Wednesday, September 27, 2023

Latest Posts

ದಿನಭವಿಷ್ಯ : ಕೆಲವು ವಿಷಯ ಲಘುವಾಗಿ ಪರಿಗಣಿಸದಿರಿ, ಅದು ನಿಮ್ಮ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಬಹುದು

ಮೇಷ
ಆತ್ಮೀಯರ ಕುರಿತು  ಅನುಮಾನ ಪಡುವಂತೆ ಕೆಲವರು ಮಾಡಿಯಾರು.  ಮುಕ್ತ ಮಾತುಕತೆ ಮೂಲಕ ಸಂದೇಹ ಪರಿಹರಿಸಿ. ಸಂಬಂಧ ಮುಖ್ಯ.

ವೃಷಭ
ನಿಮ್ಮ ಪ್ರೀತಿಪಾತ್ರರ ಜತೆ ಇಂದು ಹೊಂದಾಣಿಕೆ ತಪ್ಪುವುದು. ಅವರು ನಿಮ್ಮ ಭಾವನೆಗೆ ಸ್ಪಂದಿಸುತ್ತಿಲ್ಲ ಎಂಬ ಅನಿಸಿಕೆ ಕಾಡಬಹುದು.  ತಾಳ್ಮೆಯಿಂದ ವರ್ತಿಸಿ.

ಮಿಥುನ
ಹಲವಾರು ಕಾರ್ಯಗಳ ಒತ್ತಡ ಒಂದೇ ಬಾರಿ  ಬೀಳಲಿದೆ. ಅವನ್ನು ಒಂದೊಂದಾಗಿ ಪರಿಗಣಿಸಿ. ಅವಸರ ಮಾಡಿ ಎಲ್ಲವನ್ನೂ ಕೆಡಿಸಬೇಡಿ.

ಕಟಕ
ನಿಮ್ಮ ಕೆಲಸದ ಕುರಿತಂತೆ ಉದಾಸೀನತೆ ಬೇಡ. ಏನಾದೀತು ಎಂಬ ಅನುಮಾನ ಬೇಡ. ಅಂತ್ಯದಲ್ಲಿ ಎಲ್ಲವೂ ನಿಮ್ಮ ಪರವಾಗಿಯೇ ಆಗುವುದು.

ಸಿಂಹ
ಕೆಲ ವಿಷಯಗಳಲ್ಲಿ ದಿಟ್ಟ ನಿರ್ಧಾರ ತಾಳಬೇಕು. ಇತರರು ತಪ್ಪು ತಿಳಿದುಕೊಂಡಾರು ಎಂಬ ಹಿಂಜರಿಕೆ ಬಿಡಿ. ಬಂಧುಗಳ ಜತೆ ಸೌರ್ಹಾದತೆಯಿರಲಿ.

ಕನ್ಯಾ
ಇತರರ ಪ್ರಲೋಭನೆಗೆ ಒಳಗಾಗಿ ಕೆಲಸ ಮಾಡದಿರಿ. ಅಂತಹ  ಕಾರ್ಯವು ಭವಿಷ್ಯದ ಮೇಲೆ ಹಾನಿ ಎಸಗಬಹುದು. ಆರ್ಥಿಕ ಅಡಚಣೆ.

ತುಲಾ
ಇತರರ ಬೇಡಿಕೆ ಈಡೇರಿಸುವುದರಲ್ಲೆ ಇಂದು ನಿಮ್ಮ ದಿನ ಕಳೆಯಲಿದೆ. ಹಾಗಾಗಿ ನಿಮ್ಮ ವೈಯಕ್ತಿಕ ವಿಷಯಗಳು ಬದಿಗೆ ಸರಿಯಲಿವೆ.

ವೃಶ್ಚಿಕ
ಕಾರ್ಯದಲ್ಲಿ ಸಫಲತೆ. ಯೋಜನೆಗಳು ಫಲಪ್ರದ. ಸಂಗಾತಿ ಜತೆಗೆ ಸೌಹಾರ್ದ ಸಂಬಂಧ.  ಧನಾರ್ಜನೆಯ ಹೊಸ ದಾರಿ ತೆರೆಯುವುದು. ಒಟ್ಟಿನಲ್ಲಿ ಶುಭದಿನ.

ಧನು
ಕೆಲವು ವಿಷಯ ಲಘುವಾಗಿ ಪರಿಗಣಿಸದಿರಿ. ಅದು ನಿಮ್ಮ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಬಹುದು. ಅದಕ್ಕೆ ಸೂಕ್ತ ಗಮನ ಕೊಡಿ.

ಮಕರ
ಕೆಲವು ಭ್ರಮೆಗಳಿಂದ ಇಂದು ನೀವು ಹೊರಬರುವ ಸಾಧ್ಯತೆ ಯಿದೆ. ಆಪ್ತರೆನಿಸಿದವರ ನಿಜಮುಖ ಬಯಲಾಗಲಿದೆ. ಮನಸ್ಸು ದೃಢವಾಗಿರಲಿ.

ಕುಂಭ
ಎಷ್ಟೇ ಒತ್ತಡವಿದ್ದರೂ ಮೂಮಾಲಿನಂತೆ ವ್ಯವಹರಿಸಿ. ಬೇರೆಯವರಿಗೆ ನಿಮ್ಮ ಬಗ್ಗೆ ತಪ್ಪು ಕಲ್ಪನೆ ಮೂಡದಂತೆ ನೋಡಿಕೊಳ್ಳಿ.

ಮೀನ
ಯಾವುದಾದರೂ ಕಾರ್ಯ ಯೋಜಿಸಿದ್ದರೆ, ಬೇಗ ಮಾಡಿ ಮುಗಿಸಿ. ಮುಂದೂಡಬೇಡಿ. ಸೂಕ್ಷ್ಮ ವಿಚಾರದಲ್ಲಿ  ನಿಮ್ಮ ಮನಸ್ಸಾಕ್ಷಿಯಂತೆ ನಡಕೊಳ್ಳಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!