ಕೇಂದ್ರ ಸರಕಾರದಿಂದ ಟೊಮೆಟೋ ರಿಟೇಲ್ ದರ ಮತ್ತೆ ಇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಟೊಮೆಟೋ ಬೆಲೆ ಏರಿಕೆಯಿಯಿಂದ ಕಂಗಾಲಾದ ಜನತೆಗೆ ಅಲ್ಪ ಪ್ರಯೋಜನವಾಗುವ ನಿರೀಕ್ಷೆ ವಿದ್ದು, ಕೇಂದ್ರ ಸರ್ಕಾರ ಮಾರುಕಟ್ಟೆ ಏಜೆನ್ಸಿಗಳಾದ ನಾಫೆಡ್‌ (NAFED) ಹಾಗೂ ಎನ್‌ಸಿಸಿಎಫ್‌ಗೆ ಟೊಮ್ಯಾಟೊವನ್ನು ಗುರುವಾರದಿಂದ ಪ್ರತಿ ಕೆ.ಜಿಗೆ 70 ರೂ.ಗಳಂತೆ ಮಾರಾಟ ಮಾಡುವಂತೆ (Tomato price) ತಿಳಿಸಿದೆ. ಈ ಮೊದಲು 80 ರೂ.ಗೆ ಮಾರಾಟ ಮಾಡಲಾಗುತ್ತಿತ್ತು.ಇದರಿಂದ ಗ್ರಾಹಕರಿಗೆ ನಿರಾಳವಾಗಲಿದೆ.

ನ್ಯಾಶನಲ್‌ ಕೋಪರೇಟಿವ್‌ ಕನ್‌ಸ್ಯೂಮರ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ (NCCF) ಮತ್ತು ನ್ಯಾಶನಲ್‌ ಅಗ್ರಿಕಲ್ಚರಲ್‌ ಕೋಪರೇಟಿವ್‌ ಮಾರ್ಕೆಟಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾ (NAFED) ಈ ಮಾರ್ಗಸೂಚಿಯನ್ನು ಗುರುವಾರದಿಂದ ಪಾಲಿಸಲಿದೆ.

ಈ ಎರಡೂ ಏಜೆನ್ಸಿಗಳು ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರದ ಮಂಡಿಗಳಲ್ಲಿ ಟೊಮ್ಯಾಟೊ ಖರೀದಿ ನಡೆಸುತ್ತಿವೆ. ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟ ನಡೆಸುತ್ತಿವೆ. ದಿಲ್ಲಿ-ಎನ್‌ಸಿಆರ್‌ ವಲಯದಲ್ಲಿ 2023ರ ಜುಲೈ 14ರಂದಿ ಡಿಸ್ಕೌಂಟ್‌ ದರದಲ್ಲಿ ಟೊಮೆಟೋ ಮಾರಾಟ ಶುರುವಾಗಿತ್ತು. ಪ್ರಮುಖ ನಗರಗಳಲ್ಲಿ ಪ್ರತಿ ಕೆ.ಜಿಗೆ 150-200 ರೂ.ಗೆ ಏರಿಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!