ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೀತಿ ಅತಿಯಾದ್ರೆ ಉಸಿರುಗಟ್ಟಿಸುತ್ತೆ ಅನ್ನೋ ಮಾತು ನಿಜ, ನಂಬೋದಿಲ್ಲ ಅನ್ನೋದಾದ್ರೆ ಈ ಸುದ್ದಿ ಕಂಪ್ಲೀಟ್ ಆಗಿ ಓದಿ..
ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರು ಹೆಣ್ಣುಮಕ್ಕಳನ್ನು ಮಲತಂದೆ ಕೊಂದಿದ್ದಾನೆ, ಸದ್ಯ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆ.24ರಂದು ಅಮೃತಹಳ್ಳಿಯ ಕಾವೇರಿ ಬಡಾವಣೆಯಲ್ಲಿ ಇಬ್ಬರು ಬಾಲಕಿಯರನ್ನು ಕತ್ತುಸೀಳಿ ಮಲತಂದೆ ಕೊಲೆ ಮಾಡಿದ್ದ, ಯಾಕೆ ಗೊತ್ತಾ? ಮಕ್ಕಳನ್ನು ಆತ ಅತಿಯಾಗಿ ಪ್ರೀತಿಸುತ್ತಿದ್ದ ಅಥವಾ ಪ್ರೀತಿಯ ನಾಟಕ ಆಡುತ್ತಿದ್ದ.
ಶಾಲೆಗೆ ಹೋಗುತಿದ್ದ ಮಕ್ಕಳ ಅತಿಯಾಗಿ ಕೇರ್ ಮಾಡುತಿದ್ದ ಮಲತಂದೆ ಸುಮಿತ್, ಮಕ್ಕಳ ಪ್ರತಿ ನಡೆ ಮೇಲೂ ಕಣ್ಣು ಇಡುತ್ತಿದ್ದ, ಓವರ್ ಪ್ರೊಟೆಕ್ಟೀವ್ ಆಗಿ ಪ್ರತಿಯೊಂದನ್ನು ಪ್ರಶ್ನೆ ಮಾಡುತ್ತಿದ್ದ. ಸುಮಿತ್ ಅನುಮಾನದಿಂದ ಬೇಸತ್ತಿದ್ದ ಮಕ್ಕಳು ಆತನ ಜೊತೆ ಮಾತನಾಡುವುದನ್ನು ಬಿಟ್ಟಿದ್ದಾರೆ. ಇದನ್ನು ಸಹಿಸಲಾರದೆ ಆತ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಸುಮಿತ್ನನ್ನು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಿಂದ ಎಸ್ಕೇಪ್ ಆಗಲು ಆರೋಪಿ ಸುಮಿತ್ ರಾತ್ರಿ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ಟಿಕೆಟ್ ಖರೀದಿಸಲು ಮೊಬೈಲ್ ಆನ್ ಮಾಡಿದ್ದ. ಕೆಲವೇ ಸೆಕೆಂಡ್ ಆನ್ ಮಾಡಿ ಮೊಬೈಲ್ ಆಫ್ ಮಾಡಿದ್ದ. ಅಷ್ಟೊತ್ತಿಗಾಗಲೇ ಪೊಲೀಸರು ಆರೋಪಿಯನ್ನು ಸುತ್ತುವರಿದು ಬಂಧಿಸಿದ್ದಾರೆ. ಅಮೃತಹಳ್ಳಿ ಠಾಣೆ ಪೊಲೀಸರು ಆರೋಪಿ ಸುಮಿತ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.