ಮೇಷ
ಅತೃಪ್ತಿ ತರುವ ಬೆಳವಣಿಗೆಯೇ ಹೆಚ್ಚು. ಬಂದುದನ್ನು ಸ್ವೀಕರಿಸಿ. ಹತಾಶೆ, ರೋಷ ಬೇಡ. ದಂಪತಿಗಳಿಗೆ ಹರ್ಷದ ಬೆಳವಣಿಗೆ.
ವೃಷಭ
ಬದುಕಲ್ಲಿ ಖುಷಿ ತರುವ ಹೊಸ ಬೆಳವಣಿಗೆ. ಕೈಗೊಂಡ ನಿರ್ಧಾರದಲ್ಲಿ ಯಶಸ್ಸು. ಹೊಸ ವ್ಯವಹಾರದಲ್ಲಿ ಹಣ ಹೂಡಿದರೆ ಸಫಲತೆ.
ಮಿಥುನ
ಪ್ರತಿಕೂಲ ಪರಿಸ್ಥಿತಿ ಎದುರಿಸಿದರೂ ಅದನ್ನು ನಿಮ್ಮ ಪರವಾಗಿ ಬದಲಿಸಿಕೊಳ್ಳಿ. ಕೌಟುಂಬಿಕ ಸಾಮರಸ್ಯ ಕೆಡದಂತೆ ನೋಡಿಕೊಳ್ಳಿ.
ಕಟಕ
ಕೆಲ ಸಮಯದಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗೆ ನಿರಾಳತೆ ಸಿಗಲಿದೆ. ಆರ್ಥಿಕ ಹೊರೆ ಅಧಿಕ. ಮನೆಯಲ್ಲಿ ವಾಗ್ವಾದ ಸಂಭವ.
ಸಿಂಹ
ಯಾವುದೋ ಸಮಸ್ಯೆ ಶಾಂತಿ ಕೆಡಿಸಲಿದೆ. ಕೆಲಸದಲ್ಲಿ ಇತರರಿಗಿಂತ ಹೆಚ್ಚು ಪರಿಪೂರ್ಣತೆ ಸಾಽಸುವಿರಿ. ಪ್ರೀತಿಯಲ್ಲಿ ವಿರಸ.
ಕನ್ಯಾ
ದಿನವಿಡೀ ಏನಾದರೊಂದು ಕೆಲಸ. ವಿರಾಮ ಸಿಗದು. ಖಾಸಗಿ ಬದುಕಲ್ಲಿ ಪ್ರತಿಕೂಲ ಸನ್ನಿವೇಶ. ಸ್ಥೈರ್ಯ ಕಳಕೊಳ್ಳದಿರಿ.
ತುಲಾ
ಯಶಸ್ವೀ ದಿನ. ಆರ್ಥಿಕ ಪ್ರಗತಿ. ಮೆಚ್ಚಿನ ಹವ್ಯಾಸದಲ್ಲಿ ಆನಂದ ಪಡೆಯುವಿರಿ. ಆರೋಗ್ಯ ಸಮಸ್ಯೆ ನಿವಾರಣೆ. ಚಿಂತೆ ಪರಿಹಾರ.
ವೃಶ್ಚಿಕ
ನೆಗೆಟಿವ್ ಚಿಂತನೆ ಬಾಽಸಲಿದೆ. ಅದನ್ನು ತೊಡೆಯಲು ಯತ್ನಿಸಿ. ಸಂಗಾತಿ ಜತೆ ಜಗಳ ಆಡದಿರಿ. ಹೊಂದಾಣಿಕೆ ಬದುಕಿಗೊಳಿತು.
ಧನು
ಪ್ರತಿಯೊಂದು ವಿಷಯದಲ್ಲಿ ಇಂದು ಎಚ್ಚರದಿಂದಿರಿ. ಭಾವನಾತ್ಮಕ ಏರುಪೇರು ಉಂಟಾದೀತು. ಖಿನ್ನತೆ ಬಾಽಸಬಹುದು.
ಮಕರ
ಕೆಲವು ಶುಭ ಬೆಳವಣಿಗೆ ಉಂಟಾಗಲಿದೆ. ಕ್ಲಿಷ್ಟವಾಗಿದ್ದ ಪರಿಸ್ಥಿತಿ ತಿಳಿಯಾಗಲಿದೆ. ಅನಿರೀಕ್ಷಿತ ದಿಕ್ಕಿನಿಂದ ಬೆಂಬಲ. ಆರ್ಥಿಕ ಉನ್ನತಿ.
ಕುಂಭ
ಯಶ ಸಾಽಸಲು ತಾಳ್ಮೆ ಅವಶ್ಯ. ದುಡುಕಿನ ನಡೆ ಬೇಡ. ಆರ್ಥಿಕ ಹಿನ್ನಡೆ ಬಾಽಸಬಹುದು. ಮನೆಯವರ ಸಂಗದಲ್ಲಿ ಸಮಾಧಾನ.
ಮೀನ
ದಿನವಿಡೀ ಅಡ್ಡಿಗಳು. ಮಹತ್ವದ ನಿರ್ಧಾರ ಮುಂದೂಡಿ. ದೊಡ್ಡ ಸಮಸ್ಯೆಗೆ ಸರಳ ಪರಿಹಾರವಿದೆ, ಅತ್ತ ಗಮನ ಹರಿಸಿರಿ.



