ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬೇಕು:
ಸುರಕ್ಷಿತ ವೀಕ್ಷಣೆ: ಸೂರ್ಯಗ್ರಹಣವನ್ನು ವೀಕ್ಷಿಸಲು ವಿಶೇಷವಾದ ಸೌರ ಫಿಲ್ಟರ್ಗಳನ್ನು ಹೊಂದಿರುವ ಕನ್ನಡಕಗಳನ್ನು ಬಳಸಿ. ಸಾಮಾನ್ಯ ಸನ್ ಗ್ಲಾಸ್ ಗಳು ಸುರಕ್ಷಿತವಲ್ಲ.
ಟೆಲಿಸ್ಕೋಪ್ ಅಥವಾ ಬೈನಾಕ್ಯುಲರ್ಗಳನ್ನು ಬಳಸುತ್ತಿದ್ದರೆ, ಅವುಗಳಿಗೆ ಸೌರ ಫಿಲ್ಟರ್ಗಳನ್ನು ಅಳವಡಿಸಿ. ಪರೋಕ್ಷ ವೀಕ್ಷಣೆಗಾಗಿ ಪಿನ್ ಹೋಲ್ ಪ್ರೊಜೆಕ್ಟರ್ ಗಳನ್ನು ಬಳಸಿ.
ಧಾರ್ಮಿಕ ಆಚರಣೆಗಳು:
ಕೆಲವರು ಗ್ರಹಣದ ಸಮಯದಲ್ಲಿ ಸ್ನಾನ ಮಾಡುವುದು ಮತ್ತು ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ಒಳ್ಳೆಯದೆಂದು ನಂಬುತ್ತಾರೆ. ಮಂತ್ರ ಜಪ ಮಾಡುವುದು.
ಶುದ್ಧೀಕರಣ: ಗ್ರಹಣ ಮುಗಿದ ನಂತರ ಸ್ನಾನ ಮಾಡಿ, ಮನೆಯನ್ನು ಸ್ವಚ್ಛಗೊಳಿಸಿ.
ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬಾರದು:
ಆಹಾರ ಸೇವನೆ: ಕೆಲವರು ಗ್ರಹಣದ ಸಮಯದಲ್ಲಿ ಆಹಾರ ಸೇವಿಸುವುದನ್ನು ತಪ್ಪಿಸುತ್ತಾರೆ.
ಹೊರಗೆ ತಿರುಗಾಡುವುದು: ಕೆಲವು ನಂಬಿಕೆಗಳ ಪ್ರಕಾರ ಗ್ರಹಣದ ಸಮಯದಲ್ಲಿ ಹೊರಗೆ ತಿರುಗಾಡಬಾರದು. ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಮನೆಯಲ್ಲಿಯೇ ಇರುವುದು ಒಳ್ಳೆಯದು. ಗ್ರಹಣದ ಕಿರಣಗಳು ಮಗುವಿನ ಮೇಲೆ ಪರಿಣಾಮ ಬೀರಬಹುದು ಎಂದು ನಂಬಲಾಗಿದೆ.