ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೊಮೊಟೋ ಬೆಲೆ ಹೆಚ್ಚಳ ಚರ್ಚೆ ರಾಜ್ಯಸಭೆಯಲ್ಲೂ ಪ್ರತಿಧ್ವನಿಸಿದ್ದು,ಈ ಕುರಿತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ನಾಸಿಕ್, ನಾರ್ಯಂಗಾವ್ ಮತ್ತು ಔರಂಗಾಬಾದ್ ಪ್ರದೇಶಗಳಿಂದ, ಮಧ್ಯಪ್ರದೇಶದಿಂದ ಕೂಡ ಹೊಸ ಬೆಳೆಗಳ ಆಗಮನ ಹೆಚ್ಚಳದಿಂದ ಟೊಮೆಟೋ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ ಎಂದರು.
ಸದ್ಯ ಮಾನ್ಸೂನ್ ಮಳೆ ಮತ್ತು ಇತರ ಸಮಸ್ಯೆಗಳಿಂದ ಪೂರೈಕೆ ಸರಪಳಿಯು ಸ್ಥಗಿತಗೊಂಡಿದ್ದರಿಂದ ದೇಶದ ಹಲವಾರು ಭಾಗಗಳಲ್ಲಿ ಚಿಲ್ಲರೆ ಬೆಲೆಗಳು ಕಿಲೋಗ್ರಾಂಗೆ 200-250 ರೂ.ವರೆಗೂ ತಲುಪಿವೆ.
ಇದು ಟೊಮೆಟೊ ಬೆಳೆ ಬೆಳೆಯಲು ರೈತರನ್ನು ಪ್ರೇರೇಪಿಸುತ್ತದೆ, ಇದು ಮುಂಬರುವ ತಿಂಗಳುಗಳಲ್ಲಿ ಬೆಲೆಗಳನ್ನು ಸ್ಥಿರಗೊಳಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಬೆಳೆ ಋತುಮಾನ, ಕೋಲಾರ(ಕರ್ನಾಟಕ)ದಲ್ಲಿ ಬಿಳಿ ನೊಣ ರೋಗ, ದೇಶದ ಉತ್ತರ ಭಾಗದಲ್ಲಿ ಮಾನ್ಸೂನ್ ಮಳೆಯ ತ್ವರಿತ ಆಗಮನ ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಟೊಮೆಟೋ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಮತ್ತು ಲಾಜಿಸ್ಟಿಕ್ಸ್ ಅಡೆತಡೆಗಳಂತಹ ಕಾರಣ ಬೆಲೆ ಏರಿಕೆಗೆ ಕಾರಣವಾಗಿದೆ ಎಂದರು.
ಜುಲೈ 10-16ರ ವಾರದಲ್ಲಿ ದೆಹಲಿ, ಪಂಜಾಬ್, ಚಂಡೀಗಢ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಟೊಮೆಟೋದ ಸರಾಸರಿ ದೈನಂದಿನ ಚಿಲ್ಲರೆ ಬೆಲೆ ಕೆಜಿಗೆ 150 ರೂಪಾಯಿ ದಾಟಿದೆ ಎಂದು ಸಚಿವರು ಮಾಹಿತಿ ನೀಡಿದರು.
ಜುಲೈ 18 ರ ಹೊತ್ತಿಗೆ, ದೆಹಲಿಯಲ್ಲಿ ಸರಾಸರಿ ಚಿಲ್ಲರೆ ಬೆಲೆ ಕೆಜಿಗೆ 130 ರೂ.ಗೆ ಮತ್ತು ಪಂಜಾಬ್ನಲ್ಲಿ ಕೆಜಿಗೆ 127. 70 ರೂ.ಗೆ ಇಳಿಕೆಯಾಗಿದೆ. ಟೊಮೆಟೋ ಕೈಗೆಟುಕುವಂತೆ ಮಾಡಲು, ಸರ್ಕಾರವು ಬೆಲೆ ಸ್ಥಿರೀಕರಣ ನಿಧಿಯ ಅಡಿಯಲ್ಲಿ ಅವುಗಳ ಸಂಗ್ರಹವನ್ನು ಪ್ರಾರಂಭಿಸಿದೆ ಮತ್ತು ಗ್ರಾಹಕರಿಗೆ ಹೆಚ್ಚಿನ ಸಬ್ಸಿಡಿ ದರದಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ.
ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ(NCCF) ಮತ್ತು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ(NAFED) ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದ ‘ಮಂಡಿ’ಗಳಿಂದ ನಿರಂತರವಾಗಿ ಟೊಮೆಟೊಗಳನ್ನು ಖರೀದಿಸುತ್ತಿದೆ. ದೆಹಲಿ-NCR, ರಾಜಸ್ಥಾನ, ಬಿಹಾರದ ಪ್ರಮುಖ ಗ್ರಾಹಕ ಕೇಂದ್ರಗಳಲ್ಲಿ ಅವುಗಳನ್ನು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ..