ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಮಸಾಲೆ ಉತ್ಪನ್ನಗಳಾದ ಎಂಡಿಹೆಚ್ ಮತ್ತು ಎವರೆಸ್ಟ್ ವಿಷಕಾರಿ ಅಂಶಗಳನ್ನು ಒಳಗೊಂಡಿರುವ ಆರೋಪದ ನಂತರ, ನೇಪಾಳ ಸುರಕ್ಷತೆಯ ಕಾರಣಗಳಿಗಾಗಿ ಎವರೆಸ್ಟ್ ಮತ್ತು MDH ಬ್ರಾಂಡ್ ಮಸಾಲೆಗಳ ಆಮದನ್ನು ನಿಷೇಧಿಸಲಾಗಿದೆ.
ಮಾರುಕಟ್ಟೆಯಲ್ಲಿ ಕೂಡ ಮಾರಾಟವನ್ನೂ ನಿಷೇಧಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಎರಡು ನಿರ್ದಿಷ್ಟ ಮಸಾಲೆ ಬ್ರಾಂಡ್‌ಗಳಲ್ಲಿನ ರಾಸಾಯನಿಕಗಳ ಪರೀಕ್ಷೆಯು ಪ್ರಸ್ತುತ ನಡೆಯುತ್ತಿದೆ.ಅಂತಿಮ ವರದಿ ಬರುವವರೆಗೆ ನಿಷೇಧವು ಜಾರಿಯಲ್ಲಿರುತ್ತದೆ ಎಂದು ಮಹಾರ್ಜನ್ ಮತ್ತಷ್ಟು ಹೇಳಿದರು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಈಗಾಗಲೇ ಎಂಡಿಎಚ್ ಮತ್ತು ಎವರೆಸ್ಟ್ ಉತ್ಪನ್ನಗಳಿಗೆ ಗುಣಮಟ್ಟದ ಪರಿಶೀಲನೆಗೆ ಆದೇಶಿಸಿದೆ.