ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಥಾಣೆಯಲ್ಲಿ ರೈಲಿನಿಂದ ಇಳಿಯುವಾಗ ತಾಯಿಯ ಕೈಯಿಂದ ಮಗು ಜಾರಿ ಮೋರಿಗೆ ಬಿದ್ದು ಮೃತಪಟ್ಟಿದೆ.
ಠಾಕುರ್ಲಿ ಮತ್ತು ಕಲ್ಯಾಣ್ ರೈಲು ನಿಲ್ದಾಣಗಳ ನಡುವೆ ದುರಂತ ಸಂಭವಿಸಿದೆ, ತಾಯಿ ಮಗು ರೈಲು ಇಳಿದು ಹತ್ತಿರದ ಮೆಟ್ರೋಗೆ ತೆರಳುವ ಯೋಜನೆಯಲ್ಲಿದ್ದರು. ತೀವ್ರ ಮಳೆಯಿಂದಾಗಿ ಮಹಿಳೆ ಕಾಲು ಜಾರಿ ಮಗು ಕೈಯಿಂದ ಸೀದ ಮೋರಿಗೆ ಬಿದ್ದು ಕೊಚ್ಚಿ ಹೋಗಿದೆ.
ಕಣ್ಣಾರೆ ಹೆತ್ತ ಕಂದ ಬಿದ್ದು ಹೋಗಿದ್ದನ್ನು ಕಂಡು ಆಘಾತದಲ್ಲಿದ್ದ ತಾಯಿ ಸಹಾಯಕ್ಕೆ ಎಲ್ಲರನ್ನೂ ಕೂಗಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಮಗು ಎಷ್ಟು ದೂರ ಹೋಗಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.