ದಿನಭವಿಷ್ಯ: ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ, ಬೋನಸ್ ಸಾಧ್ಯತೆ

ಮೇಷ
ಉದ್ಯೋಗ ಕ್ಷೇತ್ರದಲ್ಲಿ  ಅನುಕೂಲಕರ ಪ್ರಗತಿ. ನಿಮ್ಮ ಕಾರ್ಯಕ್ಕೆ ಮನ್ನಣೆ. ಖಾಸಗಿ ಬದುಕಿನಲ್ಲಿ ವ್ಯಕ್ತಿಯೊಬ್ಬರು ಸಂತೋಷ ತರುವರು.

ವೃಷಭ
ಕೌಟುಂಬಿಕ ಶಾಂತಿ ಕಾಯ್ದುಕೊಳ್ಳಲು ಆದ್ಯತೆ ಕೊಡಿ. ವಾಗ್ವಾದವನ್ನು ತಪ್ಪಿಸಿಕೊಳ್ಳಿ. ಇತರರ ಪ್ರಲೋಭನೆಗೆ ಮರುಳಾಗಬೇಡಿ. ಚಾಡಿ ಮಾತು ಕೇಳಬೇಡಿ.

ಮಿಥುನ
ಆರ್ಥಿಕ ಬಿಕ್ಕಟ್ಟು , ಕೌಟುಂಬಿಕ ಸಮಸ್ಯೆ ಇಂದು ಪರಿಹಾರ. ವಾಹನ ಚಾಲನೆಯಲ್ಲಿ ತುಸು ಎಚ್ಚರವಿರಲಿ. ಆರೋಗ್ಯಕ್ಕೆ ಗಮನ ಕೊಡಿ.

ಕಟಕ
ಸಂತೋಷಕರ ಮತ್ತು ಫಲಪ್ರದ ದಿನ. ನಿಮ್ಮ ನಿರೀಕ್ಷೆ ಈಡೇರುವುದು. ಬಾಂಧವ್ಯಕ್ಕೆ ಸಂಬಂಧಿಸಿ ತೃಪ್ತಿಕರ ಬೆಳವಣಿಗೆ. ಕೌಟುಂಬಿಕ ಶಾಂತಿ, ಸೌಹಾರ್ದ.

ಸಿಂಹ
ನಿಮ್ಮ  ಕೆಲಸದಲ್ಲಿ ಅಡ್ಡಿಗಳು. ಇದರಿಂದ ಮನಸ್ಸಿಗೆ ಹತಾಶೆ. ಆರ್ಥಿಕ ಬೆಳವಣಿಗೆ ನೀವು ಬಯಸಿದಂತೆ ಆಗುವುದಿಲ್ಲ. ಹಣದ ಕೊರತೆ ಬಾಧಿಸುವುದು.

ಕನ್ಯಾ
ಉದ್ಯೋಗ ಅಥವಾ ಉದ್ದಿಮೆಯಲ್ಲಿ ಪ್ರಗತಿ. ಆರ್ಥಿಕ ಲಾಭ ಗಳಿಸುವಿರಿ. ಕುಟುಂಬ ಸದಸ್ಯರೊಬ್ಬರಿಗೆ ಆರೋಗ್ಯ ಸಮಸ್ಯೆ ಕಾಡಬಹುದು.

ತುಲಾ
ಕೆಲಸದಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಅದನ್ನು ನಿಭಾಯಿಸಲು ಹಿಂಜರಿಕೆ ಬೇಡ. ಸೂಕ್ತ ಸಹಕಾರ ದೊರಕುವುದು. ಕೌಟುಂಬಿಕ ಸಮಸ್ಯೆ ನಿವಾರಣೆ.

ವೃಶ್ಚಿಕ
ಅನಿರೀಕ್ಷಿತ ಲಾಭ. ವಿವಾಹಿತರಿಗೆ ಕುಶಿ ತರುವ ಬೆಳವಣಿಗೆ. ವಿವಾಹಾಕಾಂಕ್ಷಿಗಳಿಗೂ ಸಂಬಂಧ ಕೂಡಿ ಬರಬಹುದು. ಕೌಟುಂಬಿಕ ನೆಮ್ಮದಿ.

ಧನು
ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ. ಪ್ರೀತಿಯ ವಿಷಯದಲ್ಲಿ ಪೂರಕ  ದಿನ. ಆರೋಗ್ಯ ಉತ್ತಮ. ಆರ್ಥಿಕವಾಗಿ ಸಬಲ. ಒಟ್ಟಾರೆ ಅನುಕೂಲಕರ  ದಿನ.

ಮಕರ
ಕಾರ್ಯಸಾಧನೆಗೆ ಇತರರಿಂದ ಸಹಾಯ ಪಡೆದು ಮುಂದುವರಿಯಿರಿ. ಕೆಲವರ ಅಸಹನೀಯ ವರ್ತನೆ ಸಹಿಸಿ ಕೊಳ್ಳಬೇಕಾಗುವುದು.

ಕುಂಭ
ಯಾವುದಾದರೂ ದೈಹಿಕ ಯಾ ಮಾನಸಿಕ ನೋವಿದ್ದರೆ ಇಂದು ಶಮನ. ನಿಮ್ಮ ಮನಸ್ಸಿಗೆ ನೆಮ್ಮದಿ ತರುವ ಬೆಳವಣಿಗೆ. ಬಂಧುಗಳ ಸಹಕಾರ.

ಮೀನ
ಕುಟುಂಬದಲ್ಲಿ ಹರ್ಷದಾಯಕ ಬೆಳವಣಿಗೆ. ಎಲ್ಲರಿಂದ ಉತ್ತಮ ಸಹಕಾರ. ಆರ್ಥಿಕ ಬಿಕ್ಕಟ್ಟು ನಿವಾರಣೆ. ಬಂಧುಗಳ ಭೇಟಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!