ದಿನಭವಿಷ್ಯ : ಹೊಸ ವ್ಯವಹಾರಕ್ಕೆ ಕೈ ಹಾಕ್ತಿದ್ದೀರಾ? ಎಚ್ಚರದಿಂದಿರಿ, ದಾರಿ ತಪ್ಪಿಸೋ ಜನರಿದ್ದಾರೆ!

ಮೇಷ
ಸಂಗಾತಿ ಜತೆಗೆ ವೈಮನಸ್ಸು ಸಂಭವ. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ವ್ಯವಹಾರದಲ್ಲಿ ಲಾಭ. ಉದ್ಯೋಗಾಕಾಂಕ್ಷಿಗಳಿಗೆ ಶುಭ ಬೆಳವಣಿಗೆ.

ವೃಷಭ
ಹೊಸ ವ್ಯವಹಾರಕ್ಕೆ ಕೈಹಾಕುವುದಾದರೆ ಎಚ್ಚರದಿಂದ ಹೆಜ್ಜೆಯಿಡಿ. ದಾರಿ ತಪ್ಪಿಸಲು ಕೆಲವರು ಯತ್ನಿಸುತ್ತಾರೆ. ಕೌಟುಂಬಿಕ ಒತ್ತಡ ಹೆಚ್ಚುವುದು.

ಮಿಥುನ
ಕೆಲಸದ ಒತ್ತಡ ಅಧಿಕ. ಕುಟುಂಬದ ಜತೆ ಹೆಚ್ಚು ಕಾಲ ಕಳೆಯಲು ಅವಕಾಶ ದೊರಕದು.  ಆರೋಗ್ಯಕರ ಆಹಾರವನ್ನೆ ಸೇವಿಸಿರಿ. ಹೊಟ್ಟೆ ಕೆಡದಂತೆ ನೋಡಿ.

ಕಟಕ
ಏಕತಾನತೆ ಕಾಡುವುದು. ಹೊಸತನಕ್ಕೆ ಹಾತೊರೆಯುವಿರಿ. ಹೊಸ ಹವ್ಯಾಸದಲ್ಲಿ ತೊಡಗಿಕೊಳ್ಳಿ. ಮನೆಯಲ್ಲಿ ಸಣ್ಣಪುಟ್ಟ ಜಗಳದಿಂದ ದೂರವಿರಿ.

ಸಿಂಹ
ಎಲ್ಲರ ಜತೆ ಉತ್ತಮ ಬಾಂಧವ್ಯಕ್ಕೆ ಆದ್ಯತೆ ಕೊಡಿ. ಅಹಂ ತ್ಯಜಿಸಿ. ಹೆಚ್ಚು ಹಣ ಸಂಪಾದಿಸಬೇಕೆಂಬ ಉದ್ದೇಶ ತಕ್ಷಣಕ್ಕೆ ಈಡೇರದು.

ಕನ್ಯಾ
ಅತ್ಯಂತ ಕ್ರಿಯಾಶೀಲ ದಿನವಿದು. ಒಂದಿಲ್ಲೊಂದು ಕೆಲಸದಲ್ಲಿ  ಸದಾ ನಿರತ. ಸಂಜೆ ವೇಳೆಗೆ ಬಸವಳಿಯುವಿರಿ. ಮಾನಸಿಕ ಒತ್ತಡ.

ತುಲಾ
ದಂಪತಿ ಮಧ್ಯೆ ಸಣ್ಣ ವಿಷಯಕ್ಕೆ ಮನಸ್ತಾಪ ಉಂಟಾದೀತು. ಸಹನೆಯಿಂದ ವರ್ತಿಸಬೇಕು. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ.

ವೃಶ್ಚಿಕ
ಕಠಿಣ ಕಾರ್ಯವನ್ನೂ ಸುಲಭವಾಗಿ ಮುಗಿಸುವಿರಿ. ಇತರರ ಸಹಕಾರ ನೆರವಿಗೆ ಬರುವುದು. ಮನೆಯಲ್ಲಿ ಅನವಶ್ಯ ವಾಗ್ವಾದಕ್ಕೆ ಇಳಿಯದಿರಿ.

ಧನು
ಕುಟುಂಬದ ಜತೆ ಕಾಲ ಕಳೆಯುವ ಅವಕಾಶ. ನಿಮ್ಮ ವ್ಯಕ್ತಿತ್ವವು ಕೆಲವರನ್ನು ಪ್ರಭಾವಿಸುವುದು. ವಿದ್ಯಾರ್ಥಿಗಳಿಗೆ ಹೆಚ್ಚು ಒತ್ತಡ.

ಮಕರ
ನಿಮ್ಮ ಕಾರ್ಯವು ಇತರರ ಮೆಚ್ಚುಗೆಗೆ ಪಾತ್ರವಾಗುವುದು. ಉದ್ದೇಶ ಸಾಧನೆಯಲ್ಲಿ ಸಫಲರಾಗುವಿರಿ. ಕೌಟುಂಬಿಕ ಮನಸ್ತಾಪ ಉಂಟಾದೀತು.

ಕುಂಭ
ಆಪ್ತರೊಡನೆ ಕಳೆದ ಕಾಲವು ನೆನಪಾಗಿ ಕಾಡುವುದು. ದೈಹಿಕ ಕ್ಷಮತೆ ಕಾಯ್ದುಕೊಳ್ಳಿ. ವ್ಯಾಯಾಮ, ಯೋಗ ಸಹಕಾರಿಯಾದೀತು. ಕೌಟುಂಬಿಕ ಶಾಂತಿ.

ಮೀನ
ಉದ್ಯೋಗದಲ್ಲಿ ಹೆಚ್ಚು ಒತ್ತಡ. ಕೆಲವರ ಅಸಹಕಾರ. ಸಂಬಂಧದಲ್ಲಿ ಅತೃಪ್ತಿ. ಇದರಿಂದಾಗಿ ಮಾನಸಿಕ ಅಸಹನೆ. ಸಂಯಮ ಕಾಯ್ದುಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!