ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಿರ್ಮಾಣ ಹಂತದ ಮನೆಯ ಮೆಟ್ಟಿಲು ಕುಸಿದು ದಂಪತಿಗಳು ಸಾವನ್ನಪ್ಪಿರುವ ಘಟನೆ ರಾಯಚೂರಿನ ಯಲಘಟ್ಟ ಗ್ರಾಮದಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯಲಗಟ್ಟ ಗ್ರಾಮದ ದ್ಯಾವಪ್ಪ ಸೂಗೂರು (35) ಹಾಗೂ ಶಿವಮ್ಮ (33) ಸಾವನ್ನಪ್ಪಿದ್ದಾರೆ.
ಕಳೆದ ಕೆಲ ದಿನಗಳಿಂದ ದಂಪತಿ ಮನೆ ಕಟ್ಟುತ್ತಿದ್ದು, ಎಂದಿನಂತೆ ಇವತ್ತು ಮನೆಯ ಗೋಡೆ ಪ್ಲಾಸ್ಟರ್ ಕೆಲಸಕ್ಕೆ ದಂಪತಿ ಮುಂದಾಗಿದ್ದರು ಈ ವೇಳೆ ಏಕಾಏಕಿಯಾಗಿ ಮನೆಯ ಮೆಟ್ಟಿಲು ಕುಸಿದು ದಂಪತಿ ಸಾವಿಗೀಡಾಗಿದ್ದಾರೆ.



