ಮೇಷ
ನೀವು ನಿರೀಕ್ಷಿಸದ ಬದಲಾವಣೆ ಸಂಭವ. ಅದನ್ನು ಒಪ್ಪಿಕೊಳ್ಳಿ. ಕುಟುಂಬಸ್ಥರು ಕಿವಿಮಾತು ಹೇಳಿದರೆ ಅದನ್ನು ಪಾಲಿಸುವುದು ವಿಹಿತ.
ವೃಷಭ
ಸ್ವಂತ ಉದ್ದಿಮೆಯಲ್ಲಿ ಆಂಶಿಕ ಯಶಸ್ಸು. ಅನುಚಿತ ಆಹಾರ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ. ಪ್ರೀತಿಯ ವಿಚಾರದಲ್ಲಿ ಬಿಕ್ಕಟ್ಟು.
ಮಿಥುನ
ಉತ್ಸಾಹ ಹೆಚ್ಚಿಸುವ ಬೆಳವಣಿಗೆ. ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಮೀಪಿಸಿದೆ. ಅದೃಷ್ಟ ಜತೆಗಿದೆ, ಪೂರಕ ಪ್ರಸಂಗ ಸೃಷ್ಟಿಯಾಗಲಿದೆ.
ಕಟಕ
ನಿಮ್ಮನ್ನು ತುಳಿಯಲು ಕೆಲವರ ಯತ್ನ ನಡೆದರೂ ಅದು ಫಲ ನೀಡದು. ಅವರ ಮುಂದೆಯೇ ಯಶಸ್ಸು ಸಾಽಸುವಿರಿ.
ಸಿಂಹ
ಎಲ್ಲ ವಿಚಾರದಲ್ಲಿ ನಿಮಗೆ ಅನುಕೂಲಕರ. ಧನವೃದ್ಧಿ. ಕಾರ್ಯದಲ್ಲಿ ಯಶಸ್ಸು. ಪ್ರೀತಿ ಸಫಲ. ಆರೋಗ್ಯ ಸಮಸ್ಯೆ ಪರಿಹಾರ. ನೆಮ್ಮದಿ.
ಕನ್ಯಾ
ಎಂದಿಗಿಂತ ಹೆಚ್ಚು ಕಾರ್ಯದೊತ್ತಡ. ನಿಭಾಯಿಸಲು ಶಕ್ತ. ಈಡೇರಿಸಲಾಗದ ಆಶ್ವಾಸನೆ ಯಾರಿಗೂ ಕೊಡಬೇಡಿ.
ತುಲಾ
ನಿಮ್ಮ ಸಾಮರ್ಥ್ಯ ಅನಾವರಣಗೊಳ್ಳುವ ಪ್ರಸಂಗ ಒದಗೀತು. ಯಾವುದೋ ವಿಷಯ ಮನಸ್ಸಿಗೆ ಕಿರಿಕಿರಿ ತರುತ್ತದೆ. ಧ್ಯಾನ ಸಹಕಾರಿ.
ವೃಶ್ಚಿಕ
ಎಲ್ಲ ವಿಧದಲ್ಲೂ ಇಂದು ಸವಾಲಿನ ದಿನ. ಮನಸ್ಸು ಶಾಂತಗೊಳಿಸುವ ಹವ್ಯಾಸದಲ್ಲಿ ತೊಡಗಿ. ಬಂಧುಗಳ ಸಮಸ್ಯೆ ನಿಮ್ಮ ಮೇಲೆ ಎಳೆದುಕೊಳ್ಳದಿರಿ.
ಧನು
ಅದೃಷ್ಟ ನಿಮ್ಮ ಜತೆಗಿರದು. ಎಷ್ಟೇ ಪ್ರಯತ್ನ ಹಾಕಿದರೂ ಸೂಕ್ತ ಫಲ ದೊರಕದು. ಹಣ ಗಳಿಕೆಯ ವಿಚಾರದಲ್ಲೂ ಹಿನ್ನಡೆ ಕಾಣುವಿರಿ.
ಮಕರ
ದಿನವಿಡೀ ಒತ್ತಡ. ಯಾವುದೇ ಕೆಲಸ ಮುಗಿಸಿದರೂ ಮತ್ತೊಂದು ಕೆಲಸ ಹೆಗಲೇರುತ್ತದೆ.ಅಜೀರ್ಣ ಸಮಸ್ಯೆ ಕಾಡಬಹುದು.
ಕುಂಭ
ಏನೋ ಕಳಕೊಂಡ ಭಾವ ಕಾಡುವುದು. ಭಾವುಕ ಸನ್ನಿವೇಶ ಎದುರಿಸುವಿರಿ. ದೈಹಿಕ ನೋವೂ ಕಾಡಲಿದೆ. ಧ್ಯಾನ, ಯೋಗ ಸಹಕಾರಿ.
ಮೀನ
ಆತ್ಮೀಯರ ಹಿತಕ್ಕಾಗಿ ಇಂದು ಹೆಚ್ಚು ಗಮನ ಹರಿಸುವಿರಿ. ಕೆಲವು ಏರುಪೇರು ಎದುರಿಸುವ ಪ್ರಸಂಗ ಬಂದೀತು. ಮನೋದೃಢತೆಯಿರಲಿ.



