March 19, 2026
Thursday, March 19, 2026
spot_img

ಟೋಟಲ್ ಆಗಿದ್ದು 285 ರೂ, ಕೇಳಿದ್ದು 5950 ರೂ: ಬೆಂಗಳೂರಲ್ಲಿ ಕ್ಯಾಬ್ ಡ್ರೈವರ್‌ಗಳ ಹೊಸ ಮೋಸದಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದಲ್ಲಿ ಕ್ಯಾಬ್ ಸೇವೆಗಳ ಬಗ್ಗೆ ಮತ್ತೊಮ್ಮೆ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಯಾಣಿಕರನ್ನು ಮೋಸಗೊಳಿಸುವ ಹೊಸ ತಂತ್ರ ಬೆಳಕಿಗೆ ಬಂದಿದೆ. ಮೆಜೆಸ್ಟಿಕ್‌ನಿಂದ ಜಾಲಹಳ್ಳಿಗೆ ಪ್ರಯಾಣಿಸಲು ಓಲಾ ಮೂಲಕ ಬುಕ್ ಮಾಡಿದ ಟ್ರಿಪ್‌ಗೆ 285 ಎಂದು ಆ್ಯಪ್‌ನಲ್ಲಿ ತೋರಿಸಿದರೂ, ಚಾಲಕ 5,950 ಹಣ ಪಾವತಿಸಲು ಒತ್ತಾಯಿಸಿದ ಘಟನೆ ನಡೆದಿದೆ.

ಪ್ರಯಾಣಿಕರೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಅನುಭವ ಹಂಚಿಕೊಂಡಿದ್ದು, ಚಾಲಕ ತನ್ನ ವೈಯಕ್ತಿಕ ಮೊಬೈಲ್‌ನಲ್ಲಿ ಹೆಚ್ಚುವರಿ ಬಿಲ್ ತೋರಿಸಿ ಹಣ ಕೇಳಿದ್ದಾನೆ ಎಂದು ಆರೋಪಿಸಿದ್ದಾರೆ. ಹಿಂದಿನ ಕ್ಯಾನ್ಸಲ್ ಮಾಡಿದ ರೈಡ್‌ಗಳ ಹಣವನ್ನು ಈಗಲೇ ಕೊಡಬೇಕು ಎಂದು ಚಾಲಕ ಒತ್ತಾಯಿಸಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:

ಕನ್ನಡ ತಿಳಿಯದ ಪ್ರಯಾಣಿಕರಿಗೆ ಈ ಸಂದರ್ಭ ನಿಭಾಯಿಸುವುದು ಕಷ್ಟವಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ತಕ್ಷಣ ಆ್ಯಪ್‌ನ ತುರ್ತು ಸಹಾಯ ಕೇಂದ್ರವನ್ನು ಸಂಪರ್ಕಿಸಿದರೂ ಸಮರ್ಪಕ ಸ್ಪಂದನೆ ಸಿಗಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಪೋಸ್ಟ್ ವೈರಲ್ ಆದ ಬಳಿಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಸಂದರ್ಭಗಳಲ್ಲಿ ತಕ್ಷಣ ಪೊಲೀಸರಿಗೆ ಕರೆ ಮಾಡುವಂತೆ ಸಲಹೆ ನೀಡಿದ್ದಾರೆ. ಕೆಲವರು ಕ್ಯಾಶ್ ಪಾವತಿಯನ್ನು ತಪ್ಪಿಸಿ ಪೂರ್ವ ಪಾವತಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸೂಚಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !