ದಿನಭವಿಷ್ಯ: ಇಂದು ಸಂಗಾತಿ ಜತೆಗಿನ ಭಿನ್ನಮತ ತಾರಕಕ್ಕೇರದಂತೆ ನೋಡಿಕೊಳ್ಳಿ

ಮೇಷ
ಪ್ರೀತಿಯ ವಿಷಯದಲ್ಲಿ ಭಾವನಾತ್ಮಕ ಏರುಪೇರು  ಉಂಟಾದೀತು. ಆತ್ಮೀಯರ ನಡೆನುಡಿ ಬೇಸರ ತರುವುದು. ಕರ್ತವ್ಯದಲ್ಲಿ ವಿಮುಖತೆ ತೋರದಿರಿ.

ವೃಷಭ
ವೃತ್ತಿಯಲ್ಲಿ ಉತ್ತಮ ನಿರ್ವಹಣೆ. ಎಲ್ಲರಿಂದ ಮೆಚ್ಚುಗೆ. ಪ್ರೇಮದ ವಿಚಾರದಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ.ಪೂರಕ ಸ್ಪಂದನೆ.

ಮಿಥುನ
ಪರಿಸ್ಥಿತಿ ಹೇಗೆ ಬರುವುದೋ ಅದನ್ನು ಎದುರಿಸಿರಿ. ಯಾವುದನ್ನೂ ಬದಲಿಸಲು ಹೋಗದಿರಿ. ಫಲ ಸಿಗದಿದ್ದರೆ ಕೊರಗುವುದು ಬೇಡ.

ಕಟಕ
ಇರುವ ಪರಿಸ್ಥಿತಿಯಲ್ಲೇ ತೃಪ್ತಿ ಕಾಣುವ ನಿಮ್ಮ ಮನಸ್ಥಿತಿ ಒಳಿತನ್ನೇ ಮಾಡುವುದು. ಕೆಲಸದ ಒತ್ತಡವು ನಿವಾರಣೆಗೊಂಡು ಮನಸ್ಸಿಗೆ ನಿರಾಳತೆ.

ಸಿಂಹ
ಹೆಚ್ಚುವರಿ ಕೆಲಸದ ಹೊರೆ. ಅದನ್ನು ಸಮರ್ಥವಾಗಿ ನಿಭಾಯಿಸಿ. ಆದಾಯ ಕಡಿಮೆ. ಹಾಗಾಗಿ ವೆಚ್ಚವನ್ನೂ ಕಡಿಮೆ ಮಾಡಬೇಕಾದೀತು.

ಕನ್ಯಾ
ವೃತ್ತಿಯಲ್ಲಿ ಅಥವಾ ನಿಮ್ಮ ಇಷ್ಟದ ಕ್ಷೇತ್ರದಲ್ಲಿ ನಿಮ್ಮ ಸಾಮರ್ಥ್ಯದ ಅನಾವರಣ ಆಗಲಿದೆ. ಸಂಗಾತಿ ಜತೆಗಿನ ಭಿನ್ನಮತ ತಾರಕಕ್ಕೆ ಏರದಂತೆ ನೋಡಿಕೊಳ್ಳಿ.

ತುಲಾ
ಆರ್ಥಿಕ ಪರಿಸ್ಥಿತಿ ಎಲ್ಲೋ ಸ್ಥಗಿತಗೊಂಡಂತೆ ಅನಿಸಬಹುದು. ಹಣದ ಹೂಡಿಕೆಯಲ್ಲಿ ವಿವೇಕ ಇರಲಿ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಸಂಭವ.

ವೃಶ್ಚಿಕ
ಅನಿರೀಕ್ಷಿತ ಖರ್ಚು. ಇದರಿಂದಾಗಿ ನಿಮ್ಮ ಆರ್ಥಿಕ ಹೊಂದಾಣಿಕೆ ಏರುಪೇರಾಗಬಹುದು.  ಕೌಟುಂಬಿಕ ಸಹಕಾರ. ಬೆನ್ನು ನೋವು
ಬಾಧಿಸುವ ಸಂಭವ.

ಧನು
ವೃತ್ತಿಯಲ್ಲಿ ಫಲಪ್ರದ ದಿನ. ಉದ್ಯೋಗ ಬದಲಾವಣೆಯ ಬಯಕೆ ಈಡೇರುವುದು. ಉಳಿತಾಯ ಹೆಚ್ಚಳ. ಬಂಧುಗಳ ಜತೆ ಉತ್ತಮ ಬಾಂಧವ್ಯ.

ಮಕರ
ಖಾಸಗಿ ಜೀವನದ ಒತ್ತಡವು ವೃತ್ತಿಯ ಮೇಲೂ ಪರಿಣಾಮ ಬೀರಬಹುದು. ಮಕ್ಕಳ ವರ್ತನೆ ಮನಶ್ಯಾಂತಿ ಕಲಕಬಹುದು. ಸಂಯಮ ಮುಖ್ಯ.

ಕುಂಭ
ವೃತ್ತಿಯಲ್ಲಿ ನಿಮ್ಮ ಸಾಧನೆಯ ಯಶಸ್ಸನ್ನು ಇತರರು ತಮ್ಮದೆಂದು ಹೇಳಬಹುದು. ಆರೋಗ್ಯಕರ ಆಹಾರವನ್ನಷ್ಟೇ ಸೇವಿಸಿ. ಬಂಧುಗಳ ಸಹಕಾರ.

ಮೀನ
ಸಕಾಲದಲ್ಲಿ ಕೆಲಸ ಮುಗಿಸುವ ಮೂಲಕ ನಿರಾಳತೆ. ಸಂಗಾತಿ ಜತೆ ಭಿನ್ನಮತ ನಿವಾರಣೆ.  ಆರ್ಥಿಕ ಸ್ಥಿತಿ ಉತ್ತಮ. ಆರೋಗ್ಯ ಸಮಸ್ಯೆ ಪರಿಹಾರ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!