Monday, January 12, 2026

ದಿನಭವಿಷ್ಯ: ಈ ರಾಶಿಯವರಿಗೆ ಖುಷಿ ದಿನ, ಫ್ಯಾಮಿಲಿ ಜೊತೆ ಟ್ರಿಪ್‌ ಮಾಡ್ತೀರಿ

ಮೇಷ.
ಕುಟುಂಬದ ಜತೆ ಪ್ರಯಾಣ ಸಾಧ್ಯತೆ. ವೃತ್ತಿ ಕೆಲಸ ಮುಗಿಸಿರಿ. ನಿಮ್ಮ ಕಟು ಮಾತುಗಳಿಂದ ಆಪ್ತರು ದೂರವಾದಾರು. ಧನಾಗಮ ಸಂಭವ.
ವೃಷಭ
ಸಂಗಾತಿ ಜತೆ ಸಂಘರ್ಷ ನಡೆದೀತು. ಪರಸ್ಪರ ಗೌರವವಿದ್ದರೆ ಪ್ರೀತಿ ಬೆಳೆಯುವುದು. ಉದ್ಯೋಗದ ಅವಕಾಶ ಹೆಚ್ಚಲಿದೆ. ಧನವ್ಯಯ.  
ಮಿಥುನ
ದೈನಂದಿನ ಕೆಲಸ ನಿಮ್ಮ ಉತ್ಸಾಹ ಕುಗ್ಗಿಸುವುದು. ಮನಸ್ಸು ಉಲ್ಲಸಿತಗೊಳಿಸುವ ಹವ್ಯಾಸ ಬೆಳೆಸಿಕೊಳ್ಳಿ. ಬಂಧುಗಳ ಸಹಕಾರ.  
ಕಟಕ
ನಿಮ್ಮ ಕಾರ್ಯದಲ್ಲಿ ದಿನವಿಡೀ ವ್ಯಸ್ತ. ಬೇರೆ ವಿಷಯದಲ್ಲಿ ಮನಸ್ಸು ತೊಡಗದು.  ಪ್ರೀತಿಯಲ್ಲಿ ಒಡಕು ಮೂಡೀತು. ಹೊಟ್ಟೆ ಕೆಡುವ ಸಾಧ್ಯತೆ.
ಸಿಂಹ
ಬಿಡುವಿಲ್ಲದ ಕೆಲಸ. ಒತ್ತಡ ಅಽಕ. ವಿಶ್ರಾಂತಿ ಪಡೆಯಲು ಮರೆಯದಿರಿ. ಇತರರ ಒಳಿತಿಗೆ ಶ್ರಮಿಸುತ್ತಾ ನಿಮ್ಮ ಆಕಾಂಕ್ಷೆ ಬಲಿಗೊಡದಿರಿ.  
ಕನ್ಯಾ
ಸಂಗಾತಿ ಜತೆ ಅಹಂ ಬದಿಗಿಡಿ. ಇಲ್ಲವಾದರೆ ಸಂಬಂಧ ಕೆಡಬಹುದು.  ಅಽಕ ಧನಪ್ರಾಪ್ತಿಯ ಅವಕಾಶ ಕಡಿಮೆ. ಇದ್ದುದರಲ್ಲೆ ತೃಪ್ತಿಯಿರಲಿ.    
ತುಲಾ
ನೀವು ಇಚ್ಛಿಸದ  ವಿಷಯದಲ್ಲಿ ಬೇಸರ ಪಡುತ್ತಾ ಕೂರದಿರಿ. ಬಂದ  ಪರಿಸ್ಥಿತಿಗೆ ಒಗ್ಗಿಕೊಳ್ಳುವುದು ಮುಖ್ಯ. ಮನೋನಿಗ್ರಹ ಅವಶ್ಯ. ಧನವ್ಯಯ ಹೆಚ್ಚು.  
ವೃಶ್ಚಿಕ
ಉತ್ಸಾಹದ ಮನಸ್ಥಿತಿ. ಇತರರ ಜತೆ ಹಂಚಿಕೊಳ್ಳಲು ಬಯಸುವಿರಿ. ನವದಂಪತಿ ಮಧ್ಯೆ ವಿರಸ ಮೂಡೀತು. ಪರಸ್ಪರ ತಿಳುವಳಿಕೆಯಿಂದ ಪರಿಹಾರ.  
ಧನು
ಮಹತ್ವದ ದಿನವಾಗಿ ಇಂದು ದಾಖಲಾದೀತು. ಪ್ರಮುಖ ಬೆಳವಣಿಗೆ ಸಂಭವ. ಧನಾಗಮ. ಅನವಶ್ಯ ವಾಗ್ವಾದದಿಂದ ಆದಷ್ಟು ದೂರವಿರಿ.  
ಮಕರ
ಆಪ್ತ ಬಳಗದ ಜತೆ ಕಾಲ ಕಳೆಯುವ ಅವಕಾಶ. ಮಾತಿನಲ್ಲಿ ಕಟುಮಾತು ನುಸುಳದಂತೆ ನೋಡಿಕೊಳ್ಳಿ. ಸಂಬಂಧ ಕಾಯ್ದುಕೊಳ್ಳುವುದಗತ್ಯ.
ಕುಂಭ
ವೃತ್ತಿಯ ಒತ್ತಡ ಎಂದಿಗಿಂತ ಹೆಚ್ಚು. ಏಕಾಗ್ರತೆ ಕಳಕೊಳ್ಳದಿರಿ. ವೈವಾಹಿಕ ಬದುಕಲ್ಲಿ ಒಡಕು ಮೂಡದಂತೆ ಎಚ್ಚರಿಕೆ ವಹಿಸಿರಿ.  
 ಮೀನ
ಹಳೆ ನೆನಪು ಕಾಡುವ ಪ್ರಸಂಗ ಉಂಟಾದೀತು. ದೈಹಿಕ ಕ್ಷಮತೆ ಕಾದುಕೊಳ್ಳಿ. ಹೆಚ್ಚುವರಿ ಆದಾಯ. ಕೌಟುಂಬಿಕ ಉದ್ವಿಗ್ನತೆ ಶಮನಗೊಳ್ಳಲಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!