ಮೇಷ
ಪ್ರೀತಿಪಾತ್ರರ ಜತೆ ಕಾಲಕ್ಷೇಪ. ಉತ್ಸಾಹ, ಸಂಭ್ರಮ. ಆದಾಯ ಹೆಚ್ಚಳ. ದೈಹಿಕ ಕ್ಷಮತೆ ಹೆಚ್ಚಿಸುವ ಜೀವನಶೈಲಿ ರೂಪಿಸಿಕೊಳ್ಳಿ.
ವೃಷಭ
ಪ್ರಕೃತಿ ವೀಕ್ಷಣೆ, ಧ್ಯಾನ, ಮೆಚ್ಚಿನ ಹವ್ಯಾಸ ಇವುಗಳಲ್ಲಿ ಕಳೆಯುವಿರಿ.ವೃತ್ತಿ ಒತ್ತಡ ಮರೆಗೆ ಸರಿಯಲಿದೆ. ಹಿರಿಯರಿಗೆ ಆರೋಗ್ಯ ಚಿಂತೆ.
ಮಿಥುನ
ಸುತ್ತಲಿನ ಪರಿಸರದಲ್ಲಿ ನಿಮಗೆ ಕಳೆದುಹೋದ ಅನುಭವ. ಎಲ್ಲರ ಜತೆ ಬೆರೆಯಲು ಮನವಿಲ್ಲ. ಹಣ ನಷ್ಟ ಸಂಭವಿಸೀತು, ಎಚ್ಚರ.
ಕಟಕ
ಅಲ್ಪಾವಽ ಗುರಿ ಸಾಽಸುವಿರಿ. ಕೆಲಸದ ಒತ್ತಡ ಕಡಿಮೆ. ಖರ್ಚು ಅಽಕ, ಆದರೆ ಆ ಬಗ್ಗೆ ನಿಮಗೆ ಚಿಂತೆಯಿಲ್ಲ. ತಿನಿಸು ಹಿತಮಿತವಾಗಿರಲಿ.
ಸಿಂಹ
ನೀವು ಕೈಗೊಳ್ಳುವ ಕಾರ್ಯದಲ್ಲಿ ಯಶಸ್ಸು. ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ. ಈ ಮಧ್ಯೆ ಆರೋಗ್ಯ ಕಡೆಗಣಿಸಬೇಡಿ.
ಕನ್ಯಾ
ಕಾರ್ಯದಲ್ಲಿ ಯಶ. ಆದರೆ ಪ್ರತಿಕೂಲ ಸನ್ನಿವೇಶ ಎದುರಾದರೆ ತಾಳ್ಮೆ ಕಳೆದುಕೊಳ್ಳದಿರಿ. ಸಮಾಧಾನದಿಂದ ಪರಿಸ್ಥಿತಿ ನಿಭಾಯಿಸಿ.
ತುಲಾ
ವೃತ್ತಿಯಿಂದ ವಿರಾಮ ಬಯಸಿದರೂ ಅದು ಸಿಗದು. ಆಪ್ತರ ಜತೆ ಭಿನ್ನಾಭಿಪ್ರಾಯ. ಅಹಿತ ಆಹಾರ ತ್ಯಜಿಸಿ. ಹೊಟ್ಟೆ ಸಮಸ್ಯೆಗೆ ಎಡೆಮಾಡದಿರಿ.
ವೃಶ್ಚಿಕ
ಕೆಲಸದ ಬಗ್ಗೆಯೆ ಇಂದು ಅಽಕ ಗಮನ ಹರಿಸುವಿರಿ. ಕುಟುಂಬದ ಹಿತ ಕಡೆಗಣಿಸಬೇಡಿ. ಅವರ ಬೇಕುಬೇಡಕ್ಕೂ ಗಮನ ಕೊಡಿರಿ. ಧನು
ಮಾನಸಿಕವಾಗಿ ದೃಢತೆ ಪ್ರದರ್ಶಿಸುವಿರಿ. ಭಾವುಕ ಸನ್ನಿವೇಶ ಸಮರ್ಥ ನಿಭಾವಣೆ. ಆದಾಯದಲ್ಲಿ ಪ್ರಗತಿ. ಕೌಟುಂಬಿಕ ಸಾಮರಸ್ಯ.
ಮಕರ
ಕಾರ್ಯಸಿದ್ಧಿ. ವೃತ್ತಿ ಮತ್ತು ಕುಟುಂಬದ ಮಧ್ಯೆ ಹೊಂದಾಣಿಕೆ ಸಾಽಸಿ. ಪ್ರಯಾಣದ ಸಿದ್ಧತೆಯಲ್ಲಿ ಸಮಸ್ಯೆ ಉಂಟಾದೀತು. ಆರ್ಥಿಕ ಒತ್ತಡ ಹೆಚ್ಚು.
ಕುಂಭ
ಅನಿರೀಕ್ಷಿತ ಧನ ಲಾಭ. ಪ್ರೀತಿಯಲ್ಲಿ ಯಶಸ್ಸು. ಸಮಸ್ಯೆ ಪರಿಹಾರದಿಂದ ಮಾನಸಿಕ ದೃಢತೆ. ಟೀಕೆಗಳಿಗೆ ತಲೆ ಕೆಡಿಸಿಕೊಳ್ಳದಿರಿ.
ಮೀನ
ಪ್ರತಿ ಕೆಲಸವನ್ನೂ ಅತಿಯಾಗಿ ಮಾಡುವಿರಿ. ತುಸು ನಿಧಾನಿಸಿ. ದೂರ ಇರುವ ಆತ್ಮೀಯರ ಜತೆ ವಿಶ್ವಾಸದ ಕೊರತೆ ಸಂಭವ. ಭಾವುಕ ಸನ್ನಿವೇಶ.



