Tuesday, December 16, 2025

ದಿನಭವಿಷ್ಯ: ಕುಟುಂಬದ ವಿಷಯದಲ್ಲಿ ತೃಪ್ತಿ, ಆರ್ಥಿಕ ಸಂಕಷ್ಟ ನಿವಾರಣೆ

ಮೇಷ
ಕೌಟುಂಬಿಕ ವಿಷಯ ತೃಪ್ತಿದಾಯಕ. ಚಿಂತೆ ಪರಿಹಾರ.  ಉದ್ಯೋಗದಲ್ಲಿನ ಅನಿಶ್ಚಿತತೆ ನಿವಾರಣೆ.  ಆರ್ಥಿಕ ಸ್ಥಿತಿ ಚೇತರಿಕೆ.
ವೃಷಭ
ವ್ಯಕ್ತಿಯೊಬ್ಬರ ಕುರಿತಾದ ನಿಮ್ಮ ಅಭಿಪ್ರಾಯ ಬದಲಾದೀತು. ಸ್ನೇಹದಿಂದ ಲಾಭವಿದೆ ಎಂದು ಅರಿಯಿರಿ.  
ಮಿಥುನ
ನಿಮ್ಮ ಕೆಲಸ ನಿರೀಕ್ಷಿತ ಫಲ ನೀಡಿಲ್ಲವೆಂದು ಚಿಂತಿಸದಿರಿ. ಸ್ವಲ್ಪ ಕಾದು ನೋಡಿ, ನಿಮ್ಮ ನಿರೀಕ್ಷೆ ಈಡೇರುವುದು.  ಪ್ರೀತಿಯಲ್ಲಿ ಯಶಸ್ಸು.
ಕಟಕ
ಭಾವನಾತ್ಮಕ ಸನ್ನಿವೇಶ ಎದುರಿಸುವಿರಿ. ಆಪ್ತ ವ್ಯಕ್ತಿಗಳಿಂದ ಕಡೆಗಣಿಸಲ್ಪಡುವಿರಿ. ಮನಸ್ಸು ದೃಢವಾಗಿಟ್ಟು ಕೊಳ್ಳಿ. ಸಂಘರ್ಷ ಬೇಡ.
ಸಿಂಹ
ಯಶಸ್ವಿ ದಿನ ಉದ್ದೇಶ ಸಫಲ.  ಸಣ್ಣ ವಿಷಯಕ್ಕೂ ರೇಗುವುದು ನಿಲ್ಲಿಸಿ. ಹೊಂದಾಣಿಕೆಯ ಬದುಕು ಒಳ್ಳೆಯದು ಎಂದು ಅರಿಯಿರಿ.
ಕನ್ಯಾ
ಉದಾಸೀನತೆ ನಿಮ್ಮನ್ನು ಕಾಡಬಹುದು. ಕೆಲಸದಲ್ಲಿ ನಿರಾಸಕ್ತಿ. ಅದನ್ನು ಆದಷ್ಟು ಬೇಗ ತೊಡೆದುಕೊಳ್ಳುವುದು ಒಳ್ಳೆಯದು.    
ತುಲಾ
ಹಣಕಾಸಿಗೆ ಸಂಬಂಽಸಿ ಪೂರಕ ದಿನ. ವೈಯಕ್ತಿಕವಾಗಿ ಯಾರನ್ನೂ ನಿಂದಿಸಲು ಹೋಗಬೇಡಿ. ಬಳಿಕ ಪಶ್ಚಾತ್ತಾಪ ಪಡಬೇಕಾದೀತು.
ವೃಶ್ಚಿಕ
 ಆರ್ಥಿಕ ಹಾನಿ ಸಂಭವ. ಹಾಗಾಗಿ ಎಚ್ಚರದಿಂದ ವ್ಯವಹರಿಸಿ. ಕೆಲವರ ಹುಸಿ ಮಾತಿಗೆ ಮರುಳಾಗಬೇಡಿ. ಖರ್ಚು ಕಡಿಮೆಗೊಳಿಸಿ.
ಧನು
ಸಣ್ಣ ವಿಷಯಕ್ಕೂ ಹೆಚ್ಚು ಚಿಂತೆ ಮಾಡುತ್ತೀರಿ ಆಪ್ತರೊಂದಿಗೆ ಕಾಲ ಕಳೆಯಿರಿ. ನಿಮ್ಮ ಮನಸ್ಸನ್ನು ಕಾಡುತ್ತಿರುವ ಒತ್ತಡ ಶಮನ ಆಗಬಹುದು.
ಮಕರ
ನಿಮ್ಮ ಸುತ್ತಲಿನ ಬದಲಾವಣೆಯಿಂದ ದೂರ ಉಳಿಯಬೇಡಿ.  ಎಲ್ಲರೊಂದಿಗೆ ಹೊಂದಾಣಿಕೆ ಸಾಽಸಿ. ಕಠಿಣ ಧೋರಣೆ ಬಿಡಿ.  
ಕುಂಭ
ಅಂತರ್ಮಥನಕ್ಕೆ ಕಾರಣವಾಗುವ ಘಟನೆ ಸಂಭವಿಸುವುದು. ನಿಮ್ಮ ಬದುಕನ್ನು ಒರೆಗಲ್ಲಿಗೆ ಹಚ್ಚಲು ಸಕಾಲ. ಕೌಟುಂಬಿಕ ಶಾಂತಿ.  
ಮೀನ
ಕಾಡುತ್ತಿದ್ದ ಚಿಂತೆ ಪರಿಹಾರ. ಅನಿರೀಕ್ಷಿತ ಮೂಲದಿಂದ ನೆರವು. ಕೌಟುಂಬಿಕ ಭಿನ್ನಮತ ಸೌಹಾರ್ದದಿಂದ ಪರಿಹರಿಸಿ.

error: Content is protected !!