ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರನ್ನು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ವತಿಯಿಂದ ಶನಿವಾರ ಆತ್ಮೀಯವಾಗಿ ಅಭಿನಂದಿಸಲಾಯಿತು.
ಸಾಂಪ್ರದಾಯಿಕ ಶೈಲಿಯಲ್ಲಿ ಮುಟ್ಟಾಳೆ ತೊಡಿಸಿ, ಫಲಪುಷ್ಪ, ಶಾಲು, ಸ್ಮರಣಿಕೆ ಹಾಗೂ ಹಲಸಿನ ಸಸಿಯನ್ನು ನೀಡಿ ಡಾ.ಕುಮಾರ್ ಅವರನ್ನು ಎನ್‌ಇಸಿಫ್ ತಂಡ ಅಭಿನಂದಿಸಿತು. ಈ ಸಂದರ್ಭ ಎನ್‌ಇಸಿಎಫ್‌ನ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ, ಪ್ರಮುಖರಾದ ಭುವನ್ ದೇವಾಡಿಗ, ಅನಿಲ್ ಪಿಂಟೋ, ನಾರಾಯಣ ಬಂಗೇರ,
ದಿನೇಶ್ ಹೊಳ್ಳ, ಸ್ವರ್ಣ ಸುಂದರ್ ಮತ್ತಿತರರು ಉಪಸ್ಥಿತರಿದ್ದರು.