ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನುಷ್ಯನ ಲೈಫ್‌ಸ್ಟೈಲ್, ಊಟ ತಿಂಡಿಯ ಹ್ಯಾಬಿಟ್ ಅವರ ಆರೋಗ್ಯದ ಮೇಲೆ ದೀರ್ಘ ಪರಿಣಾಮ ಉಂಟುಮಾಡುತ್ತದೆ. ನಾವು ಬಳಸುವ ಪಾತ್ರೆಗಳು ಕೂಡ ನಮ್ಮ ಆರೋಗ್ಯ ಹಾಳುಮಾಡುವಲ್ಲಿ ಮುಖ್ಯಪಾತ್ರ ವಹಿಸಿವೆ.
50 ವರ್ಷದ ವ್ಯಕ್ತಿಯೊಬ್ಬರು ಇತ್ತೀಗೆ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ವ್ಯಕ್ತಿಯ ದೇಹದಲ್ಲಿ ಶೇಖರಣೆಯಾದ ವಿಷಕಾರಕ ಅಂಶಗಳಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಹೊರಗಿನ ಆಹಾರ ತಿನ್ನದ, ಕೆಟ್ಟ ಚಟ ಹಾಗೂ ಇತರ ಕೆಟ್ಟ ಅಭ್ಯಾಸಗಳಿಲ್ಲದ ವ್ಯಕ್ತಿಯ ದೇಹದಲ್ಲಿ ವಿಷ ಸೇರಿಕೊಂಡಿದ್ದು ಹೇಗೆ ಎಂದು ಗಮನಿಸಿದಾಗ ಅದಕ್ಕೆಲ್ಲ ಕುಕ್ಕರ್ ಕಾರಣ ಎಂದು ತಿಳಿದುಬಂದಿದೆ.
ಕುಕ್ಕರ್ ಹಳೆದಾಗಿದ್ದರೆ ಎಚ್ಚರ ಅಗತ್ಯ. ಹಳೇ ಕುಕ್ಕರ್‌ನಲ್ಲಿನ ರಬ್ಬರ್, ಹಳೇ ಮೆಟಲ್ ಪಾತ್ರೆ ಬಳಕೆಯಿಂದ ಆರೋಗ್ಯ ಅಪಾಯ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ. ಇದರಲ್ಲಿ ಆಹಾರ ತಯಾರಿಸುವುದರಿಂದ ಅದರ ರಬ್ಬರ್ ಹಾಗೂ ಮೆಟಲ್‌ನಿಂದ ವಿಷಕಾರ ಅಂಶ ಸೃಷ್ಟಿಯಾಗುತ್ತದೆ. ಇದು ದೇಹದ ಒಳಗೆ ಸೇರಿ ಶೇಖರಣೆಯಾಗುತ್ತದೆ. ಹಳೇ ಕುಕ್ಕರ್‌ನಲ್ಲಿ ಸೃಷ್ಟಿಯಾಗುವ ವಿಷಕಾರಕ ಅಂಶಗಳ ಪ್ರಮಾಣ ಅತೀ ಕಡಿಮೆ. ಆದರೆ ಇದು ದೇಹದಲ್ಲಿ ಸೇರಿಕೊಳ್ಳುತ್ತದೆ. ಸುದೀರ್ಘ ದಿನಗಳ ಬಳಿಕ ಈ ವಿಶಕಾರಕ ಅಂಶಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಪರಿಣಾಮ ಬೀರುತ್ತದೆ ಎನ್ನಲಾಗಿದೆ.