September 16, 2026
Wednesday, September 16, 2026
spot_img

Summer Special | ಬಾಯಲ್ಲಿಟ್ಟರೆ ಕರಗಿ ಹೋಗುತ್ತೆ ಈ ಕೇಸರ್ ಬಾದಾಮ್ ಕುಲ್ಫಿ

ಬೇಸಿಗೆಯ ಬಿಸಿಲಿನಲ್ಲಿ ತಂಪಾಗಿ, ಸಿಹಿಯಾಗಿ ತಿನ್ನಬೇಕು ಅನ್ನಿಸಿದರೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಬೆಸ್ಟ್ ಡೆಸರ್ಟ್ ಅಂದ್ರೆ ಕೇಸರ್ ಬಾದಾಮ್ ಕುಲ್ಫಿ. ಮಕ್ಕಳಿಗೆ ಇದರ ರುಚಿ ತುಂಬಾ ಇಷ್ಟವಾಗುತ್ತೆ. ಐಸ್ ಕ್ರೀಂ ತರಹ ಸಾಫ್ಟ್ ಆಗಿ, ರುಚಿಯಲ್ಲಿ ರಿಚ್ ಆಗಿರುವ ಈ ರೆಸಿಪಿ ಬೇಸಿಗೆ ಮಧ್ಯಾಹ್ನ ಡಿನ್ನರ್ ನಂತರ ತಿನ್ನೋಕೆ ಪರ್ಫೆಕ್ಟ್.

ಬೇಕಾಗುವ ಪದಾರ್ಥಗಳು

ಹಾಲು – 1 ಲೀಟರ್
ಸಕ್ಕರೆ – ¼ ಕಪ್
ಕೇಸರಿ – 8 ರಿಂದ 10 ಎಳೆಗಳು
ಏಲಕ್ಕಿ ಪುಡಿ – ½ ಟೀ ಸ್ಪೂನ್
ಬಾದಾಮಿ – 10 ರಿಂದ 12 (ಸಣ್ಣಗೆ ಕತ್ತರಿಸಿದ)
ಪಿಸ್ತಾ – 8 ರಿಂದ 10
ಹಾಲಿನ ಪುಡಿ ಅಥವಾ ಖೋಯಾ – 2 ರಿಂದ 3 ಚಮಚ
ಕಂಡೆನ್ಸ್ಡ್ ಮಿಲ್ಕ್ – 3 ಚಮಚ (ಹೆಚ್ಚು ರುಚಿಗೆ)

ಮಾಡುವ ವಿಧಾನ

ಮೊದಲು ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ. ಹಾಲು ಅರ್ಧದಷ್ಟು ಕಡಿಮೆಯಾಗುವವರೆಗೆ ನಿಧಾನವಾಗಿ ಕುದಿಸುತ್ತಾ ಇರಿ.

ನಂತರ ಅದಕ್ಕೆ ಕೇಸರಿ, ಸಕ್ಕರೆ, ಏಲಕ್ಕಿ ಪುಡಿ, ಬಾದಾಮಿ ಮತ್ತು ಪಿಸ್ತಾ ಸೇರಿಸಿ ಚೆನ್ನಾಗಿ ಕಲಸಿ. ಇನ್ನಷ್ಟು ಕ್ರೀಮಿ ರುಚಿಗೆ ಹಾಲಿನ ಪುಡಿ ಅಥವಾ ಖೋಯಾ ಜೊತೆಗೆ ಕಂಡೆನ್ಸ್ಡ್ ಮಿಲ್ಕ್ ಸೇರಿಸಿ.

ಮಿಶ್ರಣ ಸಂಪೂರ್ಣ ತಣ್ಣಗಾದ ಬಳಿಕ ಕುಲ್ಫಿ ಅಚ್ಚುಗಳಲ್ಲಿ ಅಥವಾ ಸ್ಟೀಲ್ ಗ್ಲಾಸ್‌ನಲ್ಲಿ ಸುರಿಯಿರಿ. 8 ರಿಂದ 10 ಗಂಟೆಗಳ ಕಾಲ ಫ್ರೀಜರ್‌ನಲ್ಲಿ ಇಡಿ.

ಸೆಟ್ ಆದ ಬಳಿಕ ಮೇಲೆ ಬಾದಾಮಿ ಚೂರುಗಳನ್ನು ಹಾಕಿ ಮಕ್ಕಳಿಗೆ ಕೊಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !