ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗಸ್ಟ್ 15 ರಿಂದ ದೇಶದಲ್ಲಿ ಟೊಮೆಟೊ ಬೆಲೆ ಇಳಿಕೆ ಕಂಡಿದೆ. ಸಗಟು ಮಾರುಕಟ್ಟೆಯಲ್ಲಿ ಟೊಮೇಟೊ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಟೊಮೇಟೊ ಕೆಜಿಗೆ ರೂ.70ರಿಂದ ರೂ.50ಕ್ಕೆ ಮಾರಾಟವಾಗಲಿದೆ. ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಮತ್ತು ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಒಕ್ಕೂಟ (ನಾಫೆಡ್) ಮಂಗಳವಾರದಿಂದ ಕಿಲೋಗೆ 50 ರೂ.ದರದಲ್ಲಿ ಟೊಮೆಟೊ ಮಾರಾಟ ಮಾಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.
NCCF ಮತ್ತು NAFED ಕಂಪನಿಗಳು ರಾಜಸ್ಥಾನ, ದೆಹಲಿ, NCR, ಜೈಪುರ್, ಕೋಟಾ, ಲಕ್ನೋ, ಕಾನ್ಪುರ್, ವಾರಣಾಸಿ, ಪ್ರಯಾಗರಾಜ್, ಪಾಟ್ನಾ, ಮುಜಾಫರ್‌ಪುರ, ಅರ್ರಾ, ಬಕ್ಸರ್‌ಗಳಲ್ಲಿ ಟೊಮೆಟೊಗಳನ್ನು ಮಾರಾಟ ಮಾಡುತ್ತಿವೆ. ಏರುತ್ತಿರುವ ಬೆಲೆಯನ್ನು ತಗ್ಗಿಸಲು ಕೇಂದ್ರ ಸರ್ಕಾರದ ನಿರ್ದೇಶನದ ನಂತರ ಸಾರ್ವಜನಿಕ ವಲಯದ ಉದ್ಯಮಗಳು ಜುಲೈ 14 ರಿಂದ ದೆಹಲಿ-ಎನ್‌ಸಿಆರ್‌ನಲ್ಲಿ ಟೊಮೆಟೊ ಮಾರಾಟವನ್ನು ಪ್ರಾರಂಭಿಸಿವೆ.
ದೆಹಲಿಯಾದ್ಯಂತ 70 ಸ್ಥಳಗಳಲ್ಲಿ ಮತ್ತು ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ 15 ಸ್ಥಳಗಳಲ್ಲಿ ಮೊಬೈಲ್ ಟೊಮೆಟೊ ಅಂಗಡಿಗಳನ್ನು ನಿರ್ವಹಿಸುತ್ತಿದೆ.