ಮೇಷ
ಇಂದು ಸಕಾಲದಲ್ಲಿ ಕಾರ್ಯ ಮುಗಿಯದು. ಕೆಲ ವಿದ್ಯಮಾನಗಳಿಗೆ ಭಾವಾವೇಶ ತೋರುವಿರಿ. ಶಾಂತಚಿತ್ತರಾಗಿ ಪ್ರತಿಕ್ರಿಯೆ ತೋರುವುದು ಅವಶ್ಯ.
ವೃಷಭ
ಇನ್ನಷ್ಟು ವಿಳಂಬ ಬೇಡ, ಪ್ರಮುಖ ನಿರ್ಧಾರ ಇಂದೇ ತಾಳಿ. ಹಿರಿಯರಿಗೆ ದೈಹಿಕ ನೋವು. ಕೆಲವರ ವಿರೋಧ ಕಟ್ಟಿಕೊಳ್ಳುವಿರಿ.
ಮಿಥುನ
ವೃತ್ತಿ ಒತ್ತಡ ಕಡಿಮೆ. ಆದರೆ ಖಾಸಗಿ ಬದುಕಲ್ಲಿ ಹೊಸ ಸವಾಲು ಉದ್ಭವ. ದಿನದಂತ್ಯಕ್ಕೆ ಸಂತೋಷ ಪಡುವ ಬೆಳವಣಿಗೆ. ಆಪ್ತ ಸಂಗದಿಂದ ನೆಮ್ಮದಿ.
ಕಟಕ
ಉದ್ಯೋಗ ಬದಲಾವಣೆಗೆ ಕಾಲ ಪಕ್ವವಾಗಿದೆ. ಆಪ್ತರ ಕುರಿತಂತೆ ಭಾವುಕ ಪ್ರಸಂಗ ಎದುರಿಸುವಿರಿ. ಹಣದ ಬಿಕ್ಕಟ್ಟು ಪರಿಹಾರ.
ಸಿಂಹ
ಖಾಸಗಿ ಮತ್ತು ವೃತ್ತಿ ಬದುಕಲ್ಲಿ ಪೂರಕ ದಿನ. ಸಂಕೀರ್ಣ ಕಾರ್ಯವನ್ನು ಸುಲಭದಲ್ಲಿ ಮುಗಿಸುವಿರಿ. ವಿವಾಹಿತರ ಪಾಲಿಗೆ ಶುಭ ಬೆಳವಣಿಗೆ ಸಂಭವ.
ಕನ್ಯಾ
ಸಂಬಂಧದಲ್ಲಿ ಉಂಟಾಗಿದ್ದ ಸಮಸ್ಯೆ ನಿವಾರಣೆ. ಬಂಧುತ್ವ ಗಟ್ಟಿಯಾಗಲಿದೆ. ಹಣದ ವಿಚಾರದಲ್ಲಿ ಎಚ್ಚರದಿಂದ ಕಾರ್ಯನಿರ್ವಹಿಸಿ.
ತುಲಾ
ಎಲ್ಲ ಇದ್ದೂ ಅಸಂತೃಪ್ತಿಯ ಭಾವ. ಕೆಲ ವಿಷಯ ಅಗತ್ಯಕ್ಕಿಂತ ಗಂಭೀರ ತೆಗೆದುಕೊಳ್ಳದಿರಿ. ನೆಮ್ಮದಿ ಕೆಡಿಸಲು ಅವಕಾಶ ಕೊಡದಿರಿ.
ವೃಶ್ಚಿಕ
ಏರಿಳಿತಗಳ ದಿನ. ವೃತ್ತಿಯಲ್ಲಿ ಹೊಣೆ ಹೆಚ್ಚು. ಹೊಸ ಉದ್ಯೋಗ ಅವಕಾಶ. ಪ್ರೀತಿಯಲ್ಲಿ ಅಪಸ್ವರ ಎದ್ದೀತು. ವಿವೇಕದಿಂದ ವ್ಯವಹರಿಸಿ. ಧನು
ವೃತ್ತಿಯ ಒತ್ತಡ ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ವೃತ್ತಿ ಮಾತ್ಸರ್ಯ ನೆಮ್ಮದಿ ಕಲಕಬಹುದು.
ಮಕರ
ಪ್ರತಿಯೊಬ್ಬರ ವಿಷಯವನ್ನೂ ನೀವೇ ನಿರ್ಧರಿಸುವವರು ಎಂಬಂತೆ ವರ್ತಿಸದಿರಿ. ನಿಮ್ಮ ನಡೆಗೆ ಕೆಲವರ ವಿರೋಧ ಸಂಭವ.
ಕುಂಭ
ಪ್ರೀತಿಯಲ್ಲಿ ಗುಣಾತ್ಮಕ ಬೆಳವಣಿಗೆ. ಆತ್ಮೀಯರ ಬೆಂಬಲ. ಮನದ ಒತ್ತಡ ನಿವಾರಣೆ. ವೃತ್ತಿಯಲ್ಲಿ ಇತರರ ಸಹಕಾರ ಪಡೆಯುವಿರಿ. ಮೀನ
ವೃತ್ತಿಯ ಹೆಚ್ಚುವರಿ ಹೊಣೆಯನ್ನು ಸರಿಯಾಗಿ ನಡೆಸುವಿರಿ. ಶೇರು ವ್ಯವಹಾರ ಲಾಭ ತರಲಿದೆ. ಮನೆಯ ಕಾರ್ಯ ಸುಗಮವಾಗಿ ಸಾಗಲಿದೆ.


