ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ವಿಧಾನಸೌಧ ಇಂದಿನಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ. ಇಷ್ಟು ದಿನ ದೂರದಿಂದಲೇ ನೋಡಿ.. ಫೋಟೋ ಕ್ಲಿಕ್ಕಿಸಿ ಸಂತಸಪಟ್ಟುಕೊಳ್ಳುತ್ತಿದ್ದ ಜನರಿಗೆ ಹತ್ತಿರದಿಂದಲೇ ನೋಡುವ ಅವಕಾಶ ಸಿಕ್ಕಿದೆ. ಭವ್ಯ ವಿಧಾನಸೌಧ ವೀಕ್ಷಣೆಗೆ ರಾಜ್ಯ ಸರ್ಕಾರ ʻಗೈಡೆಡ್ ಟೂರ್ʼ ಹೆಸರಿನಲ್ಲಿ ಪ್ರವಾಸ ಭಾಗ್ಯ ಕಲ್ಪಿಸಿದೆ.
ಇಂದಿನಿಂದ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ವಿಧಾನಸೌಧ ಪ್ರವಾಸಕ್ಕೆ ಮುಕ್ತ. ಮೊದಲ ದಿನವೇ ವಿಧಾನಸೌಧ ಟೂರ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನ ತಲಾ 25-30 ಜನ ಇರುವ ನಾಲ್ಕೈದು ಬ್ಯಾಚ್ಗಳ ಮೂಲಕ ಪ್ರವಾಸಿಗರು ವಿಧಾನಸೌಧದ ಒಳಗೆಲ್ಲಾ ಸುತ್ತಾಡಿ, ಅದರ ಸೌಂದರ್ಯ ತಮ್ಮ ಕಣ್ಮನದೊಳಗೆ ತುಂಬಿಕೊಂಡರು. ಕುಟುಂಬ, ಸ್ನೇಹಿತರೊಂದಿಗೆ ಬಂದ ಹಲವರು ವಿಧಾನಸೌಧದ ಒಳಗೆ, ಹೊರಗೆ ಸುತ್ತಾಡಿ ಖುಷಿಪಟ್ಟರು.
ಪ್ರತೀ ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರ ವಿಧಾನಸೌಧ ಟೂರ್ಗೆ ಅವಕಾಶವಿರುತ್ತದೆ. 16 ವರ್ಷ ಮೇಲ್ಪಟ್ಟ ಎಲ್ಲರಿಗೂ ತಲಾ 50 ರೂ, 15 ವರ್ಷದೊಳಗಿನ ಮಕ್ಕಳಿಗೆ ಹಾಗೂ ಎಸ್ಎಸ್ಎಲ್ಸಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದ್ದು, ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಅವಕಾಶವಿರಲಿದೆ.