ಗೋ ಮಾತೆಗೆ ಚಿತ್ರಹಿಂಸೆ: ಆರೋಪಿಗಳ ಮನೆಯನ್ನೇ ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿದ ಮಧ್ಯಪ್ರದೇಶ ಸರಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೋಹನ್ ಯಾದವ್ ಖಡಕ್ ನಿರ್ಧಾರಗಳನ್ನೂ ಕೈಗೊಳ್ಳುತ್ತಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಧ್ವನಿವರ್ಧಕ ನಿಷೇಧ ಆದೇಶ ಹೊರಡಿಸಿದ್ದ ಅವರು, ಆರೋಪಿಗಳ ಮನೆ ಮೇಲೂ ಬುಲ್ಡೋಜರ್ ಕ್ರಮ ಜರುಗಿಸಿದ್ದರು.

ಇದೀಗ ಗೋ ಮಾತೆಗೆ ಚಿತ್ರಹಿಂಸೆ ನೀಡಿ ಕೊಂದ ನಾಲ್ವರು ಆರೋಪಿಗಳ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿದೆ.

ಅಗರ್ ಮಾಲ್ವಾ ಜಿಲ್ಲೆಯ ನಾಲ್ವರು ಆರೋಪಿಗಳಾದ ಸೋನು ಮನ್ಸೂರಿ ಐಸಾಕ್, ರಜಾಕ್ ಖಾನ್, ರಾಹುಲ್ ಗುಜ್ಜಾರ್ ಹಾಗೂ ದುರ್ಗಾ ಶಂಕರ್ ಗೋವನ್ನು ಹಿಡಿದು ಕಾಲುಗಳನ್ನು ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾರೆ. ಗೋವಿಗೆ ಚಿತ್ರಹಿಂಸೆ ನೀಡಲಾಗಿದೆ. ತಡ ರಾತ್ರಿ ಈ ಘಟನೆ ನಡೆದಿದೆ.
ಈ ಮಾಹಿತಿ ತಿಳಿಯುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು ಸ್ಥಳಕ್ಕೆ ಧಾವಿಸಿದೆ. ಇತ್ತ ಆರೋಪಿಗಳು ಪರಾರಿಯಾಗಿದ್ದರು. ಹಿಂದೂ ಸಂಘಟನೆಗಳು ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದಾರೆ.ಆದರೆ ತೀವ್ರವಾಗಿ ಗಾಯಗೊಂಡ ಗೋವು ಮೃತಪಟ್ಟಿದೆ.

ಪ್ರಕರಣ ದಾಖಿಸಿದ ಸಂಘಟನೆ ಭಾರಿ ಪ್ರತಿಭಟನೆ ಆರಂಭಿಸಿತ್ತು.ಅಗರ್ ಮಾಲ್ವಾ ಜಿಲ್ಲಾಧಿಕಾರಿ ಕಚೇರಿ ಎದುರು ಹಿಂದೂಪರ ಸಂಘಟನೆ ಭಾರಿ ಪ್ರತಿಭಟನೆ ನೆಡೆಸಿತ್ತು. ಸತತ 4 ಗಂಟೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿತ್ತು. ಕೊನೆಗೂ ಜಿಲ್ಲಾಧಿಕಾರಿ ಕಠಿಣ ಕ್ರಮದ ಭರವಸೆ ನೀಡಿದ್ದರು.

ಇತ್ತ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ ಪೊಲೀಸರು ಸೆಕ್ಷನ್ 429, 34 ಹಾಗೂ 11 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇತ್ತ ಆರೋಪಿಗಳ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here