January16, 2026
Friday, January 16, 2026
spot_img

ದಿನಭವಿಷ್ಯ: ಸಮಯಕ್ಕೆ ತಕ್ಕಂತೆ ಸೂಕ್ತ ನಿರ್ಧಾರ ತಾಳಬೇಕು, ಆಲೋಚಿಸಿ

ಮೇಷ
ಸಣ್ಣ ವಿಷಯಕ್ಕೂ ರೇಗುವ ಸನ್ನಿವೇಶ ಉಂಟಾದೀತು. ತಾಳ್ಮೆ ವಹಿಸಿ. ನಿಮ್ಮ ಕೆಲಸದಲ್ಲಿ ಬೇಕೆಂದೇ ಕೆಲವರು ತಪ್ಪು ಹುಡುಕುವರು.                  
ವೃಷಭ
ಸಂಗಾತಿಯ ವರ್ತನೆ ಅಸಮಾಧಾನ ಉಂಟು ಮಾಡಬಹುದು. ವಾಗ್ವಾದ ಸಂಭವ. ನಿಮ್ಮಿಂದ ತಾಳ್ಮೆಯ ನಡೆ ಅವಶ್ಯ. ಖರ್ಚಿನ ಹಾದಿ.    
ಮಿಥುನ
ಅಸ್ಥಿರ, ಅಶಾಂತ ಮನಸ್ಥಿತಿ. ಕೆಲವು ಬೆಳವಣಿಗೆ ಅಸಹನೆ ಸೃಷ್ಟಿಸಲಿದೆ. ಇದರ ಮಧ್ಯೆಯೆ ಧನಪ್ರಾಪ್ತಿ, ಕಾರ್ಯೋಲ್ಲಾಸ.
ಕಟಕ
ಅಗತ್ಯಕ್ಕಿಂತ ಹೆಚ್ಚು ಹಣ ಖರ್ಚಾದರೆ ಚಿಂತೆ ಮಾಡದಿರಿ. ನಿಮ್ಮ ಹಿತೈಷಿಗಳ ಕುರಿತಂತೆ ವಿನಯವಿರಲಿ. ಪ್ರೀತಿಯಲ್ಲಿ ಯಶಸ್ಸು.
ಸಿಂಹ
ಇತ್ತೀಚಿನ ಕೆಲವು ಬೆಳವಣಿಗೆಗಳ ಕಾರಣದಿಂದ ಧಾರ್ಮಿಕ ಭಾವನೆ ಹೆಚ್ಚಬಹುದು. ಕಷ್ಟ ಮರೆಯಲು ದೇವರ ಮೊರೆ ಹೋಗುವಿರಿ.
ಕನ್ಯಾ
ಇತರರ ಒಳ್ಳೆಯ ಕೆಲಸ ಶ್ಲಾಸಿರಿ. ನಿಮ್ಮ ವರ್ತನೆಯಿಂದ ಇತರರ ಮೆಚ್ಚುಗೆ ಗಳಿಸುವಿರಿ. ಕೌಟುಂಬಿಕ ಸಂತೋಷ. ಬಂಧುಗಳ  ಭೇಟಿ.
ತುಲಾ
ವ್ಯವಹಾರದ ಒತ್ತಡ ಮಧ್ಯೆಯೂ ಖುಷಿ ಪಡುವ ಪ್ರಸಂಗ ಉಂಟಾಗಲಿದೆ. ಯಾರದೋ ಅಪವಾದ ನಿಮ್ಮ ಹೆಗಲೇರಬಹುದು. ಎಚ್ಚರ ವಹಿಸಿರಿ.  
ವೃಶ್ಚಿಕ
ಸಮಯಕ್ಕೆ ತಕ್ಕಂತೆ ಸೂಕ್ತ ನಿರ್ಧಾರ ತಾಳಿ. ಹಳೆಯ ನಿರ್ಧಾರಕ್ಕೇ ಅಂಟಿಕೊಂಡು ಕೂರದಿರಿ. ಆಪ್ತರಿಂದ ಶುಭ ಸುದ್ದಿ ಕೇಳಿಬಂದೀತು.          
ಧನು
ಎಲ್ಲರನ್ನು ಕುರುಡಾಗಿ ನಂಬದಿರಿ. ನಿಮ್ಮನ್ನು ವಂಚಿಸಲು ಯತ್ನ ನಡೆಯುತ್ತದೆ. ಪ್ರೀತಿಯ ಅಭಿವ್ಯಕ್ತಿ ಪ್ರತಿಕೂಲ ಫಲಿತಾಂಶ ತಂದೀತು.
ಮಕರ
 ನಿಮ್ಮ ಸಾಧನೆಯ ಶ್ರೇಯಸ್ಸು ಇತರರು ಕಸಿದುಕೊಂಡಾರು. ಎಚ್ಚರದಿಂದಿರಿ. ಕೌಟುಂಬಿಕ ಬಿಕ್ಕಟ್ಟು.  ಅತಿರೇಕದ ಪ್ರತಿಕ್ರಿಯೆ ತೋರದಿರಿ.  
ಕುಂಭ
ಕೆಲವು ಬೆಳವಣಿಗೆ ನಿರಾಶೆ ತರುವುದು. ಬಂಧುವಿನ ಜತೆ ವಿರಸ. ಯಶಸ್ಸಿನ ದಾರಿಯಲ್ಲಿ ವಿಘ್ನ ತಲೆದೋರಲಿದೆ. ಸಂಯಮವಿರಲಿ.
 ಮೀನ
ಪ್ರಮುಖ ಕೆಲಸದ ಹೊಣೆ ಬೀಳಲಿದೆ. ಸರಿಯಾಗಿ ನಿಭಾಯಿಸಿ. ಹಳೆಯ ಸ್ನೇಹಿತರ ಭೇಟಿ. ಕೌಟುಂಬಿಕ ಸಮ್ಮಿಲನ.  ಖರ್ಚು ನಿಯಂತ್ರಿಸಿ

Must Read

error: Content is protected !!