ಶ್ರೀರಂಗಪಟ್ಟಣದ ಲಾರ್ಡ್ ವೆಲ್ಲೆಸ್ಲಿ ಸೇತುವೆ ಮೇಲಿನ ಸಂಚಾರಕ್ಕೆ ನಿರ್ಬಂಧ

ಹೊಸ ದಿಗಂತ ವರದಿ, ಮಂಡ್ಯ :

ಕೃಷ್ಣರಾಜಸಾಗರ ಜಲಾಶಯದಿಂದ 1,30 ಲಕ್ಷ ಕ್ಯೂಸೆಕ್ಸ್‌ ನೀರನ್ನು ಹೊರಬಿಡುತ್ತಿರುವ ಕಾರಣ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿರುವುದರ ಜೊತೆಗೆ ಶ್ರೀರಂಗಪಟ್ಟಣದ ಲಾರ್ಡ್ ವೆಲ್ಲೆಸ್ಲಿ ಸೇತುವೆ ಮೇಲಿನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ನದಿಯಲ್ಲಿ ಕಾವೇರಿ ನೀರು ಹೆಚ್ಚಾಗಿದ್ದು, ವೆಲ್ಲೆಸ್ಲಿ ಸೇತುವೆ ಮುಳುಗುವ ಹಂತಕ್ಕೆ ತಲುಪಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೇತುವೆ ಮೇಲೆ ವಾಹನಗಳ ಸಂಚಾರವನ್ನು ನಿಷೇದಿಸಿ ತಹಸೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಈ ಕಾಂಗ್ರೆಸ್ ಸರಕಾರ ಈ ಜೀತಪದ್ದತಿಯ ಬ್ರಿಟಿಷ್ ವಸಾಹತುಶಾಹಿ ಹೆಸರುಗಳನ್ನೇಕೆ ಬದಲಾಯಿಸುವ ಆಸಕ್ತಿ,
    ಧೈರ್ಯ ತೋರಬಾರದು.

LEAVE A REPLY

Please enter your comment!
Please enter your name here

error: Content is protected !!