ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೀತಿ ಮಾಡು ಎಬಂದು 42ರ ಅಂಕಲ್ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ (Student) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬೆಟಗೇರಿ ಬಾಲಕಿಯರ ವೃತ್ತಿಪರ ಹಾಸ್ಟೆಲ್ನಲ್ಲಿ ನಡೆದಿದೆ.
ತಾಂಡಾದ ನಿವಾಸಿ ಕಿರಣ್ ಎನ್ನುವವನು ನೀಡಿದ ಕಿರುಕುಳಕ್ಕೆ 19 ವಯಸ್ಸಿನ ಯುವತಿಯ ವಂದನಾ ಎಂಬುವವರು ಫಿನಾಯಿಲ್ ಕುಡಿದು ಸಾವನಪ್ಪಿದ್ದಾರೆ.
ನಿತ್ಯ ಫೋನ್ ಮಾಡಿ ಮದುವೆಯಾಗುವಂತೆ ಪೀಡಿಸುತ್ತಿದ್ದ, ಮದುವೆ ಆಗದೆ ಹೋದ್ರೆ ಫೋಟೋಸ್ ಗಳನ್ನು ಎಡಿಟ್ ಮಾಡಿ ಸೋಶಿಯಲ್ ಮಿಡಿಯಾಕ್ಕೆ ಹಾಕುತ್ತೇನೆ ಹೆದರಿಸಿದ್ದಾನೆ ಎನ್ನಲಾಗುತ್ತಿದೆ.
ಇದರಿಂದ ಬೇಸತ್ತ ವಂದನಾ ಹಾಸ್ಟೆಲ್ ನಲ್ಲಿ ಪಿನಾಯಿಲ್ ಸೇವಿಸಿದ್ದಳು. ಆಕೆಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.