April 28, 2026
Tuesday, April 28, 2026
spot_img

HEALTH | ಉಪ್ಪಿಗೂ ಉಂಟು ಶುಗರ್ ಕನೆಕ್ಷನ್: ಉಪ್ಪು ಜಾಸ್ತಿ ತಿಂದ್ರೆ ಸಕ್ಕರೆ ಕಾಯಿಲೆ ಬರುತ್ತಾ?

ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಇರುವವರು ಸಿಹಿ ಪದಾರ್ಥಗಳಿಂದ ದೂರವಿರುತ್ತಾರೆ. ಆದರೆ, ನಾವು ಸೇವಿಸುವ ಉಪ್ಪಿನ ಪ್ರಮಾಣ ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತದೆ ಎಂಬುದು ಈಗ ಸಾಬೀತಾಗಿದೆ.

ಅತಿಯಾದ ಉಪ್ಪು ಸೇವನೆಯು ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಸರಿಯಾಗಿ ಕೆಲಸ ಮಾಡದಂತೆ ತಡೆಯುತ್ತದೆ. ಇನ್ಸುಲಿನ್ ಕೆಲಸ ಮಾಡದಿದ್ದಾಗ ರಕ್ತದಲ್ಲಿ ಸಕ್ಕರೆಯ ಮಟ್ಟ ತಾನಾಗಿಯೇ ಏರುತ್ತದೆ.

ಉಪ್ಪಿರುವ ಆಹಾರಗಳು (ವಿಶೇಷವಾಗಿ ಸಂಸ್ಕರಿಸಿದ ಜಂಕ್ ಫುಡ್) ನಮಗೆ ಹೆಚ್ಚು ಹಸಿವು ಆಗುವಂತೆ ಮಾಡುತ್ತವೆ. ಇದರಿಂದ ನಾವು ಅತಿಯಾಗಿ ಆಹಾರ ಸೇವಿಸಿ, ತೂಕ ಹೆಚ್ಚಿಸಿಕೊಂಡು ಅಂತಿಮವಾಗಿ ಶುಗರ್ ಮಟ್ಟ ಏರಲು ಕಾರಣವಾಗುತ್ತದೆ.

ಉಪ್ಪು ಹೆಚ್ಚಾದಾಗ ರಕ್ತದೊತ್ತಡ ಏರುತ್ತದೆ. ಸಕ್ಕರೆ ಕಾಯಿಲೆ ಇರುವವರಿಗೆ ಬಿಪಿ ಕೂಡ ಹೆಚ್ಚಾದರೆ ಅದು ಕಿಡ್ನಿ ಮತ್ತು ಹೃದಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಇತ್ತೀಚಿನ ವರದಿಗಳ ಪ್ರಕಾರ, ಯಾರು ಅತಿಯಾಗಿ ಉಪ್ಪನ್ನು ಸೇವಿಸುತ್ತಾರೋ ಅವರಿಗೆ ‘ಟೈಪ್ 2 ಡಯಾಬಿಟಿಸ್’ ಬರುವ ಸಾಧ್ಯತೆ ಶೇ. 39 ರಷ್ಟು ಹೆಚ್ಚಿರುತ್ತದೆ. ಕೇವಲ ಸಿಹಿಯನ್ನು ಬಿಟ್ಟರೆ ಸಾಲದು, ದಿನವೊಂದಕ್ಕೆ ಸೀಮಿತ ಪ್ರಮಾಣದಲ್ಲಿ ಮಾತ್ರ ಉಪ್ಪನ್ನು ಬಳಸಬೇಕು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.

ಸಕ್ಕರೆ ಕಾಯಿಲೆ ಇರುವವರು ದಿನಕ್ಕೆ 5 ಗ್ರಾಂಗಿಂತ ಕಡಿಮೆ (ಒಂದು ಟೀ ಚಮಚ) ಉಪ್ಪನ್ನು ಸೇವಿಸುವುದು ಉತ್ತಮ. ಉಪ್ಪಿನಕಾಯಿ, ಹಪ್ಪಳ ಮತ್ತು ಪ್ಯಾಕೆಟ್ ಫುಡ್‌ಗಳಲ್ಲಿ ಉಪ್ಪಿನಂಶ ಹೆಚ್ಚಿರುವುದರಿಂದ ಇವುಗಳ ಬಗ್ಗೆ ಜಾಗ್ರತೆ ವಹಿಸುವುದು ಅವಶ್ಯಕ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !