February 17, 2026
Tuesday, February 17, 2026
spot_img

ದಿನಭವಿಷ್ಯ: ಹೃದಯದ ಭಾವನೆ ಮುಚ್ಚಿಟ್ಟು ಪ್ರಯೋಜನವಿಲ್ಲ! ಇಂದೇ ಹೇಳಿಬಿಡಿ

ಮೇಷ.
ಹಣಕಾಸು ಸ್ಥಿತಿ ಅಷ್ಟೇನೂ ಪೂರಕವಲ್ಲ.  ಕ್ಲಿಷ್ಟ ಪರಿಸ್ಥಿತಿಯಲ್ಲಿ ದುಡುಕಿನ ನಿರ್ಧಾರ ತಾಳದಿರಿ. ಸಂಯಮದ ನಡೆಯಿರಲಿ.  
ವೃಷಭ
ಪ್ರತಿಯೊಂದನ್ನೂ ಸ್ಪಷ್ಟ ಮನಸ್ಥಿತಿಯೊಂದಿಗೆ ನಿಭಾಯಿಸಿ. ಗೊಂದಲಕ್ಕೆ ಅವಕಾಶ ಕೊಡಬೇಡಿ. ಚಂಚಲ ನಿಲುವು ಒಳ್ಳೆಯ -ಲ ತರಲಾರದು.          
ಮಿಥುನ
ಆಪ್ತರ ಜತೆ ವ್ಯವಹರಿಸುವಲ್ಲಿ ನಿಮ್ಮ ಅಹಂ ಸಮಸ್ಯೆ ತರುತ್ತದೆ. ಅವರ ಬಗ್ಗೆ ಸೂಕ್ತ ಸ್ಪಂದನೆ ಇರಲಿ. ಸಣ್ಣ ಮಾತಿಗೂ ಜಗಳಕ್ಕೆ ಇಳಿಯಬೇಡಿ.
ಕಟಕ
ಮನೆಯವರಿಗೆ ಸಂಬಂಧಿಸಿ ಏನೋ ಚಿಂತೆ ಕಾಡುತ್ತದೆ. ಆ ಬಗ್ಗೆ ನಿಮ್ಮಲ್ಲೇ ಗೊಂದಲವಿದೆ. ಮೊದಲು ಖಚಿತ ನಿಲುವು ತಾಳಿ. ಆರ್ಥಿಕ ಹಿನ್ನಡೆ.        
ಸಿಂಹ
ಅದೃಷ್ಟ ಇಂದು ನಿಮ್ಮ ಜತೆಗಿಲ್ಲ. ಯಾವುದಾದರೂ ಯೋಜನೆ ಇದ್ದಲ್ಲಿ ಮುಂದೂಡಿ. ಖರೀದಿ ಹುಮ್ಮಸ್ಸು ಜೇಬಿಗೆ ದೊಡ್ಡ ಕತ್ತರಿ ಹಾಕಬಹುದು.    
ಕನ್ಯಾ
ಹೃದಯದ ಭಾವನೆ ಮುಚ್ಚಿಡಬೇಡಿ. ಸಂಬಂಧಿಸಿದವರ ಮುಂದೆ ತೆರೆದಿಡಿ. ಆರ್ಥಿಕ ಪರಿಸ್ಥಿತಿ ಉತ್ತಮ. ಬಂಧುವೊಬ್ಬರ ಆರೋಗ್ಯ ಕೆಡಬಹುದು.    
ತುಲಾ
ಏರುಪೇರಿನ ದಿನ. ಸಂವಹನದ ಕೊರತೆ. ಕೆಲಸದಲ್ಲಿ ವಿಳಂಬ. ಶೀತ, ನೆಗಡಿಯ ಸಮಸ್ಯೆ ಕಾಣಿಸಿಕೊಳ್ಳಬಹುದು. ವೃತ್ತಿ ಒತ್ತಡ ಅಽಕ.    
ವೃಶ್ಚಿಕ
ಮಾನಸಿಕ ತಾಕಲಾಟ. ಕೆಲಸದ ಮೇಲೆ ಏಕಾಗ್ರತೆ ನಿಲ್ಲದು. ನಿಮ್ಮ ನಿಲುವಿನಲ್ಲಿ  ದೊಡ್ಡ ಬದಲಾವಣೆ ಅಳವಡಿಸಬೇಡಿ. ಇರುವ ಸ್ಥಿತಿ ಮುಂದುವರಿಸಿ.        
ಧನು
ಇಂದು ಕೆಲಸದಲ್ಲಿ ಉದಾಸೀನತೆ. ಆಪ್ತರು ಮತ್ತು ಮನೆಯ ಸುತ್ತಲೇ ಮನಸ್ಸು ತಿರುಗುತ್ತಿರುತ್ತದೆ. ಕಾನೂನು ತೊಡಕಿದ್ದರೆ ಪ್ರತಿಕೂಲ ಬೆಳವಣಿಗೆ.
ಮಕರ
ಅಸಂತೃಪ್ತಿ. ಇನ್ನೂ ಗಳಿಸಬೇಕೆಂಬ ಹಪಾಹಪಿ. ಆದರೆ  ಆ ನಿಟ್ಟಿನಲ್ಲಿ ಪ್ರಯತ್ನ ವಿ-ಲ. ಇದು ಇಂದಿನ ನಿಮ್ಮ ಗ್ರಹಗತಿ.  ಕೌಟುಂಬಿಕ ಅಸಹಕಾರ.      
ಕುಂಭ
ನಿಮ್ಮ ಸುತ್ತಲೂ ಕೋಲಾಹಲ  ಪರಿಸ್ಥಿತಿ ಉಂಟಾದೀತು. ನೀವಂತೂ ಸಹನೆಯಿಂದ ಇರಿ. ದುಡುಕಿನಿಂದ ಪ್ರತಿಕ್ರಿಯೆ ತೋರಬೇಡಿ.        
 ಮೀನ
ಸಮಸ್ಯೆ ಪರಿಹಾರದ ದಾರಿ ತೋರಲಿದೆ. ಆದರೆ ನಿಮ್ಮ ನಿಲುವಿನಲ್ಲಿ ಸ್ಪಷ್ಟತೆ ಇರಲಿ.ಇತರರ ಸಲಹೆಗೆ ಮನಸ್ಸು ತೆರೆದಿರಲಿ. ಕೌಟುಂಬಿಕ ವಾಗ್ವಾದ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !