನೀವು ಕೌಟುಂಬಿಕ ಬಿಕ್ಕಟ್ಟು ನಿವಾರಿಸಿಕೊಳ್ಳಬಹುದು. ಖರ್ಚು ಹೆಚ್ಚಳ.
ಮಿಥುನ
ಆಪ್ತರ ಜತೆ ನಿಮ್ಮ ಭಾವನೆ ಹಂಚಿಕೊಳ್ಳಲು ಹಿಂಜರಿಕೆ ಬೇಡ. ಅದರಿಂದ ಮನಸ್ಸಿಗಾದರೂ ಸಮಾಧಾನ ಉಂಟಾದೀತು.
ಕಟಕ
ಖಾಸಗಿ ಮತ್ತು ವೃತ್ತಿ ಬದುಕಿನ ಸಮಸ್ಯೆ ನೀವೇ ಪರಿಹರಿಸಿಕೊಳ್ಳಬೇಕು. ಅದಕ್ಕಾಗಿ ಇತರರ ನೆರವು ಕಾಯುತ್ತಾ ಕೂರದಿರಿ. ಕೌಟುಂಬಿಕ ಸಹಕಾರ.
ಸಿಂಹ
ಬಂಧುಗಳ ಜತೆ ಸಣ್ಣ ವಿಷಯಕ್ಕೆ ಜಗಳ ಕಾಯಬೇಡಿ. ಉದ್ಯೋಗದಲ್ಲಿ ಹೊಸ ಅವಕಾಶ. ಅದನ್ನು ಸದುಪಯೋಗ ಮಾಡಿಕೊಳ್ಳಿ.
ಕನ್ಯಾ
ಆಪ್ತರ ಜತೆಗಿನ ಸಂಘರ್ಷದಲ್ಲಿ ತಪ್ಪು ಯಾರದೆಂಬ ವಾದ ಸರಿಯಲ್ಲ. ಸಂಧಾನ ಅದಕ್ಕಿಂತ ಮುಖ್ಯ. ಜತೆಗೇ ಹೊಂದಾಣಿಕೆ ಅತ್ಯಗತ್ಯ.
ತುಲಾ
ಹೊಸ ಆರ್ಥಿಕ ಯೋಜನೆ ಆರಂಭಿಸಲು ಸಕಾಲ. ಉತ್ತಮ ಫಲ ದೊರಕುವುದು. ಆತ್ಮೀಯರ ಜತೆ ಕಾಲಕ್ಷೇಪ. ಬಂಧುಗಳ ಸಹಕಾರ.
ವೃಶ್ಚಿಕ
ಸಂಗಾತಿಯನ್ನು, ಮನೆಯವರನ್ನು ಪ್ರೀತಿಯಿಂದ ನೋಡಿಕೊಳ್ಳಿ. ಅವರ ಭಾವನೆಗಳಿಗೆ ಸ್ಪಂದಿಸಿ. ಇದರಿಂದ ಕೌಟುಂಬಿಕ ಬಿಕ್ಕಟ್ಟು ತಪ್ಪಿಸಬಹುದು.
ಧನು
ಗುರಿ ಸಾಧನೆಯ ನಿಮ್ಮ ಛಲ ಮೆಚ್ಚುವಂತಹುದೆ. ಆದರೆ ಈ ವಿಷಯದಲ್ಲಿ ಅನವಶ್ಯ ಅವಸರ ತೋರದಿರಿ. ದುಡುಕಿನಿಂದ ಕಾರ್ಯ ಕೆಡಬಹುದು.
ಕುಂಭ
ಕೌಟುಂಬಿಕ ಜೀವನ ಉಲ್ಲಾಸದಾಯಕ. ಭಿನ್ನಮತ ಪರಿಹಾರ. ಎಲ್ಲರೊಡನೆ ಉತ್ತಮ ಸಂವಹನ ಸಾಧಿಸುವಿರಿ. ಒಟ್ಟಿನಲ್ಲಿ ಹರ್ಷ, ಉಲ್ಲಾಸದ ದಿನ.
ಮೀನ
ಬದುಕಿನ ಬದಲಾವಣೆಗೆ ಹೊಂದಿಕೊಳ್ಳಲು ಕಲಿಯಬೇಕು. ನಿಮ್ಮದೇ ನಿಲುವಿಗೆ ಅಂಟಿಕೊಳ್ಳದಿರಿ. ಇತರರ ಮನಸ್ಥಿತಿ ಅರಿತು ವ್ಯವಹರಿಸಿರಿ.