ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ಕನ್ನಡದ ಅಯ್ಯನ ಮನೆ ವೆಬ್ ಸೀರೀಸ್ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಇದೀಗ ಮತ್ತೆ ಝೀ5ನಲ್ಲಿ ಹೊಸ ವೆಬ್ ಸೀರೀಸ್ ಆರಂಭವಾಗಲಿದೆ.
ಕನ್ನಡದಲ್ಲಿ ಹಲವು ಸದಭಿರುಚಿ ಸಿನಿಮಾಗಳನ್ನು ನೀಡಿದ ‘ಕೆಆರ್ಜಿ ಸ್ಟುಡಿಯೋಸ್’ ‘ಶೋಧ’ಕ್ಕೆ ಬಂಡವಾಳ ಹೂಡಿದೆ. ಸುನಿಲ್ ಮೈಸೂರು ಈ ವೆಬ್ ಸರಣಿಗೆ ನಿರ್ದೇಶನ ಮಾಡಿದ್ದಾರೆ.
ನಿರ್ದೇಶನದ ಜೊತೆಗೆ ನಟನೆಯಲ್ಲೂ ಗಮನ ಸೆಳೆದವರು ಪವನ್ ಕುಮಾರ್. ಈ ಮೊದಲು ಅವರು ‘ಪಂಚರಂಗಿ’, ‘ಗುಲ್ಟೂ’ ರೀತಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಈಗ ‘ಶೋಧ’ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಸಿರಿ ರವಿಕುಮಾರ್, ಸಪ್ತಮಿ ಗೌಡ ಮೊದಲಾದವರು ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.
KRG Studios is thrilled to enter the world of web series in collaboration with Kannada Z5. We proudly present our first web series, “Shodha,” starring Pawan Kumar, Arun Sagar, Siri Ravikumar, Anusha Ranganath, Diya Hegde, Ravi Hunsur, and special cameos by Sapthami Gowda. pic.twitter.com/ff2z4D6pT0
— KRG Studios (@KRG_Studios) August 13, 2025
ಪವನ್ ಕುಮಾರ್ ಅವರು ಪೊಲೀಸ್ ಠಾಣೆಗೆ ಬಂದು ಪತ್ನಿ ಕಳೆದು ಹೋಗಿದ್ದಾರೆ ಎಂದು ದೂರು ನೀಡುತ್ತಾರೆ. ಸಿರಿ ಅವರು ಪವನ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಸಿರಿ ಪತ್ನಿ ಎಂಬುದನ್ನು ಪವನ್ ಒಪ್ಪಿಕೊಳ್ಳುವುದೇ ಇಲ್ಲ. ಈ ಸರಣಿಯಲ್ಲಿ ಅರುಣ್ ಸಾಗರ್ ಪೊಲೀಸ್ ಪಾತ್ರ ಮಾಡಿದ್ದಾರೆ. ಆಗಸ್ಟ್ 22ರಿಂದ ಜೀ5 ಒಟಿಟಿಯಲ್ಲಿ ‘ಶೋಧ’ ವೆಬ್ ಸಿರೀಸ್ ವೀಕ್ಷಣೆಗೆ ಲಭ್ಯವಾಗಲಿದೆ.