ಪ್ರವಾಸಿಗರೇ ಗಮನಿಸಿ ಮೈಸೂರು ಅರಮನೆ ವೀಕ್ಷಣೆ ಇನ್ಮುಂದೆ ದುಬಾರಿ!

ಹೊಸದಿಗಂತ ವರದಿ, ಮೈಸೂರು:

ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಮುಗಿದ ಬೆನ್ನಲ್ಲೆ ಅಂಬಾವಿಲಾಸ ಅರಮನೆಯನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಇದೀಗ ಅರಮನೆ ಮಂಡಳಿ ಟಿಕೆಟ್ ದರ ಏರಿಕೆಯ ಶಾಕ್ ನೀಡಿದೆ.

ಇದರಿಂದಾಗಿ ವಿಶ್ವವಿಖ್ಯಾತ ಮೈಸೂರು ಅರಮನೆಗೆ ದಿನನಿತ್ಯ ದೇಶ-ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಅರಮನೆ ವೀಕ್ಷಣೆಗಾಗಿ ಆಗಮಿಸುವ ಪ್ರವಾಸಿಗರ ಜೇಬಿಗೆ ಕತ್ತರಿ ಬಿದ್ದಿದ್ದು, ಕುಟುಂಬ ಸಮೇತ ಅರಮನೆ ವೀಕ್ಷಣೆ ಈಗ ದುಬಾರಿಯಾಗಲಿದೆ.

ವಯಸ್ಕರಿಗೆ ಇದ್ದ ಟಿಕೆಟ್ ದರವನ್ನು ೧೦೦ ರೂ ನಿಂದ ೧೨೦ ರೂಗೆ ಏರಿಕೆ ಮಾಡಲಾಗಿದೆ. ವಿದೇಶಿ ಪ್ರವಾಸಿಗರ ಟಿಕೆಟ್ ದರವನ್ನು ೩೦೦ ರೂನಿಂದ ಒಂದು ಸಾವಿರ ರೂಗಳಿಗೆ ಏರಿಸಲಾಗಿದೆ. ಅದರಂತೆ ೧೦ ರಿಂದ ೧೮ ವರ್ಷದೊಳಗಿನ ಮಕ್ಕಳಿಗೆ ೭೦ ರೂ.(೧೦ ವರ್ಷದೊಳಗಿನ ಮಕ್ಕಳಿಗೆ ಉಚಿತ), ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರ ೫೦ ರೂ. ಹಾಗೂ ವಿದೇಶಿ ಪ್ರವಾಸಿಗರಿಗೆ ೧೦೦೦ ರೂ. ಅನುಮೋದಿತ ಪರಿಷ್ಕೃತ ಶುಲ್ಕವನ್ನು ನಿಗದಿ ಮಾಡಲಾಗಿದೆ, ಧ್ವನಿ ಮತ್ತು ಬೆಳಕು ವೀಕ್ಷಣೆಗೆ ೭೦ ರೂ ನಿಗದಿಪಡಿಸಲಾಗಿದೆ ಎಂದು ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಪ್ರವಾಸಿಗರ ಅನುಕೂಲಕ್ಕಾಗಿ ಅರಮನೆಯ ಒಳಾವರಣದಲ್ಲಿ ಬರುವ ಚಪ್ಪಲಿ ಸ್ಟಾಂಡ್, ಲಗ್ಗೇಜ್ ಕೊಠಡಿ ಮತ್ತು ಶೌಚಾಲಯಗಳನ್ನು ಪ್ರವಾಸಿಗರಿಗೆ ಉಚಿತಗೊಳಿಸಿ, ಅರಮನೆಯ ಪ್ರವೇಶ ಶುಲ್ಕವನ್ನು ಪರಿಷ್ಕರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!