ಹೊಸದಿಗಂತ ವರದಿ ಶಿವಮೊಗ್ಗ:
ಪ್ರವಾಸ ಬಂದಿದ್ದ ಇಬ್ಬರು ತುಂಗಾ ನದಿ ಪಾಲಾಗಿರುವ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ತೀರ್ಥ ಮತ್ತೂರಿನಲ್ಲಿ ಸಂಭವಿಸಿದೆ.ಪುನೀತ್ (38) ಹಾಗೂ ಬಾಲಾಜಿ (36)ಮೃತ ದುರ್ದೈವಿಗಳು.
ಕಾರ್ಕಳದ ನಿಟ್ಟೆ ಕಾಲೇಜಿನ ಉಪನ್ಯಾಸಕರಾಗಿರುವ ಇವರು ಪ್ರವಾಸ ಬಂದಿದ್ದರು. ನೀರು ಪಾಲಾಗುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಒಂದು ಮೃತ ದೇಹ ಪತ್ತೆ ಮಾಡಿ ಹೊರ ತೆಗೆದಿದ್ದಾರೆ. ಮತ್ತೊಂದು ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ.