ಮೇಷ
ಸಣ್ಣ ವಿಷಯ ಹೆಚ್ಚು ಜಟಿಲಗೊಳಿಸಬೇಡಿ. ಸಂತೋಷ ಪಡಲು ನಿಮ್ಮ ಮನಸ್ಥಿತಿ ಬದಲಿಸುವುದೂ ಅಗತ್ಯ. ವೃತ್ತಿಯಲ್ಲಿ ಅಧಿಕ ಹೊಣೆಗಾರಿಕೆ.
ವೃಷಭ
ನಿಮ್ಮ ಉತ್ತಮ ನಿರ್ವಹಣೆಗೆ ಸೂಕ್ತ ಪ್ರತಿ-ಲ ಸಿಗಲಿದೆ. ಸಂತಾನ ಅಪೇಕ್ಷಿತರಿಗೆ ಶುಭಪ್ರದ ಬೆಳವಣಿಗೆ. ಆದಾಯ ಹೆಚ್ಚಳ.
ಮಿಥುನ
ಖರ್ಚು ನಿಮ್ಮ ಮಿತಿಯೊಳಗಿರಲಿ. ವ್ಯವಹಾರದಲ್ಲಿ ಯಶಸ್ಸು. ಪ್ರೇಮಿಯಿಂದ ಪೂರಕ ಸ್ಪಂದನ. ಮೀನಮೇಷ ಎಣಿಸುತ್ತಾ ಕೂರಬೇಡಿ.
ಕಟಕ
ವೃತ್ತಿಯಲ್ಲಿ ಪ್ರಗತಿ. ಬಾಕಿ ಉಳಿದ ಕಾರ್ಯ ಪೂರ್ಣ. ಹೊಸ ಉದ್ಯೋಗವಕಾಶ. ಪ್ರೀತಿಯಲ್ಲೂ ಸಂತೋಷದ ಬೆಳವಣಿಗೆ.
ಸಿಂಹ
ನೀವು ಅಚ್ಚರಿಪಡುವ ಬೆಳವಣಿಗೆ ಉಂಟಾದೀತು. ವೃತ್ತಿಯಲ್ಲಿ ಕಿರುಕುಳ ಎದುರಿಸುವಿರಿ. ಕುಟುಂಬ ಸಂಬಂಧ ಬಲಗೊಳಿಸಿ. ಭಾವುಕತೆ ನಿಯಂತ್ರಿಸಿ.
ಕನ್ಯಾ
ಮನೆಗೆ ಸಂಬಂಽಸಿ ಪ್ರಮುಖ ನಿರ್ಧಾರ ತಾಳಬೇಕಾದೀತು. ಆರ್ಥಿಕ ಪ್ರಗತಿ. ಅನಾರೋಗ್ಯ ನಿವಾರಣೆ. ಹಳೆ ಸ್ನೇಹಿತರ ಸಂಪರ್ಕದಿಂದ ಖುಷಿ.
ತುಲಾ
ನೀವು ಹಿಂದೆ ತೋರಿದ ಧೋರಣೆಗೆ ಕೆಲವರ ಸಂತೃಪ್ತಿ. ಬಳಿಕ ಎಲ್ಲ ಸರಿಯಾಗಲಿದೆ. ಆತ್ಮೀಯರ ಸಂಗದಲ್ಲಿ ನಿರಾಳತೆ.
ವೃಶ್ಚಿಕ
ದಿನವಿಡೀ ಉತ್ಸಾಹ. ಹೊಣೆಗಾರಿಕೆ ಮುಗಿದು ನಿರಾಳತೆಯ ಭಾವ. ಬಯಸಿದ ಗುರಿ ಸಾಧಿಸುವಿರಿ. ಆದಾಯದಲ್ಲಿ ಹೆಚ್ಚಳ.
ಧನು
ಚಿಂತೆ ತಂದಿದ್ದ ವಿಷಯ ಇತ್ಯರ್ಥ. ಆತ್ಮವಿಶ್ವಾಸ ಹೆಚ್ಚಿಸುವ ಪ್ರಸಂಗ. ಆರ್ಥಿಕ ವ್ಯವಹಾರದಲ್ಲಿ ಲಾಭ. ಕೌಟುಂಬಿಕ ಸೌಹಾರ್ದ.
ಮಕರ
ಯಾರದೋ ಮಾತು ಮನಸ್ಸು ಕೆಡಿಸಬಹುದು. ಅಂತಹ ಮಾತಿಗೆ ಆಸ್ಪದ ಕೊಡದಂತೆ ವರ್ತಿಸಿರಿ. ದೌರ್ಬಲ್ಯಕ್ಕೆ ಸುಲಭ ಬಲಿಯಾಗಬೇಡಿ. ಕುಂಭ
ಆದಾಯದಲ್ಲಿ ಹೆಚ್ಚಳ. ಆಪ್ತರ ಜತೆಗಿನ ಭಿನ್ನಮತ ಸುಗಮ ಪರಿಹಾರ. ಕಠಿಣ ಕಾರ್ಯ ಇಂದು ಕೈಗೆತ್ತಿಕೊಳ್ಳಬೇಡಿ.ಕಾದುನೋಡಿರಿ.
ಮೀನ
ವೃತ್ತಿ ಒತ್ತಡ ಅಧಿಕವಿದ್ದರೂ ಕುಟುಂಬದ ಸಂಗಡ ಆತ್ಮೀಯ ಕಾಲ ಕಳೆಯುವ ಅವಕಾಶವೂ ಸಿಗಲಿದೆ. ಆರ್ಥಿಕ ಒತ್ತಡ.



