ದಿನಭವಿಷ್ಯ: ಪ್ರಾಮಾಣಿಕವಾಗಿ ಮಾಡಿದ ಕೆಲಸಕ್ಕೆ ಪ್ರತಿಫಲ, ಧನಲಾಭ!

ಮೇಷ
ನಿಮ್ಮ ಕಠಿಣ ಪರಿಶ್ರಮದಿಂದ ಯಶ ಪಡೆಯುವಿರಿ. ಪ್ರಮುಖ ನಿರ್ಧಾರ ಉತ್ತಮ ಫಲವನ್ನೆ ನೀಡುವುದು. ಶಾಪಿಂಗ್‌ಗೆ ಸೂಕ್ತ ದಿನ. ಇಚ್ಛಿತ ವಸ್ತು ಖರೀದಿ.

ವೃಷಭ
ಕ್ಲಿಷ್ಟಕರ ಪರಿಸ್ಥಿತಿ ಎದುರಿಸುವಿರಿ. ಸಮಯೋಚಿತ ಕ್ರಮ ತೆಗೆದುಕೊಳ್ಳಿ. ಇತರರನ್ನು ಆರೋಪಿಸಲು, ನಿಂದಿಸಲು ಹೋಗದಿರಿ

ಮಿಥುನ
ಇಂದು ನಿಮ್ಮ ಹಿತಾಸಕ್ತಿ ಕಾಯ್ದುಕೊಳ್ಳಲು ಸಫಲರಾಗುವಿರಿ. ಪ್ರತಿಕೂಲ ಸನ್ನಿವೇಶ ನಿವಾರಣೆ. ಆಪ್ತರಿಂದ ಉತ್ತಮ ಸಹಕಾರ ಪಡೆಯುವಿರಿ.

ಕಟಕ
ವೃತ್ತಿಯಲ್ಲೂ , ಖಾಸಗಿ ಬದುಕಲ್ಲೂ ಯಶಸ್ಸು. ಹಣ ಹೂಡಿಕೆಯಲ್ಲಿ ಲಾಭ ಪಡೆಯುವಿರಿ. ನಿಮ್ಮ ಸಾಮರ್ಥ್ಯವನ್ನು ಇತರರೂ ಗುರುತಿಸುವರು.

ಸಿಂಹ
ನಿರಾಳವಾಗಿ ದಿನ ಕಳೆಯುವ ಪ್ರಸಂಗ ಒದಗುವುದು. ಕಾಡುತ್ತಿದ್ದ ಸಮಸ್ಯೆ ಪರಿಹಾರ. ಆಹಾರ ಸೇವನೆಯಲ್ಲಿ ಹಿತಮಿತ ಸಾಧಿಸಿರಿ.

ಕನ್ಯಾ
ಇಂದು ನಿಮ್ಮ ಕಾರ್ಯದಲ್ಲಿ ಸಾಧಾರಣ ಯಶಸ್ಸು. ನಿರಾಳವಾಗಿ ದಿನ ಕಳೆಯಲು ಸಾಧ್ಯವಾಗದು. ಚಿಂತೆ ಕಾಡುವುದು.

ತುಲಾ
ಹೆಚ್ಚು ಉತ್ಸಾಹಭರಿತ ದಿನ. ಆದರೆ ಅದರ ಹಿಂದೆಯೇ ನಿಮಗೆ ಪ್ರತಿಕೂಲ ಬೆಳವಣಿಗೆ ಇರಬಹುದು. ಹಾಗಾಗಿ ತುಸು ಎಚ್ಚರದಿಂದಿರಿ. ಕೌಟುಂಬಿಕ ಒತ್ತಡ.

ವೃಶ್ಚಿಕ
ನಿಮ್ಮ ಪ್ರಾಮಾಣಿಕ ಕೆಲಸಕ್ಕೆ ಪ್ರತಿಫಲ ಪಡೆಯುವಿರಿ. ಧನಲಾಭ, ಪದೋನ್ನತಿ ಸಂಭವ. ಕೌಟುಂಬಿಕ ಬಿಕ್ಕಟ್ಟು ಪರಿಹಾರಕ ಸಂಕೇತ ತೋರುವುದು.

ಧನು
ಕುಟುಂಬ ಸದಸ್ಯರ ಜತೆ ವಾಗ್ವಾದಕ್ಕೆ ಇಳಿಯಬೇಡಿ. ಅದು ಇಡೀ ದಿನದ ನೆಮ್ಮದಿ ಕಲಕಬಹುದು. ನಿಮ್ಮ ವೃತ್ತಿಯಲ್ಲಿ ಮನ್ನಣೆ ಪಡೆಯುವಿರಿ.

ಮಕರ
ಯಾವುದೋ ವಿಷಯ ಉದ್ವಿಗ್ನತೆ ಸೃಷ್ಟಿಸುವುದು. ಅದನ್ನು ಸಮಾಧಾನದಿಂದ ನಿಭಾಯಿಸಬೇಕು. ಅವಶ್ಯ ನೆರವನ್ನೂ ಪಡೆಯಿರಿ.

ಕುಂಭ
ಸಮಸ್ಯೆಯೊಂದು ಪರಿಹಾರವಾದ ನಿರಾಳ ಭಾವ. ಆತ್ಮೀಯರ ಜತೆಗಿನ ಮನಸ್ತಾಪ ಅಂತ್ಯ. ಕುಟುಂಬದಲ್ಲಿ  ಸಂತೋಷದ ವಾತಾವರಣ.

ಮೀನ
ಎಲ್ಲ ಕಾರ್ಯದಲ್ಲಿ ಯಶಸ್ಸು. ಪ್ರಮುಖ ನಿರ್ಧಾರ ತಾಳಲು ಸೂಕ್ತ ದಿನ. ಆತ್ಮೀಯರ ಜತೆ ಭಾವನಾತ್ಮಕ ಕ್ಷಣ ಎದುರಿಸುವಿರಿ. ಸಂಯಮ ಅವಶ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!