ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾ ಅಮೆರಿಕದ ಮೇಲೆ ಶೇ.34 ರಷ್ಟು ಪ್ರತೀಕಾರದ ಸುಂಕವನ್ನು ವಿಧಿಸಿದ್ದು, ಹೊಸ ಸುಂಕವು ಏಪ್ರಿಲ್ 10 ರಿಂದ ಜಾರಿಗೆ ಬರಲಿದೆ ಎಂದು ಚೀನಾ ಘೋಷಿಸಿದೆ.
ಎರಡು ದಿನಗಳ ಮೊದಲು, ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಪಂಚದಾದ್ಯಂತ ಟಿಟ್ ಫಾರ್ ಟಾಟ್ ಸುಂಕವನ್ನು ವಿಧಿಸಿದ್ದು, ಇದರಲ್ಲಿ, ಚೀನಾದ ಮೇಲೆ ಹೆಚ್ಚುವರಿಯಾಗಿ ಶೇ.34 ರಷ್ಟು ಸುಂಕವನ್ನು ವಿಧಿಸಲಾಯಿಗಿತ್ತು. ಈಗ ಚೀನಾ ಅಮೆರಿಕದ ಮೇಲೂ ಅದೇ ಸುಂಕವನ್ನು ವಿಧಿಸಿದೆ.
ಅಮೆರಿಕದ ತೆರಿಗೆ ಹೆಚ್ಚಳದ ಕ್ರಮವು ಅಂತಾರಾಷ್ಟ್ರೀಯ ವ್ಯಾಪಾರ ನಿಯಮಗಳನ್ನು ಉಲ್ಲಂಘಿಸುತ್ತದೆ. ಇದು ಚೀನಾದ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳಿಗೆ ಹಾನಿ ಮಾಡುತ್ತಿದೆ ಎಂದಿದೆ.