ಪ್ರತಿ ಸಂಬಂಧವೂ ಖುಷಿ, ಪ್ರೀತಿ ಮತ್ತು ಪರಸ್ಪರ ಗೌರವದ ಮೇರೆಗೆ ರೂಪುಗೊಳ್ಳಬೇಕು. ಆದರೆ ಕೆಲವೊಮ್ಮೆ ಸಂಬಂಧಗಳು ಹೊರಗಿನಿಂದ ನಾರ್ಮಲ್ ಕಾಣಿಸಿದರೂ ಒಳಗಿನಿಂದ ಮನಸ್ಸಿಗೆ ತೀವ್ರವಾದ ಹಾನಿ ಮಾಡಬಹುದು. ಇದನ್ನು ‘Toxic” ಸಂಬಂಧ ಎಂದು ಕರೆಯುತ್ತಾರೆ. ಇಂಥ ಸಂಬಂಧಗಳು ನಿಮ್ಮ ಆತ್ಮವಿಶ್ವಾಸ, ಮನಶ್ಶಕ್ತಿ ಮತ್ತು ಭದ್ರತೆಗೆ ಹಾನಿ ಮಾಡುತ್ತವೆ.
ನಿರಂತರವಾಗಿ ಟೀಕೆ ಮಾಡುವುದು:
ನಿಮ್ಮ ಸಂಗಾತಿ ನಿಮ್ಮನ್ನು ಯಾವಾಗಲೂ ತಪ್ಪು ಎನ್ನುವುದು, ನಿಮಗೆ ಬೆಲೆ ಇಲ್ಲದಂತೆ ಮಾತನಾಡುವುದು ಸಂಬಂಧದಲ್ಲಿ ದೌರ್ಜನ್ಯದ ಸೂಚನೆಯಾಗಬಹುದು.
ಅಸಹನೆ ಮತ್ತು ಈರ್ಷೆ:
ಪ್ರತಿ ಸಣ್ಣ ವಿಷಯಕ್ಕೂ ಅನುಮಾನಿಸುವುದು, ನಿಮ್ಮ ಮೇಲೆ ನಂಬಿಕೆ ಇಲ್ಲದಿರುವುದು, ಈರ್ಷೆಯಿಂದ ವರ್ತಿಸುವುದು ವಿಷಕಾರಿ ಸಂಬಂಧದ ಸ್ಪಷ್ಟ ಲಕ್ಷಣ.
ನಿಮ್ಮ ಮೇಲೆ ನಿಯಂತ್ರಣ ಹಾಕುವುದು:
ನೀವು ಯಾರೊಂದಿಗೆ ಮಾತನಾಡಬೇಕು, ಏನು ಧರಿಸಬೇಕು, ಎಲ್ಲಿಗೆ ಹೋಗಬೇಕು ಎನ್ನುವದರಲ್ಲಿ ಹಸ್ತಕ್ಷೇಪ ಮಾಡುವುದು ನಿಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ.
ಸಂಗಾತಿಯೊಂದಿಗೆ ಮಾತನಾಡಲು ಭಯ
ನೀವು ನಿಮ್ಮ ಭಾವನೆಗಳನ್ನು ಹೇಳಲು ಹೆದರುವುದಾದರೆ, ಅಥವಾ ಏನಾದರೂ ಹೇಳಿದರೆ ಸಂಬಂಧ ಕೆಡುತ್ತದೆ ಎಂಬ ಭಯ ಇರುತ್ತದೆ ಎಂದರೆ ಇದು ಪ್ರೀತಿಯಲ್ಲ.
ಮನಸ್ಸು ಸದಾ ಬೇಜಾರಾಗಿರುವುದು:
ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಕಾಲ ಕಳೆದರೂ, ಸಂತೋಷವಿವಿಲ್ಲದೆ ಇರುವುದು, ಖಿನ್ನತೆ ಇದು ಆರೋಗ್ಯಕರ ಸಂಬಂಧದ ಲಕ್ಷಣವಲ್ಲ.
ಈ ಲಕ್ಷಣಗಳು ನಿಮ್ಮ ಜೀವನದಲ್ಲಿ ಗೋಚರಿಸುತ್ತಿದ್ದರೆ, ದಯವಿಟ್ಟು ನಿರ್ಲಕ್ಷಿಸಬೇಡಿ. ನಿಮ್ಮ Mentall health ಬಹುಮುಖ್ಯವಾದದ್ದು. ವೃತ್ತಿಪರ ಸಲಹೆ ಅಥವಾ ಆಪ್ತರ ಬೆಂಬಲ ಪಡೆದು ಮುಂದಿನ ಹೆಜ್ಜೆ ಇಡಿ.