ಮೇಷ
ವೃತ್ತಿಯಲ್ಲಿ ಸವಾಲು. ತಪ್ಪು ಘಟಿಸದಂತೆ ಎಚ್ಚರ ವಹಿಸಿ. ಹೊಸ ವ್ಯವಹಾರ ದಲ್ಲಿ ಹಣ ಹೂಡುವುದು ಸಮಂಜಸವೆನಿಸದು. ಕೌಟುಂಬಿಕ ಅಸಹಕಾರ.
ವೃಷಭ
ಎಲ್ಲ ವಿಧಗಳಲ್ಲೂ ಇಂದು ತೃಪ್ತಿಕರ ದಿನ. ಧನಪ್ರಾಪ್ತಿ. ಕಾರ್ಯ ಸ-ಲ. ನಿಮ್ಮ ಇಷ್ಟವೊಂದು ನೆರವೇರುವುದು. ಬಂಧು ಸಹಕಾರ.
ಮಿಥುನ
ಯಾವುದೇ ಕಾರ್ಯ ಬಾಕಿ ಇಡಬೇಡಿ. ಸಂಗಾತಿ ಜತೆಗಿನ ಸಂಬಂಧ ಸುಧಾರಣೆ. ಭಿನ್ನಮತ ನಿವಾರಣೆ. ಆರೋಗ್ಯದ ಚಿಂತೆ ಪರಿಹಾರ, ನಿರಾಳತೆ.
ಕಟಕ
ಆಪ್ತ ಸಂಬಂಧ ಇನ್ನೊಂದು ಸ್ತರ ಮೇಲೇರಲಿದೆ. ವೈವಾಹಿಕ ಅವಕಾಶ ಉಜ್ವಲ. ಉಳಿತಾಯ ಹೆಚ್ಚಿಸಲು ಸ-ಲರಾಗುವಿರಿ.
ಸಿಂಹ
ದೈನಂದಿನ ಒತ್ತಡದಿಂದ ಮುಕ್ತಿ. ನಿಮ್ಮ ಇಷ್ಟದ ಹವ್ಯಾಸದಲ್ಲಿ ಕಾಲ ಕಳೆಯುವ ಅವಕಾಶ. ಒಟ್ಟಿನಲ್ಲಿ ಇಂದು ಸಂತೋಷದ ಮನಸ್ಥಿತಿ.
ಕನ್ಯಾ
ಅದೃಷ್ಟ ನಿಮಗೆ ಕೈಕೊಡಬಹುದು. ಹಾಗಾಗಿ ಕಾರ್ಯದಲ್ಲಿ ಸಫಲತೆ ದೊರಕದು. ಪ್ರೀತಿಯ ವಿಷಯದಲ್ಲಿ ಭಾವನಾತ್ಮಕ ಏರುಪೇರು.
ತುಲಾ
ಬಹಳಷ್ಟು ಕೆಲಸ ಬಾಕಿಯಿದೆ. ಅದನ್ನು ಪೂರೈಸಬೇಕಾದ ಒತ್ತಡ. ಪ್ರೀತಿಯ ವಿಚಾರದಲ್ಲಿ ದುಡುಕಿನ ನಿರ್ಧಾರ ತಾಳಬೇಡಿ.
ವೃಶ್ಚಿಕ
ವೃತ್ತಿಯಲ್ಲೂ ಖಾಸಗಿ ಬದುಕಲ್ಲೂ ಕೆಲ ಸಮಸ್ಯೆ ಎದುರಿಸುವಿರಿ. ಅಭದ್ರತೆಯ ಭಾವ ಕಾಡಲಿದೆ. ಸಂಗಾತಿ ಜತೆಗೆ ಮನಸ್ತಾಪ ಸಂಭವ.
ಧನು
ಏರಿಳಿತಗಳ ದಿನ. ದೊಡ್ಡ ಹೊಣೆ ಬೀಳಲಿದೆ.ಅದನ್ನು ಪೂರೈಸಲು ಕಷ್ಟ ಪಡುವಿರಿ. ಕಳಕೊಂಡ ಪ್ರೀತಿ ಪಡೆಯಲು ಪ್ರಾಮಾಣಿಕ ಪ್ರಯತ್ನ ನಡೆಸಿರಿ.
ಮಕರ
ಸವಾಲಿನ ದಿನ. ಹಣದ ವ್ಯವಹಾರದಲ್ಲಿ ತೊಡಕು ಕಾಣಿಸೀತು. ಹದ ತಪ್ಪಿದ ಮಾತು ಉದ್ವಿಗ್ನತೆ ಉಂಟು ಮಾಡಬಹುದು. ಸಂಯಮ ವಹಿಸಿರಿ.
ಕುಂಭ
ಇಂದು ಹೆಚ್ಚು ಭಾವುಕ ಪ್ರಸಂಗಕ್ಕೆ ಸಾಕ್ಷಿಯಾಗುವಿರಿ. ಆರ್ಥಿಕ ಪ್ರಗತಿಗೆ ಅಡ್ಡಿ ಬಂದೀತು. ವೃತ್ತಿಯಲ್ಲಿ ಆಂಶಿಕ ಯಶಸ್ಸು ಪಡೆಯುವಿರಿ.
ಮೀನ
ವೃತ್ತಿಕ್ಷೇತ್ರದಲ್ಲಿ ಉಂಟಾಗಿದ್ದ ಉದ್ವಿಗ್ನತೆ ನಿವಾರಣೆ. ಸೌಹಾರ್ದ ಪರಿಸ್ಥಿತಿ ನೆಲೆಸಲಿದೆ. ಧನನಷ್ಟ ಸಂಭವ, ಎಚ್ಚರದಿಂದ ವ್ಯವಹರಿಸಿ.
ದಿನಭವಿಷ್ಯ: ನಿಮ್ಮ ಹವ್ಯಾಸಕ್ಕೆ ಸಮಯ ಕೊಡ್ತೀರಿ, ಮನಸ್ಸು ಉಲ್ಲಾಸದಾಯಕವಾಗಿ ಇರಲಿದೆ

